Akshay Kumar: ಅಕ್ಷಯ್​ ಕುಮಾರ್​ ನಕಲಿ ಮೀಸೆಯೇ ‘ಸಾಮ್ರಾಟ್​ ಪೃಥ್ವಿರಾಜ್​’ ಸೋಲಿಗೆ ಕಾರಣ? ಹೊಸ ಆರೋಪ

Samrat Prithviraj: ಗಡಿಬಿಡಿಯಲ್ಲಿ ಸಿನಿಮಾ ಮಾಡುವುದು ಅಕ್ಷಯ್​ ಕುಮಾರ್ ಅವರ ಜಾಯಮಾನ. ಈ ರೀತಿ ಮಾಡಿದ್ದರಿಂದಲೇ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾದ ಗುಣಮಟ್ಟ ಕುಸಿಯಿತು ಎಂದು ಆರೋಪಿಸಲಾಗುತ್ತಿದೆ.

Akshay Kumar: ಅಕ್ಷಯ್​ ಕುಮಾರ್​ ನಕಲಿ ಮೀಸೆಯೇ ‘ಸಾಮ್ರಾಟ್​ ಪೃಥ್ವಿರಾಜ್​’ ಸೋಲಿಗೆ ಕಾರಣ? ಹೊಸ ಆರೋಪ
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Jun 24, 2022 | 12:37 PM

ಬಾಲಿವುಡ್​ ನಟ ಅಕ್ಷಯ್​ ಕುಮಾರ್ (Akshay Kumar)​ ಅವರ ಸಿನಿಮಾ ಮೇಲೆ ಬಂಡವಾಳ ಹೂಡಿದರೆ ಖಂಡಿತಾ ನಷ್ಟ ಆಗುವುದಿಲ್ಲ ಎಂಬ ಕಾಲ ಒಂದಿತ್ತು. ಆದರೆ ಇತ್ತೀಚೆಗೆ ಆ ಮಾತು ಸುಳ್ಳಾಗುತ್ತಿದೆ. ‘ಬಚ್ಚನ್​ ಪಾಂಡೆ’, ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಿಲ್ಲ. ಈ ಸಿನಿಮಾಗಳಿಗೆ ಬಹುಕೋಟಿ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಾದರೆ ಈ ಸೋಲಿಗೆ ಕಾರಣ ಯಾರು? ಈ ಬಗ್ಗೆ ಬಾಲಿವುಡ್​  (Bollywood) ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಹೊರಿಸುತ್ತ ಓಡಾಡುತ್ತಿರುವುದು ವರದಿ ಆಗಿದೆ. ಎಷ್ಟರಮಟ್ಟಿಗೆ ಎಂದರೆ, ಅಕ್ಷಯ್​ ಕುಮಾರ್​ ಅವರ ನಕಲಿ ಮೀಸೆಯೇ ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಸಿನಿಮಾದ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಅಕ್ಷಯ್​ ಕುಮಾರ್​ ಮಾಡಿದ ಕೆಲವು ತಪ್ಪುಗಳನ್ನು ಕೂಡ ಎತ್ತಿ ಹಿಡಿಯಲಾಗುತ್ತಿದೆ.

‘ಸಾಮ್ರಾಟ್​ ಪೃಥ್ವಿರಾಜ್​’ ಒಂದು ಐತಿಹಾಸಿಕ ಕಥಾಹಂದರದ ಸಿನಿಮಾ. ಇಂಥ ಸಿನಿಮಾ ಮಾಡುವಾಗ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಅಷ್ಟು ಸಮಯವನ್ನು ನೀಡಲು ಅಕ್ಷಯ್​ ಕುಮಾರ್​ ಸಿದ್ಧರಿರಲಿಲ್ಲ. ಏಕಕಾಲಕ್ಕೆ ಅವರು ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದದ್ದರಿಂದ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ಹೆಚ್ಚು ಸಮಯ ನೀಡಿಲ್ಲ ಎಂದು ಆರೋಪಿಸಲಾಗುತ್ತಿದೆ. ಪೃಥ್ವಿರಾಜ್​ ಪಾತ್ರಕ್ಕಾಗಿ ಅವರು ಅಸಲಿ ಮೀಸೆ ಬಿಡಲು ಕೂಡ ಸಿದ್ಧರಿರಲಿಲ್ಲ. ನಕಲಿ ಮೀಸೆ ಅಂಟಿಸಿಕೊಂಡು ಶೂಟಿಂಗ್​ ಮಾಡಿದರು. ಇದರಿಂದ ಸಿನಿಮಾದ ದೃಶ್ಯಗಳು ನ್ಯಾಚುರಲ್​ ಆಗಿ ಮೂಡಿಬಂದಿಲ್ಲ ಎಂದು ಚಿತ್ರತಂಡದವರೇ ಆರೋಪಿಸಿದ್ದಾರೆ ಎಂದು ಕೆಲವೆಡೆ ವರದಿ ಪ್ರಕಟ ಆಗಿದೆ.

ಗಡಿಬಿಡಿಯಲ್ಲಿ ಸಿನಿಮಾ ಮಾಡುವುದು ಅಕ್ಷಯ್​ ಕುಮಾರ್ ಅವರ ಜಾಯಮಾನ. ಆದರೆ ಈ ರೀತಿ ಮಾಡುವುದರಿಂದ ಸಿನಿಮಾದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕೆಲವೇ ದಿನಗಳ ಹಿಂದೆ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರದ ಒಂದು ಪೋಸ್ಟರ್​ ಅನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು. ಇನ್ನು, ಇತ್ತೀಚಿನ ದಿನಗಳಲ್ಲಿ ಅಕ್ಷಯ್​ ಕುಮಾರ್​ ಅವರು ರಿಯಲ್​ ಲೈಫ್​ನಲ್ಲಿ ಮಾಡಿಕೊಂಡ ಕೆಲವು ವಿವಾದಗಳು ಕೂಡ ಈ ಸಿನಿಮಾದ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್​ ಕುಮಾರ್​; ಇದು ಗುಟ್ಕಾ ಎಫೆಕ್ಟ್​ ಎಂದ ನೆಟ್ಟಿಗರು
Image
ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು
Image
ವಿಮಲ್​ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್​ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ
Image
ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

ಗುಟ್ಕಾ ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್ ನಟಿಸಿದ್ದರಿಂದ ಅನೇಕರ ಮನಸ್ಸಿಗೆ ಬೇಸರ ಆಯಿತು. ದೇವರಿಗೆ ಅಭಿಷೇಕ ಮಾಡಲು ಹಾಲು ಬಳಸಬೇಡಿ ಎಂದು ಅವರು ಹೇಳಿಕೆ ನೀಡಿದ್ದಕ್ಕೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಸಾರ್ವಜನಿಕ ಬದುಕಿನಲ್ಲಿ ಅಕ್ಷಯ್​ ಕುಮಾರ್​ ಅವರು ಒಂದು ವರ್ಗದ ಜನರಿಂದ ವಿರೋಧ ಕಟ್ಟಿಕೊಂಡಿದ್ದು ಕೂಡ ‘ಸಾಮ್ರಾಟ್​ ಪೃಥ್ವಿರಾಜ್​’ ಸೋಲಿಗೆ ಕಾರಣ ಆಗಿದೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ಇದನ್ನೂ ಓದಿ: ಆಗಸ್ಟ್​ 11ಕ್ಕೆ ಆಮಿರ್​ ಖಾನ್​ ವರ್ಸಸ್​ ಅಕ್ಷಯ್​ ಕುಮಾರ್​; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?

Akshay Kumar: ‘ಗುಟ್ಕಾ ತಿಂದರೂ ಅಕ್ಷಯ್​ ಕುಮಾರ್​ ಇಷ್ಟೊಂದು ಫಿಟ್​’: ಲೇವಡಿ ಮಾಡಿದ ನೆಟ್ಟಿಗರು

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ