AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?

ಸುಶಾಂತ್​ ರೀತಿಯೇ ಕಾರ್ತಿಕ್​ ಆರ್ಯನ್​ ಕೂಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಅವರ ಭವಿಷ್ಯದ ಬಗ್ಗೆ ಫ್ಯಾನ್ಸ್​ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?
ಕಾರ್ತಿಕ್​ ಆರ್ಯನ್​, ಕತ್ರಿನಾ ಕೈಫ್​
ಮದನ್​ ಕುಮಾರ್​
|

Updated on: May 30, 2021 | 12:38 PM

Share

ಬಾಲಿವುಡ್​ನಲ್ಲಿ ನಟ ಕಾರ್ತಿಕ್​ ಆರ್ಯನ್​ ಅವರು ಈಗತಾನೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಾನೊಬ್ಬ ಭರವಸೆಯ ನಟ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ‘ಪ್ಯಾರ್​ ಕೆ ಪಂಚನಾಮ’, ‘ಸೋನು ಕೆ ಟಿಟು ಕೆ ಸ್ವೀಟಿ’ ಮುಂತಾದ ಸಿನಿಮಾಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಆದರೆ ದೊಡ್ಡ ಮಂದಿಯ ಪ್ರಭಾವದಿಂದಾಗಿ ಅವರು ಈಗ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ಬಹುನಿರೀಕ್ಷಿತ ಸಿನಿಮಾಗಳಿಂದ ಅವರನ್ನು ಹೊರಹಾಕಲಾಗಿದೆ. ಈ ಎಲ್ಲ ಕಿರಿಕ್​ಗಳ ಜೊತೆಯಲ್ಲಿ ನಟಿ ಕತ್ರಿನಾ ಕೈಫ್​ ಹೆಸರು ಕೂಡ ಕೇಳಿಬರುತ್ತಿದೆ.

ಕರಣ್​ ಜೋಹರ್​ ನಿರ್ಮಾಣ ಮಾಡುತ್ತಿರುವ ‘ದೋಸ್ತಾನಾ 2’ ಸಿನಿಮಾದಿಂದ ಕಾರ್ತಿಕ್​ ಆರ್ಯನ್​ ಅವರನ್ನು ಹೊರದಬ್ಬಲಾಯಿತು. ಭವಿಷ್ಯದಲ್ಲಿ ಇನ್ನೆಂದೂ ತಾವು ಕಾರ್ತಿಕ್​ ಆರ್ಯನ್​ ಜೊತೆಗೆ ಕೆಲಸ ಮಾಡುವುದಿಲ್ಲ ಎಂದು ಕರಣ್​ ಜೋಹರ್ ಶಪಥ ಮಾಡಿದ್ದಾರೆ ಎಂದು ಕೂಡ ಸುದ್ದಿ ಆಗಿದೆ. ಅದರ ಬೆನ್ನಲ್ಲೇ ಶಾರುಖ್​ ಖಾನ್​ ನಿರ್ಮಾಣದ ಒಂದು ಸಿನಿಮಾದಿಂದಲೂ ಕಾರ್ತಿಕ್​ಗೆ ಗೇಟ್​ ಪಾಸ್​ ನೀಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಶಾರುಖ್​ ನಿರ್ಮಾಣದ ಆ ಸಿನಿಮಾಗೆ ಅಜಯ್​ ಬಹ್ಲ್​ ನಿರ್ದೇಶನ ಮಾಡುತ್ತಿದ್ದಾರೆ. ಕೆಲವು ವಿಚಾರಗಳಲ್ಲಿ ಚಿತ್ರತಂಡದ ಜೊತೆ ಕಾರ್ತಿಕ್​ಗೆ ಕಿರಿಕ್​ ಆಗಿದೆ. ಅಷ್ಟೇ ಅಲ್ಲದೇ ನಾಯಕಿ ಆಯ್ಕೆಯಲ್ಲಿಯೂ ಅಸಮಾಧಾನ ಭುಗಿಲೆದ್ದಿದೆ. ನಾಯಕಿಯಾಗಿ ಕತ್ರಿನಾ ಕೈಫ್​ ಆಯ್ಕೆ ಆಗಲಿ ಎಂಬುದು ಚಿತ್ರತಂಡದ ಅಭಿಪ್ರಾಯ. ಆದರೆ ಇದೊಂದು ರೊಮ್ಯಾಂಟಿಕ್​ ಲವ್​ಸ್ಟೋರಿ ಆಗಿರುವುದರಿಂದ ತಮ್ಮ ಜೊತೆ ಕತ್ರಿನಾ ನಟಿಸಿದರೆ ಅವರು ವಯಸ್ಸಿನಲ್ಲಿ ದೊಡ್ಡವರ ರೀತಿ ಕಾಣುತ್ತಾರೆ ಎಂಬುದು ಕಾರ್ತಿಕ್​ ತಕರಾರು. ಇದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಬಳಿಕ ಆ ಸಿನಿಮಾದಿಂದ ಕಾರ್ತಿಕ್​ ಅವರನ್ನು ಕೈ ಬಿಡಲಾಗಿದೆ ಎಂಬ ಗುಸಗುಸು ಹರಡಿದೆ.

ನಟ ಸುಶಾಂತ್​ ಸಿಂಗ್​ ರಜಪೂತ್​ ಕೂಡ ಇದೇ ರೀತಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು. ದೊಡ್ಡ ದೊಡ್ಡ ನಿರ್ಮಾಪಕರು ಅವರ ವಿರುದ್ಧ ಷಡ್ಯಂತ್ರ ನಡೆಸಿದರು ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ನಟಿ ಕಂಗನಾ ರಣಾವತ್​ ಅವರಂತೂ ಈ ವಿಚಾರವಾಗಿ ಕರಣ್​ ಜೋಹರ್​, ಮಹೇಶ್​ ಭಟ್​ ಮುಂತಾದವರ ವಿರುದ್ಧ ಹಲವು ಬಾರಿ ಗುಡುಗಿದ್ದಾರೆ. ಈಗ ಕಾರ್ತಿಕ್​ ಆರ್ಯನ್​ ಕೂಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳನ್ನು ಎದುರುಹಾಕಿಕೊಳ್ಳುತ್ತಿದ್ದಾರೆ. ಅವರ ಭವಿಷ್ಯದ ಬಗ್ಗೆ ಫ್ಯಾನ್ಸ್​ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು