AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕ್ಕು ನಗಿಸುವ ಕಪಿಲ್​ ಶರ್ಮಾ ಶೋಗೆ ಹೊಸ ಟ್ವಿಸ್ಟ್​; ಯಾವಾಗಿಂದ ಶುರು ಆಗಲಿದೆ ನಗೆ ಹಬ್ಬ?

The Kapil Sharma Show: ಜುಲೈ ವೇಳೆಗೆ ವಾತಾವರಣ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಅದಕ್ಕೂ ಮುನ್ನವೇ ‘ದಿ ಕಪಿಲ್​ ಶರ್ಮಾ ಶೋ’ ಎರಡನೇ ಸೀಸನ್​ಗೆ ತೆರೆ ಹಿಂದಿನ ಸಿದ್ಧತೆಗಳು ನಡೆಯುತ್ತಿವೆ. ಜುಲೈ ಮೊದಲ ವಾರದಲ್ಲಿ ಇದರ ಶೂಟಿಂಗ್​ ಆರಂಭ ಆಗುವ ನಿರೀಕ್ಷೆ ಇದೆ.

ನಕ್ಕು ನಗಿಸುವ ಕಪಿಲ್​ ಶರ್ಮಾ ಶೋಗೆ ಹೊಸ ಟ್ವಿಸ್ಟ್​; ಯಾವಾಗಿಂದ ಶುರು ಆಗಲಿದೆ ನಗೆ ಹಬ್ಬ?
ದಿ ಕಪಿಲ್ ಶರ್ಮಾ ಶೋ
ಮದನ್​ ಕುಮಾರ್​
|

Updated on: May 30, 2021 | 9:40 AM

Share

ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ನಗುವಿನ ನಳಪಾಕ ಬಡಿಸುವ ‘ದಿ ಕಪಿಲ್​ ಶರ್ಮಾ ಶೋ’ ಸಿಕ್ಕಾಪಟ್ಟೆ ಫೇಮಸ್​. ಹಾಸ್ಯ ಕಲಾವಿದ ಕಪಿಲ್​ ಶರ್ಮಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಈ ಕಾಮಿಡಿ ಕಾರ್ಯಕ್ರಮ 2021ರ ಫೆಬ್ರವರಿಯಲ್ಲಿ ಅಂತ್ಯವಾಗಿತ್ತು. ಮೊದಲ ಸೀಸನ್​ ಮುಗಿದ ಬಳಿಕ ಜನರು ಈ ಕಾರ್ಯಕ್ರಮವನ್ನು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದರು. ಬಳಿಕ ಲಾಕ್​ಡೌನ್​ ಕೂಡ ಜಾರಿ ಆಗಿದ್ದರಿಂದ ಎರಡನೇ ಸೀಸನ್​ ಆರಂಭಿಸುವುದು ತಡವಾಯ್ತು. ಈಗ ಕಪಿಲ್​ ಶರ್ಮಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಶೀಘ್ರದಲ್ಲೇ ಈ ಕಾರ್ಯಕ್ರಮದ 2ನೇ ಸೀಸನ್​ ಆರಂಭ ಆಗಲಿದೆ.

ಕೊವಿಡ್​ ಎರಡನೇ ಅಲೆ ಜೋರಾಗಿರುವುದರಿಂದ ಸದ್ಯ ಲಾಕ್​ಡೌನ್​ ಜಾರಿಯಲ್ಲಿದೆ. ಹಾಗಾಗಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿದೆ. ಆದರೆ ಜುಲೈ ವೇಳೆಗೆ ವಾತಾವರಣ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಅದಕ್ಕೂ ಮುನ್ನವೇ ‘ದಿ ಕಪಿಲ್​ ಶರ್ಮಾ ಶೋ’ ಎರಡನೇ ಸೀಸನ್​ಗೆ ತೆರೆ ಹಿಂದಿನ ಸಿದ್ಧತೆಗಳು ನಡೆಯುತ್ತಿವೆ. ಜುಲೈ ಮೊದಲ ವಾರದಲ್ಲಿ ಇದರ ಶೂಟಿಂಗ್​ ಆರಂಭ ಆಗುವ ನಿರೀಕ್ಷೆ ಇದೆ.

ಈಗಾಗಲೇ ಅನೇಕ ಕಾಮಿಡಿ ಕಲಾವಿದರು ‘ದಿ ಕಪಿಲ್​ ಶರ್ಮಾ ಶೋ’ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸಿದ್ದಾರೆ. ಕೃಷ್ಣ ಅಭಿಷೇಕ್​, ಕಿಕು ಶಾರದಾ, ಭಾರತಿ ಸಿಂಗ್​, ಸುಮನಾ ಚಕ್ರವರ್ತಿ, ಚಂದನ್​ ಪ್ರಭಾಕರ್​, ಅರ್ಚನಾ ಪುರಾನ್​ ಸಿಂಗ್​ ಜನಮನ ಗೆದ್ದಿದ್ದಾರೆ. ಇವರ ಜೊತೆಗೆ ಇನ್ನಷ್ಟು ಹೊಸ ಕಲಾವಿದರನ್ನು ಪರಿಚಯಿಸಲು ಕಪಿಲ್​ ಶರ್ಮಾ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅವರು ಈ ಹಿಂದೆಯೇ ಸುಳಿವು ನೀಡಿದ್ದರು.

ಇಷ್ಟೇ ಅಲ್ಲದೆ, ಈ ಬಾರಿ ಹೊಸ ಸೀಸನ್​ನಲ್ಲಿ ಈ ಕಾರ್ಯಕ್ರಮದ ಫಾರ್ಮ್ಯಾಟ್​ ಕೂಡ ಬದಲಾಗಲಿದೆ ಎಂಬ ಮಾಹಿತಿ ಹಬ್ಬಿದೆ. ಹಾಗಾಗಿ ‘ದಿ ಕಪಿಲ್​ ಶರ್ಮಾ ಶೋ’ ಎರಡನೇ ಸೀಸನ್​ ಬಗ್ಗೆ ಭಾರಿ ಕುತೂಹಲ ನಿರ್ಮಾಣ ಆಗಿದೆ. ಸೋನಿ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗಲಿದೆ. ಕೊವಿಡ್​ ಕಷ್ಟದ ಸಂದರ್ಭದಲ್ಲಿ ನಟ ಕಪಿಲ್​ ಶರ್ಮಾ ಅವರು ಕರ್ನಾಟಕದ ಅನೇಕ ಆಸ್ಪತ್ರೆಗಳಿಗೆ ಆಕ್ಸಿಜನ್​ ಬಸ್​ಗಳನ್ನು ನೀಡಿದ್ದಾರೆ. ಆ ಮೂಲಕವೂ ಅವರು ಜನರ ಮನ ಗೆದ್ದಿದ್ದಾರೆ.

ಇದನ್ನೂ ಓದಿ:

ಬಾಲಿವುಡ್ ನಟರಾದ ಭೂಮಿ ಪಡ್ನೇಕರ್, ಕಪಿಲ್ ಶರ್ಮಾ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ

ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್