ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?

ಸಾರಾ ಅಲಿ ಖಾನ್ ಹಾಗೂ ಸಲ್ಮಾನ್​ ಖಾನ್ ಇತ್ತೀಚೆಗೆ ಐಐಎಫ್​ಎ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದು ಅಬುಧಾಬಿಯಲ್ಲಿ ನಡೆದಿತ್ತು. ಈ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?
ಸಲ್ಮಾನ್​-ಸಾರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 24, 2022 | 10:07 PM

ಸಲ್ಮಾನ್ ಖಾನ್​ಗೆ (Salman Khan) 56 ವರ್ಷ ಆಗಿದೆ. ಈ ವಯಸ್ಸಿನಲ್ಲೂ ಅವರು ಯುವಕರನ್ನು ನಾಚಿಸುವಂತಿದ್ದಾರೆ. ನಿತ್ಯ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಇಷ್ಟು ವಯಸ್ಸಾಗಿದ್ದರೂ ಅವರಿಗೆ ಯಾರೊಬ್ಬರೂ ಅಂಕಲ್ ಎಂದು ಕರೆಯುವ ಸಾಹಸ ಮಾಡಿಲ್ಲ. ಆದರೆ, ಈಗ ಸಲ್ಮಾನ್ ಖಾನ್​ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan)​ ಅಂಕಲ್ ಎಂದು ಕರೆದಿದ್ದಾರೆ. ಸಲ್ಮಾನ್ ಖಾನ್ ಅವರು ಸಾರಾಗೆ ಫನ್ನಿ ಆಗಿಯೇ ಉತ್ತರ ನೀಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಸಾರಾ ಅಲಿ ಖಾನ್ ಹಾಗೂ ಸಲ್ಮಾನ್​ ಖಾನ್ ಇತ್ತೀಚೆಗೆ ಐಐಎಫ್​ಎ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದು ಅಬುಧಾಬಿಯಲ್ಲಿ ನಡೆದಿತ್ತು. ಈ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಕಲರ್ಸ್ ವಾಹಿನಿ ಹಲವು ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಅದರಲ್ಲಿ ಸಲ್ಮಾನ್ ಹಾಗೂ ಸಾರಾ ನಡುವಿನ ಫನ್ನಿ ಸಂಭಾಷಣೆ ಕೂಡ ಒಂದು.

ಸಲ್ಮಾನ್ ಖಾನ್​  ಎದುರು ನಿಂತ ಸಾರಾ ‘ನಾನು ಒಂದು ಬ್ರ್ಯಾಂಡ್ ಆರಂಭಿಸುತ್ತಿದ್ದೇನೆ’ ಎಂದಿದ್ದಾರೆ. ಈ ವೇಳೆ ಸಲ್ಮಾನ್ ಅಂಕಲ್ ಎಂದು ಕರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಸಲ್ಮಾನ್ ಖಾನ್ ‘ನನ್ನ ಜತೆ ಹೀರೋಯಿನ್ ಆಗಿ ನಟಿಸುವ ಅವಕಾಶವನ್ನು ನೀವು ಕಳೆದುಕೊಂಡಿರಿ’ ಎಂದರು. ಈ ವೇಳೆ ಎಲ್ಲರೂ ನಕ್ಕಿದ್ದಾರೆ.

‘ಐಐಎಫ್​ಎ ಅವಾರ್ಡ್ಸ್​ 2022 ಕಾರ್ಯಕ್ರಮ’ ಅಬುಧಾಬಿಯಲ್ಲಿ ನಡೆಯಿತು. ಜೂನ್​ 25ರಂದು ಕಾರ್ಯಕ್ರಮ ಕಲರ್ಸ್​ನಲ್ಲಿ ಪ್ರಸಾರವಾಗಲಿದೆ. ಸಾರಾ ಈ ಬಾರಿಯ ಐಐಎಫ್​​ಎ ಕಾರ್ಯಕ್ರಮದಲ್ಲಿ ಪರ್ಫಾರ್ಮ್ ಮಾಡಿದ್ದಾರೆ. ಈ ಮೊದಲು ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು.

View this post on Instagram

A post shared by ColorsTV (@colorstv)

ಸಲ್ಮಾನ್ ಖಾನ್ ಸದ್ಯ, ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಮುಂದಿನ ಶೆಡ್ಯೂಲ್ ಮುಂಬೈನಲ್ಲಿ ನಡೆಯಲಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಸಾಕಷ್ಟು ಟಾಲಿವುಡ್ ಸ್ಟಾರ್​ಗಳನ್ನು ಭೇಟಿ ಆಗುತ್ತಿದ್ದಾರೆ. ರಾಮ್​ ಚರಣ್​ ಅವರು ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾ ಸೆಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸಿನಿಮಾ ಆಫರ್ ನೀಡಲಾಗಿತ್ತು ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಸಲ್ಮಾನ್ ಖಾನ್​ ಅವರು ವೈಯಕ್ತಿಕ ವಿಚಾರದಲ್ಲೂ ಇತ್ತೀಚೆಗೆ ಸುದ್ದಿ ಆಗಿದ್ದರು. ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ ಲಾರೆನ್ಸ್ ಬಿಷ್ಣೋಯ್ ಗುಂಪಿನವರು ಸಲ್ಲುಗೆ ಕೊಲೆ ಬೆದರಿಕೆ ವೊಡ್ಡಿದ್ದರು. ನಂತರ ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್​​​ಗೆ ಜೀವ ಬೆದರಿಕೆ ಪ್ರಕರಣ: ಗ್ಯಾಂಗ್​​ಸ್ಟರ್​​​ ಲಾರೆನ್ಸ್​​​​ ಬಿಷ್ಣೋಯ್​​​ ವಿಚಾರಣೆಗಾಗಿ ದೆಹಲಿಗೆ ಬಂದ ಮುಂಬೈ ಪೊಲೀಸ್

‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ; ಗಮನ ಸೆಳೆದ ಸಲ್ಮಾನ್ ಖಾನ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ