‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ; ಗಮನ ಸೆಳೆದ ಸಲ್ಮಾನ್ ಖಾನ್

‘ವಿಕ್ರಮ್​’ ಚಿತ್ರಕ್ಕೆ ಸಿಕ್ಕ ಯಶಸ್ಸು ತುಂಬಾನೇ ದೊಡ್ಡದು. ಈ ಚಿತ್ರದಿಂದ ಕಮಲ್ ಹಾಸನ್ ಸಖತ್ ಖುಷಿಯಾಗಿದ್ದಾರೆ. ಅವರಿಗೆ ಒಂದೊಳ್ಳೆಯ ಕಂಬ್ಯಾಕ್ ನೀಡಿದ್ದು ಮಾತ್ರವಲ್ಲದೆ, ಸಾಕಷ್ಟು ಲಾಭ ತಂದುಕೊಡುತ್ತಿದೆ ಈ ಚಿತ್ರ.

‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ; ಗಮನ ಸೆಳೆದ ಸಲ್ಮಾನ್ ಖಾನ್
‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ
TV9kannada Web Team

| Edited By: Rajesh Duggumane

Jun 12, 2022 | 9:45 PM

ಕಮಲ್ ಹಾಸನ್ (Kamal haasan) ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ವಿಶ್ವ ಬಾಕ್ಸ್ ಆಫೀಸ್​ನಲ್ಲಿ 231 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದಿಂದ ಕಮಲ್ ಹಾಸನ್ ಅವರು ಒಂದೊಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ‘ವಿಕ್ರಮ್​’ ಗೆಲುವಿನ ಹಿನ್ನೆಲೆಯಲ್ಲಿ ಶನಿವಾರ (ಜೂನ್ 11) ತೆಲುಗು ಸ್ಟಾರ್ ನಟ ಚಿರಂಜೀವಿ ಅವರು (Chiranjeevi) ತಮ್ಮ ಮನೆಯಲ್ಲಿ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್​ ಸ್ಟಾರ್ ನಟ ಸಲ್ಮಾನ್ ಖಾನ್ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅವರು ಈ ಪಾರ್ಟಿಯ ಹೈಲೈಟ್ ಆಗಿದ್ದರು.

‘ವಿಕ್ರಮ್​’ ಚಿತ್ರಕ್ಕೆ ಸಿಕ್ಕ ಯಶಸ್ಸು ತುಂಬಾನೇ ದೊಡ್ಡದು. ಈ ಚಿತ್ರದಿಂದ ಕಮಲ್ ಹಾಸನ್ ಸಖತ್ ಖುಷಿಯಾಗಿದ್ದಾರೆ. ಅವರಿಗೆ ಒಂದೊಳ್ಳೆಯ ಕಂಬ್ಯಾಕ್ ನೀಡಿದ್ದು ಮಾತ್ರವಲ್ಲದೆ, ಸಾಕಷ್ಟು ಲಾಭ ತಂದುಕೊಡುತ್ತಿದೆ ಈ ಚಿತ್ರ. ಈ ಚಿತ್ರದ ಯಶಸ್ಸನ್ನು ಸೆಲಬ್ರೇಟ್ ಮಾಡಲು ಚಿರಂಜೀವಿ ಅವರು ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಕಮಲ್, ಚಿರಂಜೀವಿ, ಸಲ್ಮಾನ್​ ಹಾಗೂ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್​ ಭಾಗಿ ಆಗಿದ್ದರು. ಎಲ್ಲರೂ ಹೂವಿನ ಗುಚ್ಚ ಹಿಡಿದುಕೊಂಡಿದ್ದಾರೆ.

ಚಿರಂಜೀವಿ ಅವರು ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಪ್ರೀತಿಯ ಗೆಳೆಯ ಕಮಲ್ ಹಾಸನ್​ ಅವರ ಯಶಸ್ಸನ್ನು ಸೆಲೆಬ್ರೇಟ್ ಮಾಡೋಕೆ ನಿಜಕ್ಕೂ ಖುಷಿ ಆಗುತ್ತಿದೆ. ಸಲ್ಲು ಭಾಯ್​, ಲೋಕೇಶ್ ಕನಗರಾಜ್ ಹಾಗೂ ತಂಡ ನಮ್ಮ ಜತೆ ಇರುವುದಕ್ಕೆ ಖುಷಿ ಇದೆ. ಎಂತಹ ಅದ್ಭುತ ಸಿನಿಮಾ’ ಎಂದು ಅವರು ಬರೆದುಕೊಂಡಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಕ್ಕೆ ಸಖತ್ ಖುಷಿಯಾಗಿದ್ದಾರೆ. ಅವರು ಟ್ವಿಟರ್​ನಲ್ಲಿ ಈ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.

‘ವಿಕ್ರಮ್’ ಸಿನಿಮಾ ತಮಿಳುನಾಡಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮೊದಲ ಏಳು ದಿನಗಳಲ್ಲಿ ಈ ಚಿತ್ರ 77 ಕೋಟಿ ರೂಪಾಯಿ ಗಳಿಸಿತ್ತು. ಈ ವೀಕೆಂಡ್​ನಲ್ಲೂ ಸಿನಿಮಾವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಶುಕ್ರವಾರ (ಜೂನ್ 10) 6.12 ಕೋಟಿ ರೂಪಾಯಿ ಹಾಗೂ ಶನಿವಾರ (ಜೂನ್​ 11) 7.80 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 90.97 ಕೋಟಿ ರೂಪಾಯಿ ಆಗಿದೆ. ಇಂದು (ಜೂನ್ 13) ಭಾನುವಾರ ಆದ್ದರಿಂದ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada