Updated on: Jun 12, 2022 | 6:40 PM
ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ಮಾರ್ಚ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಮಗು ಜನಿಸಿ ಎರಡು ತಿಂಗಳ ಮೇಲಾಗಿದೆ. ಇಲ್ಲಿಯವರೆಗೆ ಅವರು ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ.
ಈಗ ಇದೇ ಮೊದಲ ಬಾರಿಗೆ ಅವರು ಅವಳಿ ಮಕ್ಕಳ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಆದರೆ, ಈ ಫೋಟೋ ನೋಡಿ ಕೆಲ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.
ಮಗು ಜನಿಸಿದ ನಂತರ ಅವರ ಮುಖವನ್ನು ತೋರಿಸೋಕೆ ಕೆಲವರು ಹಿಂಜರಿಯುತ್ತಾರೆ. ಇದಕ್ಕೆ ನಾನಾ ರೀತಿಯ ಕಾರಣಗಳಿವೆ. ಅಮೂಲ್ಯ ಕೂಡ ಇದೇ ಸಾಲಿಗೆ ಸೇರುತ್ತಾರೆ.
ಅವರು ಮಕ್ಕಳ ಮುಖ ತೋರಿಸಿಲ್ಲ. ಬದಲಿಗೆ ಕಾಲುಗಳು ಕಾಣುವಂತೆ ಫೋಟೋ ಹಾಕಿದ್ದಾರೆ. ಇದು ಫ್ಯಾನ್ಸ್ ಬೇಸರಕ್ಕೆ ಮುಖ್ಯ ಕಾರಣ. ಅವಳಿ ಮಕ್ಕಳ ಮುಖ ತೋರಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.
‘ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು’ ಎಂದು ಈ ಮೊದಲು ಅಮುಲ್ಯಾ ಪತಿ ಜಗದೀಶ್ ಆರ್ ಚಂದ್ರ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಅವರಿಗೆ ಶುಭಾಶಯಹರಿದು ಬಂದಿತ್ತು.