Updated on: Jun 13, 2022 | 8:30 AM
ಹಲ್ಲು ಹುಳುಕಾದಾಗ ನೋವು ಕಾಣಿಸಿಕೊಳ್ಳುವುದು ಸಹಜ. ಹಲ್ಲು ವಿಪರೀತ ನೋವಾಗುತ್ತಿದ್ದರೆ ಲವಂಗ ಜಜ್ಜಿ ನೋವಾದ ಜಾಗಕ್ಕೆ ಇಡಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ.
ಸಾಮಾನ್ಯವಾಗಿ ಸಿಹಿ ತಿಂಡಿಗಳನ್ನ ಸೇವಿಸಿದಾಗ ಹಲ್ಲು ನೋವಾಗುತ್ತದೆ. ನೋವಾದಾಗ ಉಪ್ಪು ನೀರಿನಿಂದ (ಬಿಸಿ ನೀರು) ಬಾಯಿಯನ್ನು ಮುಕ್ಕಳಿಸಿ.
ಬೆಳ್ಳುಳ್ಳಿ ಕೂಡಾ ಹಲ್ಲು ನೋವಿಗೆ ರಾಮಬಾಣವಿದ್ದಂತೆ. ಒಂದು ಬೆಳ್ಳುಳ್ಳಿಯನ್ನು ಜಜ್ಜಿ ನೋವಾದ ಹಲ್ಲಿನ ಮೇಲೆ ಇಡಿ. ಹೀಗೆ ಮಾಡಿದರೆ ನೋವು ನಿವಾರಣೆಯಾಗುತ್ತದೆ.
ಶುಂಠಿ ಔಷಧಿ ಗುಣವನ್ನು ಹೊಂದಿದೆ. ಹಲ್ಲಿನ ನೋವಿಗೂ ಇದು ಹೆಚ್ಚು ಪ್ರಯೋಜನಕಾರಿ. ಶುಂಠಿಯನ್ನು ಜಜ್ಜಿ ಹತ್ತಿಯ ಸಹಾಯದಿಂದ ಹಲ್ಲಿನ ಮೇಲೆ ಇಡಿ.
ಗ್ರಾಮೀಣ ಭಾಗದಲ್ಲಿ ಕಿರಾತಕನ ಕಡ್ಡಿ ಸಿಗುತ್ತದೆ. ಅದನ್ನು ಚೆನ್ನಾಗಿ ಪೇಸ್ಟ್ ಮಾಡಿ ನೋವಾಗುವ ಜಾಗಕ್ಕೆ ಹಚ್ಚಿ.