Anupama Gowda: ‘ರಾಜಾ ರಾಣಿ 2’ ಶೋಗೆ ಅನುಪಮಾ ಗೌಡ ಯಾಕೆ ನಿರೂಪಕಿ ಆಗಿಲ್ಲ? ಫ್ಯಾನ್ಸ್ ಪ್ರಶ್ನೆಗೆ ನೇರ ಉತ್ತರ ನೀಡಿದ ನಟಿ

Anupama Gowda | Raja Rani 2: ‘ರಾಜಾ ರಾಣಿ 2’ ಕಾರ್ಯಕ್ರಮವನ್ನು ಅನುಪಮಾ ಗೌಡ ಯಾಕೆ ನಡೆಸಿಕೊಡುತ್ತಿಲ್ಲ ಎಂದು ಎಲ್ಲರೂ ಕೇಳ್ತಾ ಇದ್ದಾರೆ. ಇಷ್ಟು ದಿನ ಮೌನವಾಗಿದ್ದ ಅನುಪಮಾ ಈಗ ಪ್ರತಿಕ್ರಿಯೆ ನೀಡಿದ್ದಾರೆ.

Anupama Gowda: ‘ರಾಜಾ ರಾಣಿ 2’ ಶೋಗೆ ಅನುಪಮಾ ಗೌಡ ಯಾಕೆ ನಿರೂಪಕಿ ಆಗಿಲ್ಲ? ಫ್ಯಾನ್ಸ್ ಪ್ರಶ್ನೆಗೆ ನೇರ ಉತ್ತರ ನೀಡಿದ ನಟಿ
ಅನುಪಮಾ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Jun 13, 2022 | 7:30 AM

ಅದ್ದೂರಿಯಾಗಿ ‘ರಾಜಾ ರಾಣಿ 2’ (Raja Rani 2) ಶೋ ಆರಂಭ ಆಗಿದೆ. ರಿಯಲ್​ ಜೋಡಿಗಳು ಭಾಗವಹಿಸುವ ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಿದೆ. ಮೊದಲ ಸೀಸನ್​ನಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ಭಾಗವಹಿಸಿದ್ದರು. ಅದನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಅನುಪಮಾ ಗೌಡ. ಹೌದು, ಅನುಪಮಾ ಅವರ ನಿರೂಪಣೆಯಲ್ಲಿ ಮೊದಲ ಸೀಸನ್​ ಮೂಡಿಬಂದಿತ್ತು. ಕಲರ್ಸ್​ ಕನ್ನಡ (Colors Kannada) ವಾಹಿನಿಯಲ್ಲಿ ಜೂನ್​ 11ರಂದು 2ನೇ ಸೀಸನ್​ ಶುರುವಾಗಿದೆ. ಆದರೆ ಈ ಬಾರಿ ಅನುಪಮಾ ಗೌಡ (Anupama Gowda) ಅವರು ನಿರೂಪಕಿ ಆಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಷ್ಟಕ್ಕೂ ಅನುಪಮಾ ಯಾಕೆ ಆ್ಯಂಕರ್​ ಆಗಿಲ್ಲ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ಮತ್ತೆ ಅವರೇ ನಿರೂಪಕಿ ಆಗಬೇಕು ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಅನುಪಮಾ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಲೈವ್​ ಬಂದಿರುವ ಅನುಪಮಾ ಗೌಡ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಒಂದು ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂಬ ಕಾರಣದಿಂದಲೇ ನಾನು ಲೈವ್​ ಬಂದಿರುವುದು. ಎಲ್ಲರೂ ರಾಜಾ ರಾಣಿ ಬಗ್ಗೆ ಕೇಳ್ತಾ ಇದ್ದರು. ನಾನು ಮೌನವಾಗಿದ್ದೆ. ಎಲ್ಲರೂ ಕಮೆಂಟ್​ ಮತ್ತು ಮೆಸೇಜ್​ ಮೂಲಕ ಅದೇ ಪ್ರಶ್ನೇ ಕೇಳಿದ್ದರಿಂದ ಪ್ರತಿಕ್ರಿಯೆ ನೀಡಲೇಬೇಕು ಎಂದುಕೊಂಡು ಈ ಲೈವ್​ ಮಾಡುತ್ತಿದ್ದೇನೆ’ ಎಂದು ಅನುಪಮಾ ಗೌಡ ಮಾತು ಆರಂಭಿಸಿದ್ದಾರೆ.

ಇದನ್ನೂ ಓದಿ: Shwetha Chengappa: ‘ಜೋಡಿ ನಂ.1’ ಶೋಗೆ ಶ್ವೇತಾ ಚೆಂಗಪ್ಪ ನಿರೂಪಕಿ; ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ ಖ್ಯಾತ ನಟಿ

ಇದನ್ನೂ ಓದಿ
Image
Janvi Rayala: ‘ರಾಜಾ ರಾಣಿ 2’ ಶೋಗೆ ಹೊಸ ನಿರೂಪಕಿ; ವೇದಿಕೆಗೆ ಎಂಟ್ರಿ ಕೊಟ್ಟ ಜಾನ್ವಿ ರಾಯಲ ಬಗ್ಗೆ ನಿಮಗೆಷ್ಟು ಗೊತ್ತು?
Image
ನೀಳ ತಲೆಗೂದಲನ್ನು ಕತ್ತರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ; ಇದಕ್ಕಿದೆ ಮಹತ್ತರ ಕಾರಣ
Image
‘ನನ್ನಮ್ಮ ಸೂಪರ್ ಸ್ಟಾರ್​ ಜಡ್ಜ್​​ಗಳಿಗೆ ಸೃಜನ್ ಲೋಕೇಶ್​​ ವಿಶೇಷ ಗಿಫ್ಟ್’; ಗಳಗಳನೆ ಅತ್ತ ಅನುಪಮಾ ಗೌಡ​
Image
ಅನುಪಮಾ ಮದುವೆ ಬಗ್ಗೆ ವೇದಿಕೆ ಮೇಲೆ ತಾರಾ ಮಾತು; ‘ಬೇಡ ತಾರಮ್ಮ..’ ಎಂದು ಮನವಿ ಮಾಡಿದ್ದೇಕೆ ಈ ನಟಿ?

‘ನಾನು ಬೇರೆ ಬೇರೆ ಚಾನೆಲ್​ಗಳ ಶೋ ಮಾಡುತ್ತಿದ್ದೇನೆ ಅಂತ ಕೆಲವರು ಕೇಳಿದ್ದಾರೆ. ಆದರೆ ನಾನು ಖಂಡಿತವಾಗಿಯೂ ಆ ಥರ ಯಾವುದೇ ಶೋ ಮಾಡುತ್ತಿಲ್ಲ. ರಾಜಾ ರಾಣಿ ಕಾರ್ಯಕ್ರಮಕ್ಕೆ ನಾನು ಯಾಕೆ ನಿರೂಪಣೆ ಮಾಡುತ್ತಿಲ್ಲ ಎಂಬುದು ನನಗೂ ಗೊತ್ತಿಲ್ಲ. ವೈಯಕ್ತಿಕವಾಗಿ ನಾನು ಬೇರೆ ಬೇರೆ ವಿಚಾರಗಳಲ್ಲಿ ಬ್ಯುಸಿ ಇದ್ದೆ. ಹೇಳ್ತಾ ಹೋದ್ರೆ ಲಿಸ್ಟ್​ ತುಂಬ ಇದೆ. ‘ರಾಜಾ ರಾಣಿ’ ಕಾರ್ಯಕ್ರಮದಿಂದ ನಾನಾಗಿಯೇ ಹೊರಬಂದಿಲ್ಲ. ಕಾಲ್​ ಬಂದಿದ್ದರೆ ಖಂಡಿತವಾಗಿಯೂ ನಾನು ಇಷ್ಟಪಟ್ಟು ನಿರೂಪಣೆ ಮಾಡುತ್ತಿದ್ದೆ. ಅದು ಬಿಟ್ರೆ ಬೇರೆ ಏನೂ ದೊಡ್ಡ ವಿಚಾರ ಇಲ್ಲ. ಇನ್ನೊಂದಷ್ಟು ವಿಚಾರಗಳ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಇಲ್ಲಿ ಅವುಗಳನ್ನು ಮಾತನಾಡುವುದು ಸರಿಯಲ್ಲ ಎನಿಸುತ್ತದೆ’ ಎಂದು ಅನುಪಮಾ ಹೇಳಿದ್ದಾರೆ.

ಇದನ್ನೂ ಓದಿ: ಅನುಪಮಾ ಗೌಡ ಸುಂದರ ಫೋಟೋಗಳು

‘ನಿಮಗೆ ನಿರಾಸೆ ಆಗಿದೆ ಅಂತ ನನಗೆ ಅರ್ಥ ಆಗಿದೆ. ಅದಕ್ಕಾಗಿ ಕ್ಷಮಿಸಿ. ನೀವೆಲ್ಲರೂ ಎಷ್ಟು ಮಿಸ್​ ಮಾಡಿಕೊಳ್ಳುತ್ತೀರೋ ನಾನು ಕೂಡ ಆ ಕಾರ್ಯಕ್ರಮವನ್ನು ಅಷ್ಟೇ ಮಿಸ್​ ಮಾಡಿಕೊಳ್ಳುತ್ತೇನೆ. ಇದಕ್ಕಿಂತ ಉತ್ತಮ ಶೋ ಮೂಲಕ ಬರುತ್ತೇನೆ’ ಎಂದು ಅಭಿಮಾನಿಗಳಿಗೆ ಅನುಪಮಾ ಗೌಡ ಭರವಸೆ ನೀಡಿದ್ದಾರೆ. ಈ ಹಿಂದೆ ‘ಮಜಾ ಭಾರತ’ ಮತ್ತು ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮವನ್ನು ಕೂಡ ಅವರು ನಿರೂಪಣೆ ಮಾಡಿದ್ದರು. ಒಂದಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ ಅನುಭವ ಕೂಡ ಅವರಿಗೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ