Janvi Rayala: ‘ರಾಜಾ ರಾಣಿ 2’ ಶೋಗೆ ಹೊಸ ನಿರೂಪಕಿ; ವೇದಿಕೆಗೆ ಎಂಟ್ರಿ ಕೊಟ್ಟ ಜಾನ್ವಿ ರಾಯಲ ಬಗ್ಗೆ ನಿಮಗೆಷ್ಟು ಗೊತ್ತು?

Raja Rani 2: ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ‘ರಾಜಾ ರಾಣಿ 2’ ಕಾರ್ಯಕ್ರಮ ಆರಂಭ ಆಗಿದೆ. ಈ ಶೋಗೆ ನಟಿ ಜಾನ್ವಿ ರಾಯಲ ಅವರು ನಿರೂಪಕಿಯಾಗಿದ್ದಾರೆ.

Janvi Rayala: ‘ರಾಜಾ ರಾಣಿ 2’ ಶೋಗೆ ಹೊಸ ನಿರೂಪಕಿ; ವೇದಿಕೆಗೆ ಎಂಟ್ರಿ ಕೊಟ್ಟ ಜಾನ್ವಿ ರಾಯಲ ಬಗ್ಗೆ ನಿಮಗೆಷ್ಟು ಗೊತ್ತು?
ಜಾನ್ವಿ ರಾಯಲ
Follow us
TV9 Web
| Updated By: ಮದನ್​ ಕುಮಾರ್​

Updated on: Jun 12, 2022 | 9:21 AM

ರಿಯಲ್​ ಲೈಫ್​ ಜೋಡಿಗಳು ಭಾಗವಹಿಸಿದ್ದ ‘ರಾಜಾ ರಾಣಿ’ ಶೋ ಜನಪ್ರಿಯತೆ ಪಡೆದುಕೊಂಡಿತ್ತು. ಈಗ ಆ ಕಾರ್ಯಕ್ರಮದ ಎರಡನೇ ಸೀಸನ್​ ಆರಂಭ ಆಗಿದೆ. ‘ರಾಜಾ ರಾಣಿ 2’ (Raja Rani 2) ಬಗ್ಗೆ ಕಿರುತೆರೆ ಪ್ರೇಕ್ಷಕರಿಗೆ ತುಂಬ ನಿರೀಕ್ಷೆ ಇದೆ. ಮೊದಲ ಸೀಸನ್​ ಹಿಟ್​ ಆಗಿದ್ದರಿಂದ ಎರಡನೇ ಸೀಸನ್​ ಅನ್ನು ಇನ್ನಷ್ಟು ಚೆನ್ನಾಗಿ ಪ್ರಸ್ತುತಪಡಿಸಬೇಕಾದ ಚಾಲೆಂಜ್​ ಇದೆ. ‘ಕಲರ್ಸ್​ ಕನ್ನಡ’ (Anupama Gowda) ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಮೂಡಿಬರುತ್ತಿದೆ. ಜೂನ್​ 11ರಿಂದ ಕಾರ್ಯಕ್ರಮ ಆರಂಭ ಆಗಿದೆ. ಕಳೆದ ಬಾರಿ ಅನುಪಮಾ ಗೌಡ ಅವರು ನಿರೂಪಕಿ ಆಗಿದ್ದರು. ಕಾರಣಾಂತರಗಳಿಂದ ಈ ಬಾರಿ ಅವರು ನಿರೂಪಣೆ ಮಾಡುತ್ತಿಲ್ಲ. ಅವರ ಬದಲು ನಟಿ ಜಾನ್ವಿ ರಾಯಲ (Janvi Rayala) ಅವರು ಎಂಟ್ರಿ ನೀಡಿದ್ದಾರೆ. ‘ರಾಜಾ ರಾಣಿ 2’ ಶೋ ನಡೆಸಿಕೊಡುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ವಿಶೇಷ ಏನೆಂದರೆ, ಜಾನ್ವಿ ರಾಯಲ ಅವರು ರಿಯಲ್​ ಲೈಫ್​ನಲ್ಲಿ ಡಾಕ್ಟರ್​ ಕೂಡ ಹೌದು!

ದಂತ ವೈದ್ಯೆ ಆಗಿರುವ ಜಾನ್ವಿ ರಾಯಲ ಅವರಿಗೆ ನಟನೆ ಮೇಲೆ ಹೆಚ್ಚು ಆಸಕ್ತಿ. ಬಣ್ಣದ ಲೋಕದ ವಿವಿಧ ವಿಭಾಗಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಸಿನಿಮಾ ಮತ್ತು ಕಿರುಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ನಟಿಸಿದ ‘ಫೋರ್​ ವಾಲ್ಸ್​’ ಸಿನಿಮಾ ಈ ವರ್ಷ ತೆರೆಕಂಡಿತು. ಅದರಲ್ಲಿ ಖ್ಯಾತ ನಟ ಅಚ್ಯುತ್​ ಕುಮಾರ್​ ಜೊತೆ ಮಗಳ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವರು ಮೆಚ್ಚುಗೆ ಪಡೆದುಕೊಂಡರು. ಈ ಹಿಂದೆ ‘ಕಲರ್ಸ್​ ಕನ್ನಡ ಸಿನಿಮಾ’ ವಾಹಿನಿಯಲ್ಲಿ ಕೆಲವು ಸಂದರ್ಶನಗಳನ್ನು ಮಾಡಿದ ಅನುಭವ ಅವರಿಗೆ ಇದೆ. ಈಗ ‘ರಾಜಾ ರಾಣಿ 2’ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಜನರನ್ನು ರಂಜಿಸಲು ಬಂದಿದ್ದಾರೆ.

ಇದನ್ನೂ ಓದಿ
Image
Shwetha Chengappa: ‘ಜೋಡಿ ನಂ.1’ ಶೋಗೆ ಶ್ವೇತಾ ಚೆಂಗಪ್ಪ ನಿರೂಪಕಿ; ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ ಖ್ಯಾತ ನಟಿ
Image
‘ಬಿಗ್​ ಬಾಸ್​ ತೆಲುಗು ಸೀಸನ್​ 6’ ರಿಯಾಲಿಟಿ ಶೋಗೆ ನಿರೂಪಕಿ ಆಗ್ತಾರಾ ಸಮಂತಾ ರುತ್​ ಪ್ರಭು?
Image
ಅಪ್ಘಾನಿಸ್ತಾನ: ಟಿವಿ ನಿರೂಪಕಿಯರು ಮುಖ ಮುಚ್ಚಬೇಕು ಎಂದು ಆದೇಶಿಸಿದ ತಾಲಿಬಾನ್
Image
Anchor Anasuya: ನಿರೂಪಕಿ ಅನುಸೂಯ ಬಟ್ಟೆ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟ ಕೋಟ ಶ್ರೀನಿವಾಸ ರಾವ್​

ಜೂನ್​ 11ರಂದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ರಾಜಾ ರಾಣಿ 2’ ಕಾರ್ಯಕ್ರಮದ ಗ್ರ್ಯಾಂಡ್​ ಓಪನಿಂಗ್​ ಆಗಿದೆ. ಈ ಬಾರಿ ಕೂಡ ಜಡ್ಜ್​ ಸ್ಥಾನದಲ್ಲಿ ನಟಿ ತಾರಾ ಅನುರಾಧಾ ಮತ್ತು ಸೃಜನ್​ ಲೋಕೇಶ್​ ಮುಂದುವರಿದಿದ್ದಾರೆ. ಸೆಲೆಬ್ರಿಟಿ ಜೋಡಿಗಳಾದ ಶಾಲಿನಿ-ಧನರಾಜ್​, ವೀಣಾ-ಸುಂದರ್​, ಅರುಣ್​ ಮಾಧುರ್ಯಾ, ಸಂದೇಶ್​-ಮನೀಷಾ, ಕಾವ್ಯಾ-ಕುಮಾರ್​, ಸುಜಾತಾ-ಅಕ್ಷಯ್​, ರಾಜೀವ್​ ರೇಷ್ಮಾ, ಅಕ್ಷಿತಾ-ರಜತ್​, ನಿಷಿತಾ ಗೌಡ-ಪ್ರಸನ್ನ ಮುಂತಾದವರು ಭಾಗವಹಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ