Sign In

By signing in or creating an account, you agree with Associated Broadcasting Company's Terms & Conditions and Privacy Policy.

Shwetha Chengappa: ‘ಜೋಡಿ ನಂ.1’ ಶೋಗೆ ಶ್ವೇತಾ ಚೆಂಗಪ್ಪ ನಿರೂಪಕಿ; ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ ಖ್ಯಾತ ನಟಿ

Swetha Changappa: ‘ಜೋಡಿ ನಂ.1’ ಕಾರ್ಯಕ್ರಮ ನಿರೂಪಿಸುವ ಮೂಲಕ ಶ್ವೇತಾ ಚೆಂಗಪ್ಪ ಅವರು ಮನರಂಜನೆ ನೀಡಲಿದ್ದಾರೆ. ಈ ಶೋಗೆ ‘ನೆನಪಿರಲಿ’ ಪ್ರೇಮ್​ ಮತ್ತು ಮಾಳವಿಕಾ ಅವಿನಾಶ್​ ಜಡ್ಜ್​ ಆಗಿದ್ದಾರೆ.

Shwetha Chengappa: ‘ಜೋಡಿ ನಂ.1’ ಶೋಗೆ ಶ್ವೇತಾ ಚೆಂಗಪ್ಪ ನಿರೂಪಕಿ; ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ ಖ್ಯಾತ ನಟಿ
ಶ್ವೇತಾ ಚೆಂಗಪ್ಪ
Follow us
TV9 Web
| Updated By: ಮದನ್​ ಕುಮಾರ್​

Updated on: Jun 12, 2022 | 7:30 AM

ನಟಿ ಶ್ವೇತಾ ಚೆಂಗಪ್ಪ (Shwetha Chengappa) ಅವರಿಗೆ ಕಿರುತೆರೆಯಲ್ಲಿ ಸಖತ್​ ಬೇಡಿಕೆ ಇದೆ. ಧಾರಾವಾಹಿ ಲೋಕದಲ್ಲಿ ಅವರು ದಶಕಗಳ ಹಿಂದೆಯೇ ಮಿಂಚಿದರು. ‘ಕಾದಂಬರಿ’ ಸೀರಿಯಲ್​ ಮೂಲಕ ಅವರು ಪಡೆದಿದ್ದ ಜನಪ್ರಿಯತೆ ಅಪಾರ. ನಂತರ ಅವರು ನಿರೂಪಕಿ ಆಗಿಯೂ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದರು. ‘ಯಾರಿಗೆ ಯಾರುಂಟು’, ‘ಕುಣಿಯೋಣು ಬಾರಾ’ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಖ್ಯಾತಿ ಶ್ವೇತಾ ಚೆಂಗಪ್ಪ ಅವರಿಗೆ ಸಲ್ಲುತ್ತದೆ. ‘ಮಜಾ ಟಾಕೀಸ್​’ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕವೂ ಅವರು ಜನಮೆಚ್ಚುಗೆ ಗಳಿಸಿದರು. ಇತ್ತೀಚೆಗೆ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಿದ್ದ ಅವರು ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ‘ಜೋಡಿ ನಂ.1’ (Jodi No 1) ಶೋಗೆ ಅವರು ನಿರೂಪಕಿ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ರಿಯಾಲಿಟಿ ಶೋಗಳ ವಿಚಾರದಲ್ಲಿ ಕಿರುತೆರೆ ವಾಹಿನಿಗಳ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಹೊಸ ಹೊಸ ಶೋಗಳನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಜೂನ್​ 11ರಿಂದ ‘ಜೋಡಿ ನಂ.1’ ರಿಯಾಲಿಟಿ ಶೋ ಆರಂಭ ಆಗಿದೆ. ಈ ಕಾರ್ಯಕ್ರಮವನ್ನು ನಿರೂಪಿಸುವ ಜವಾಬ್ದಾರಿ ಶ್ವೇತಾ ಚೆಂಗಪ್ಪ ಅವರಿಗೆ ಸಿಕ್ಕಿದೆ. ಒಂದು ಗ್ಯಾಪ್​ ಬಳಿಕ ಮತ್ತೆ ಕಿರುತೆರೆಗೆ ಮರಳಿರುವುದಕ್ಕೆ ಅವರು ಎಗ್ಸೈಟ್​ ಆಗಿದ್ದಾರೆ.

ಇದನ್ನೂ ಓದಿ
Image
‘ರಾಜಾ-ರಾಣಿ ಸೀಸನ್​ 2’ ಗ್ರ್ಯಾಂಡ್​ ಓಪನಿಂಗ್​ಗೆ ದಿನಗಣನೆ; ಈ ಬಾರಿ ಇರಲಿದೆ ಇನ್ನಷ್ಟು ಮನರಂಜನೆ
Image
‘ಬಿಗ್​ ಬಾಸ್​ ತೆಲುಗು ಸೀಸನ್​ 6’ ರಿಯಾಲಿಟಿ ಶೋಗೆ ನಿರೂಪಕಿ ಆಗ್ತಾರಾ ಸಮಂತಾ ರುತ್​ ಪ್ರಭು?
Image
ಮುದ್ದು ಮಗ ಜಿಯಾನ್ ಜೊತೆ ಶ್ವೇತಾ ಚೆಂಗಪ್ಪ ಚಂದದ ಫೋಟೋಶೂಟ್​; ಕ್ಯೂಟ್​ ಫೋಟೋಗಳಿಗೆ ಫ್ಯಾನ್ಸ್​ ಫಿದಾ
Image
ಶ್ವೇತಾ ಚಂಗಪ್ಪ ಮನೆಯಲ್ಲಿ ರವಿಚಂದ್ರನ್​; ಮಜಾ ಟಾಕೀಸ್​ ರಾಣಿ ಮಗನ ಜತೆ ‘ಕ್ರೇಜಿ ಸ್ಟಾರ್​’ ವಿಡಿಯೋ ವೈರಲ್​

‘ಜೋಡಿ ನಂ.1’ ಕಾರ್ಯಕ್ರಮದ ಲಾಂಚಿಂಗ್​ ಎಪಿಸೋಡ್​ಗಳನ್ನು ಅದ್ದೂರಿಯಾಗಿ ಚಿತ್ರಸಲಾಗಿದೆ. ಕಲರ್​ಫುಲ್​ ಆದಂತಹ ವೇದಿಕೆಯಲ್ಲಿ ಮನಸೆಳೆಯುವ ಪರ್ಫಾರ್ಮೆನ್ಸ್​ ಮೂಲಕ ಈ ಶೋಗೆ ಚಾಲನೆ ನೀಡಲಾಗಿದೆ. ಪ್ರತಿ ವೀಕೆಂಡ್​ನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ತಮ್ಮ ಆಕರ್ಷಕ ನಿರೂಪಣೆಯ ಮೂಲಕ ಜನರನ್ನು ರಂಜಿಸಲು ಶ್ವೇತಾ ಚೆಂಗಪ್ಪ ಬರುತ್ತಿದ್ದಾರೆ.

ನೆನಪಿರಲಿ ಪ್ರೇಮ್​, ಮಾಳವಿಕಾ ಅವಿನಾಶ್​ ಜಡ್ಜ್​:

‘ಜೋಡಿ ನಂ.1’ ಕಾರ್ಯಕ್ರಮದಲ್ಲಿ ಹಲವು ಜನಪ್ರಿಯ ದಂಪತಿಗಳು ಭಾಗವಹಿಸುತ್ತಿದ್ದಾರೆ. ಸ್ಪರ್ಧಿಗಳಿಗೆ ವಿವಿಧ ಟಾಸ್ಕ್​ಗಳನ್ನು ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ನಟ ‘ನೆನಪಿರಲಿ’ ಪ್ರೇಮ್​ ಮತ್ತು ನಟಿ ಮಾಳವಿಕಾ ಅವಿನಾಶ್​ ಅವರು ಜಡ್ಜ್​ ಆಗಿದ್ದಾರೆ. ಇವರ ಜೊತೆ ನಿರೂಪಕಿಯಾಗಿ ಶ್ವೇತಾ ಚೆಂಗಪ್ಪ ಮಿಂಚಲಿದ್ದಾರೆ.

‘ಕಿರುತೆರೆಗೆ ಭರ್ಜರಿಯಾಗಿ ಮರಳಿದ್ದೇನೆ. ನೀವೆಲ್ಲರೂ ಈ ಕಾರ್ಯಕ್ರಮವನ್ನು ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮೆಲ್ಲರ ಕಮೆಂಟ್​ ಮತ್ತು ಮೆಸೇಜ್​ಗಾಗಿ ನಾನು ಕಾದಿದ್ದೇನೆ. ಓಪನಿಂಗ್​ ಸಂಚಿಕೆಯ ಶೂಟಿಂಗ್​ ಮಾಡಿದ ಅನುಭವ ಚೆನ್ನಾಗಿತ್ತು’ ಎಂದು ಶ್ವೇತಾ ಚೆಂಗಪ್ಪ ಪೋಸ್ಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.