ಮುದ್ದು ಮಗ ಜಿಯಾನ್ ಜೊತೆ ಶ್ವೇತಾ ಚೆಂಗಪ್ಪ ಚಂದದ ಫೋಟೋಶೂಟ್; ಕ್ಯೂಟ್ ಫೋಟೋಗಳಿಗೆ ಫ್ಯಾನ್ಸ್ ಫಿದಾ
ನಟಿ ಶ್ವೇತಾ ಚೆಂಗಪ್ಪ ಅವರು ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಪುತ್ರ ಜಿಯಾನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್.
Updated on: Feb 17, 2022 | 7:30 AM

Swetha Chengappa husband Kiran Appachu and son Jiyaan Aiyappa photos

Swetha Chengappa husband Kiran Appachu and son Jiyaan Aiyappa photos

ಮುದ್ದ ಮಗ ಜಿಯಾನ್ ಅಯ್ಯಪ್ಪ ಜೊತೆ ಶ್ವೇತಾ ಚೆಂಗಪ್ಪ ಅವರು ಅನೇಕ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದು, ಭರಪೂರ ಲೈಕ್ಸ್ ನೀಡುತ್ತಿದ್ದಾರೆ. ಪುತ್ರನ ಬಗ್ಗೆ ಶ್ವೇತಾ ಅವರು ಆಗಾಗ ಅಪ್ಡೇಟ್ ನೀಡುತ್ತಾರೆ.

ಮಗ ಜಿಯಾನ್ ಅಯ್ಯಪ್ಪ ಹೆಸರಿನಲ್ಲೂ ಶ್ವೇತಾ ಚೆಂಗಪ್ಪ ಮತ್ತು ಕಿರಣ್ ದಂಪತಿ ಸೋಶಿಯಲ್ ಮೀಡಿಯಾ ಖಾತೆ ತೆರೆದಿದ್ದಾರೆ. ಜಿಯಾನ್ ಅಯ್ಯಪ್ಪ ಇನ್ಸ್ಟಾಗ್ರಾಮ್ ಖಾತೆಯನ್ನು 27 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಾರೆ. ಆ ಮೂಲಕ ಜಿಯಾನ್ ಫೇಮಸ್ ಆಗಿದ್ದಾನೆ.

ಕಿರುತೆರೆಯಲ್ಲಿ ಶ್ವೇತಾ ಚೆಂಗಪ್ಪ ಅವರಿಗೆ ಸಖತ್ ಬೇಡಿಕೆ ಇದೆ. ಅವರ ವೃತ್ತಿಜೀವನಕ್ಕೆ ಕುಟುಂಬದವರು ಬೆಂಬಲವಾಗಿ ನಿಂತಿದ್ದಾರೆ. ಮಗನ ಆರೈಕೆಯಲ್ಲಿ ಶ್ವೇತಾ ತೊಡಗಿಕೊಂಡು ವೃತ್ತಿಜೀವನ ಮತ್ತು ಕುಟುಂಬ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
























