‘ಬಿಗ್​ ಬಾಸ್​ ತೆಲುಗು ಸೀಸನ್​ 6’ ರಿಯಾಲಿಟಿ ಶೋಗೆ ನಿರೂಪಕಿ ಆಗ್ತಾರಾ ಸಮಂತಾ ರುತ್​ ಪ್ರಭು?

Bigg Boss Telugu 6: ಅಕ್ಕಿನೇನಿ ನಾಗಾರ್ಜುನ ಅವರ ಪ್ರೋಮೋ ಈಗಾಗಲೇ ರಿಲೀಸ್​ ಆಗಿದೆ. ಅದರ ನಡುವೆಯೂ ಸಮಂತಾ ಕುರಿತು ಈ ರೀತಿ ಗಾಸಿಪ್​ ಹಬ್ಬಿರುವುದು ಅಚ್ಚರಿ ಮೂಡಿಸಿದೆ.

‘ಬಿಗ್​ ಬಾಸ್​ ತೆಲುಗು ಸೀಸನ್​ 6’ ರಿಯಾಲಿಟಿ ಶೋಗೆ ನಿರೂಪಕಿ ಆಗ್ತಾರಾ ಸಮಂತಾ ರುತ್​ ಪ್ರಭು?
ಸಮಂತಾ
Follow us
TV9 Web
| Updated By: ಮದನ್​ ಕುಮಾರ್​

Updated on:Jun 03, 2022 | 2:33 PM

ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೆಚ್ಚು ಫ್ಯಾನ್​ ಫಾಲೋಯಿಂಗ್​ ಇದೆ. ವಿವಾದಗಳ ಜೊತೆಜೊತೆಯಲ್ಲೇ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದು ಈ ರಿಯಾಲಿಟಿ ಶೋನ ಸ್ಪೆಷಾಲಿಟಿ. ಪ್ರತಿ ಬಾರಿ ಯಾವೆಲ್ಲ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ. ಅದೇ ರೀತಿ ಯಾರು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆ ಕೂಡ ಎದ್ದಿರುತ್ತದೆ. ಅದರಲ್ಲೂ ತೆಲುಗಿನಲ್ಲಿ ಆಗಾಗ ನಿರೂಪಕರು ಬದಲಾದ ಉದಾಹರಣೆ ಇದೆ. ಈವರೆಗೂ ತೆಲುಗಿನಲ್ಲಿ 5 ಸೀಸನ್​ಗಳನ್ನು ಪೂರೈಸಿರುವ ಬಿಗ್​ ಬಾಸ್​ ಕಾರ್ಯಕ್ರಮ ಈಗ 6ನೇ ಸೀಸನ್​ಗೆ (Bigg Boss Telugu 6) ಸಜ್ಜಾಗುತ್ತಿದೆ. ಈ ಬಾರಿ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ನಿರೂಪಣೆ ಮಾಡುತ್ತಾರೆ ಎಂಬ ಗುಸುಗುಸು ಹಬ್ಬಿದೆ. ಆದರೆ ಈಗಾಗಲೇ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರ ಪ್ರೋಮೋ ರಿಲೀಸ್​ ಆಗಿರುವುದರಿಂದ ಅವರೇ ನಿರೂಪಕರಾಗಿ ಮುಂದುವರಿಯುತ್ತಾರೆ ಎಂಬುದು ಕೂಡ ಖಚಿತವಾಗಿದೆ. ಅದರ ನಡುವೆಯೂ ಸಮಂತಾ ಕುರಿತು ಈ ರೀತಿ ಗಾಸಿಪ್​ ಹಬ್ಬಿರುವುದರಿಂದ ಫ್ಯಾನ್ಸ್​ ಗೊಂದಲಕ್ಕೆ ಒಳಗಾಗಿದ್ದಾರೆ.

ಸಮಂತಾ ಅವರಿಗೆ ಇತ್ತೀಚಿನ ದಿನಗಳಲ್ಲಿ ವೃತ್ತಿಜೀವನದಲ್ಲಿ ಹೊಸ ಹೊಸ ಅವಕಾಶಗಳು ಬರುತ್ತಿವೆ. ನಾಗ ಚೈತನ್ಯ ಅವರಿಗೆ ವಿಚ್ಛೇದನ ನೀಡಿದ ಬಳಿಕ ಅವರು ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡುವುದರಿಂದ ಹಿಡಿದು, ಬೋಲ್ಡ್​ ಪಾತ್ರಗಳವರೆಗೆ ಅನೇಕ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಬಿಗ್​ ಬಾಸ್​ ರಿಯಾಲಿಟಿ ಶೋ ಸಾರಥ್ಯವನ್ನೂ ವಹಿಸುತ್ತಾರೆ ಎಂಬ ಗುಮಾನಿ ಮೂಡಿದೆ.

ಇದನ್ನೂ ಓದಿ: ‘ನೀವು ನಾಯಿ-ಬೆಕ್ಕುಗಳ ಜತೆ ಒಂಟಿಯಾಗಿ ಸಾಯುತ್ತೀರಿ’ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು ನೋಡಿ

ಇದನ್ನೂ ಓದಿ
Image
‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
Image
ಪ್ರೀತಿ ತೊರೆದು ಒಂಟಿಯಾಗಿ ಬದುಕಲು ನಿರ್ಧರಿಸಿದ ದಿವ್ಯಾ; ಬಿಗ್​ ಬಾಸ್​ ಸ್ಪರ್ಧಿಯ ಬಾಳಲ್ಲಿ ಕಹಿ ಘಟನೆ  
Image
ಬಿಗ್​ ಬಾಸ್​ ಶೋಗೆ ಹೊಸ ನಿರೂಪಕನಾಗಿ ಬಂದ ನಟ ಸಿಂಬು; ಇನ್ಮುಂದೆ ಇವರೇ ಮುಂದುವರಿಯುತ್ತಾರಾ?
Image
ಬಿಗ್​ ಬಾಸ್​ ನಿರೂಪಕರು ಚೇಂಜ್​; ಅಧಿಕೃತ ಘೋಷಣೆ ಮಾಡಿದ ಸ್ಟಾರ್​ ನಟ; ವೀಕ್ಷಕರಿಗೆ ಬೇಸರ

ಈ ಹಿಂದಿನ ಸೀಸನ್​ಗಳಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಸಿನಿಮಾ ಕೆಲಸಗಳ ಕಾರಣದಿಂದ ಬಿಗ್​ ಬಾಸ್​ ನಿರೂಪಣೆಗೆ ಚಕ್ಕರ್​ ಹಾಕಿದ್ದಾಗ ಬೇರೆ ಕಲಾವಿದರು ಬಂದು ಶೋ ನಡೆಸಿಕೊಟ್ಟಿದ್ದರು. ಈ ಬಾರಿ ಕೂಡ ಅವರೇನಾದರೂ ಸಿನಿಮಾ ಕೆಲಸಗಳ ಸಲುವಾಗಿ ಬಿಗ್​ ಬಾಸ್​ನ ಕೆಲವು ಎಪಿಸೋಡ್​ಗಳನ್ನು ಸ್ಕಿಪ್​ ಮಾಡುತ್ತಾರಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಇಲ್ಲ. ಒಟ್ಟಿನಲ್ಲಿ ಈ ಬಾರಿ ಸಮಂತಾ ನಿರೂಪಣೆ ಮಾಡುವ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:33 pm, Fri, 3 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ