‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​

ಸಾರಾ ಖಾನ್​ ಹಾಗೂ ಅಲಿ ಮರ್ಚಂಟ್​ ಅವರು 2010ರಲ್ಲಿ ಹಿಂದಿ ಬಿಗ್​ ಬಾಸ್​ 4ಕ್ಕೆ ಎಂಟ್ರಿ ಪಡೆದಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲೇ ಮದುವೆ ಆದರು. ವಿ

‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
ಬಿಬ್​ ಬಾಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 19, 2022 | 6:00 AM

‘ಬಿಗ್​ ಬಾಸ್​’ ಮನೆಯಲ್ಲಿ (Bigg Boss House) ಪ್ರೀತಿ ಹುಟ್ಟಿಕೊಳ್ಳೋದು ಸರ್ವೇ ಸಾಮಾನ್ಯ. ಬಿಗ್​ ಬಾಸ್​ ಮನೆಯಲ್ಲಿ ಹುಟ್ಟಿದ ಪ್ರೀತಿಯಲ್ಲಿ ಕೆಲವು ಹಸೆಮಣೆವರೆಗೆ (Marriage) ಹೋಗಿದೆ. ಇನ್ನೂ ಕೆಲವು ಬ್ರೇಕಪ್​ನಲ್ಲಿ ಅಂತ್ಯವಾಗಿದೆ. ಆದರೆ, ಬಿಗ್​ ಬಾಸ್​ನಲ್ಲೇ ಮದುವೆ ಆದ ಜೋಡಿ ಬಗ್ಗೆ ನಿಮಗೆ ಗೊತ್ತಾ? ಹೀಗೊಂದು ಘಟನೆ 2010ರಲ್ಲಿ ನಡೆದಿತ್ತು. ಅಚ್ಚರಿ ಎಂದರೆ, ‘ನಾವು ಬಿಗ್​ ಬಾಸ್​ ಮನೆಯಲ್ಲಿ ಮದುವೆ ಆಗೋಕೆ 50 ಲಕ್ಷ ರೂಪಾಯಿ ಹಣವನ್ನು (Money) ​ ಚಾನೆಲ್​ನವರು ನೀಡಿದ್ದರು’ ಎಂದು ಈ ಜೋಡಿ ಹೇಳಿಕೊಂಡಿತ್ತು. ಆದರೆ, ವಾಹಿನಿಯವರು ಇದನ್ನು ಅಲ್ಲಗಳೆದಿದ್ದರು. ಹಾಗಾದರೆ, ಯಾರು ಇವರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಾರಾ ಖಾನ್​ ಹಾಗೂ ಅಲಿ ಮರ್ಚಂಟ್​ ಅವರು 2010ರಲ್ಲಿ ಹಿಂದಿ ಬಿಗ್​ ಬಾಸ್​ 4ಕ್ಕೆ ಎಂಟ್ರಿ ಪಡೆದಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲೇ ಮದುವೆ ಆದರು. ವಿಚಿತ್ರ ಎಂದರೆ, ಮದುವೆ ಆದ ಎರಡೇ ತಿಂಗಳಿಗೆ ಈ ಸಂಬಂಧ ಮುರಿದು ಬಿದ್ದಿತ್ತು. ಪತಿಯಿಂದ ಪದೇಪದೇ ಮೋಸ ಹೋಗಿದ್ದರಿಂದ ಈ ರೀತಿಯ ನಿರ್ಧಾರಕ್ಕೆ ಬಂದಿದ್ದೆ ಎಂದು ಸಾರಾ ಈಗ ಹೇಳಿಕೊಂಡಿದ್ದಾರೆ.

ಸಾರಾ ಹಾಗೂ ಅಲಿ ಇಬ್ಬರೂ ಒಟ್ಟಿಗೆ ಬಿಗ್ ಬಾಸ್ ಮನೆಗೆ ಬಂದರು. ಅಲಿ ಅವರು ಬಿಗ್ ಬಾಸ್​ ಮನೆಯಲ್ಲಿ ಸಾರಾಗೆ ಪ್ರಪೋಸ್​ ಮಾಡಿದರು. ಬಿಗ್​ ಬಾಸ್​ ಮನೆಯಲ್ಲೇ ಇವರ ವಿವಾಹ ನೆರವೇರಿತು. ಈ ಗಿಮಿಕ್​ ಮಾಡೋಕೆ ಚಾನೆಲ್​ನವರು ನಮಗೆ 50 ಲಕ್ಷ ರೂಪಾಯಿ ನೀಡಿದ್ದಾಗಿ ಈ ಜೋಡಿ ಹೇಳಿಕೊಂಡಿತ್ತು. ಆದರೆ, ಚಾನೆಲ್​ನವರು ಇದನ್ನು ಅಲ್ಲಗಳೆದಿದ್ದರು. ಮದುವೆ ಆಗಿ ಎರಡೇ ತಿಂಗಳಿಗೆ ಇಬ್ಬರೂ ಬೇರೆ ಆದರು.

ನಡೆದಿತ್ತು ನಿರಂತರ ಮೋಸ

ಆಲ್ಟ್​ಬಾಲಾಜಿ ಹಾಗೂ ಎಂಎಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುವ ‘ಲಾಕಪ್​’ ಶೋಗೆ ಸಾರಾ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಅವರು ತಮಗಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ‘ಅಲಿ ಯಾವಾಗಲೂ ನನಗೆ ಮೋಸ ಮಾಡಲು ಪ್ರಯತ್ನಿಸುತ್ತಲೇ ಇದ್ದ. ಅದು ನನಗೆ ಕಿರಿಕಿರಿ ಉಂಟು ಮಾಡಿತ್ತು. ನಾನು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇನೆ. ಅವಕಾಶ ಕೊಟ್ಟಾಗಲೆಲ್ಲ ಅವರು ಸಿಕ್ಕಿ ಬಿದ್ದಿದ್ದರು. ಅಲಿ ಹೇಳುತ್ತಿದ್ದ ಪ್ರತಿಯೊಂದು ಸುಳ್ಳನ್ನೂ ನಾನು ಕಂಡು ಹಿಡಿದಿದ್ದೇನೆ. ನಾನು ಅವರಿಗೆ ಕನಿಷ್ಠ 350 ಅವಕಾಶಗಳನ್ನು ನೀಡಿದ್ದೆ. ಏಕೆಂದರೆ ಅವರು ನನಗೆ ಮುಖ್ಯವಾದ ವ್ಯಕ್ತಿ ಆಗಿದ್ದರು. ಆದರೆ, ಮತ್ತೆ ಮೋಸ ಹೋದೆ. ಅದರಿಂದ ಹೊರಬರಲು, ಎಲ್ಲವನ್ನೂ ಬಿಟ್ಟು ನನ್ನ ಜೀವನದಲ್ಲಿ ಮುಂದೆ ಸಾಗಲು ನಾನು ನಾಲ್ಕೂವರೆ ವರ್ಷಗಳನ್ನು ತೆಗೆದುಕೊಂಡೆ’ ಎಂದಿದ್ದಾರೆ ಸಾರಾ.

ಇದನ್ನೂ ಓದಿ: ಜಾನ್ವಿ ಕಪೂರ್​ ನಟಿ ಆಗೋದು ತಾಯಿ ಶ್ರೀದೇವಿಗೆ ಇಷ್ಟ ಇರಲಿಲ್ಲ; ಕಾರಣ ಏನು?

Janhvi Kapoor: ಮಾದಕ ಲುಕ್​ನಿಂದ ಪಡ್ಡೆಗಳ ನಿದ್ದೆ ಕದ್ದ ಜಾನ್ವಿ ಕಪೂರ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ