ಟಿವಿ9 ಕನ್ನಡ ಸರಿಸಾಟಿ ಇಲ್ಲದ ನಂಬರ್ 1 ಸುದ್ದಿ ವಾಹಿನಿ; ಒಂದೂವರೆ ವರ್ಷದ ಬಳಿಕ ರೇಟಿಂಗ್​ನಲ್ಲಿ ಮತ್ತೆ ಸಾಬೀತು

ಸುಮಾರು 15 ವರ್ಷಗಳಿಂದ ಮೊದಲ ಸ್ಥಾನವನ್ನೇ ಪಡೆದುಕೊಂಡಿದೆ. ಎರಡೂ ಖಾಸಗಿ ಚಾನೆಲ್​ಗಳ ರೇಟಿಂಗ್​ನ ಟಿವಿ9 ಕನ್ನಡ ಇದೀಗ ಮೀರಿಸಿದೆ.

ಟಿವಿ9 ಕನ್ನಡ ಸರಿಸಾಟಿ ಇಲ್ಲದ ನಂಬರ್ 1 ಸುದ್ದಿ ವಾಹಿನಿ; ಒಂದೂವರೆ ವರ್ಷದ ಬಳಿಕ ರೇಟಿಂಗ್​ನಲ್ಲಿ ಮತ್ತೆ ಸಾಬೀತು
TV9 Kannada
Follow us
sandhya thejappa
| Updated By: preethi shettigar

Updated on:Mar 17, 2022 | 6:50 PM

ಬೆಂಗಳೂರೂ: ಕರ್ನಾಟಕ ಮನೆ ಮಾತಾಗಿರುವ ಕನ್ನಡ ವಾಹಿನಿ ಎಂದರೆ ಟಿವಿ9 ಕನ್ನಡ. ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಹೊಕ್ಕಿರುವ ಟಿವಿ9 ಕನ್ನಡ ವಾಹಿನಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ಸುಮಾರು 15 ವರ್ಷಗಳಿಂದ ಮೊದಲ ಸ್ಥಾನವನ್ನೇ ಪಡೆದುಕೊಂಡಿದೆ. ಎರಡೂ ಖಾಸಗಿ ಚಾನೆಲ್​ಗಳ ರೇಟಿಂಗ್​ನ ಟಿವಿ9 ಕನ್ನಡ ಮೀರಿಸಿದ್ದು, ಒಂದೂವರೆ ವರ್ಷದ ಬಳಿಕ ರೇಟಿಂಗ್ಸ್​ನಲ್ಲಿ ಮತ್ತೆ ಮೊದಲ ಸ್ಥಾನವನ್ನ ಗಿಟ್ಟಿಸಿಕೊಳ್ಳುವ ಮೂಲಕ ಸಾಬೀತು ಮಾಡಿದೆ. ಚಾನೆಲ್​ನ ಸತ್ಯ, ಸ್ಪಷ್ಟ, ನೇರಸುದ್ದಿಗೆ ಜಯ ಸಿಕ್ಕಿದೆ.

ಟಿವಿ9 ಕನ್ನಡದಲ್ಲಿ ನಾವು ಯಾವಾಗಲೂ ನಮ್ಮ ವೀಕ್ಷಕರಿಗೆ ಮೊದಲ ಸ್ಥಾನ ನೀಡುತ್ತೇವೆ. ನಾವು ಯಾವಾಗಲೂ ಆಯ್ಕೆ ಮಾಡಿಕೊಳ್ಳುವ ಸುದ್ದಿ ಅಥವಾ ವರದಿ ಮತ್ತು ಜನರ ಸಮಸ್ಯೆಗಳೆಲ್ಲವೂ ಅತ್ಯಂತ ಒಳನೋಟವುಳ್ಳವು ಆಗಿರುತ್ತದೆ. ಈ ಕಾರಣಕ್ಕಾಗಿಯೇ ವೀಕ್ಷಕರು ನಮ್ಮ ಪ್ರತಿಸ್ಪರ್ಧಿಗಳಿಗಿಂತ ನಮ್ಮನ್ನು ಹೆಚ್ಚು ನಂಬುತ್ತಾರೆ. ಆದ್ದರಿಂದ, ಟಿವಿ9 ಕನ್ನಡಕ್ಕೆ ಟೆಲಿವಿಷನ್ ರೇಟಿಂಗ್​ನಲ್ಲಿ ಕನ್ನಡ ಸುದ್ದಿ ವೀಕ್ಷಕರ ಅಗಾಧ ಮೆಚ್ಚುಗೆ ಸಿಕ್ಕಿದ್ದು, ಪರಿಣಾಮವಾಗಿ ಮತ್ತೆ ಮೊದಲ ಸ್ಥಾನ ದೊರಕಿದೆ ಎಂದು ಚಾನೆಲ್ ಸ್ಥಾನವನ್ನು ಮತ್ತೊಮ್ಮೆ ಮೌಲ್ಯೀಕರಿಸಿದೆ. ಇದುವರೆಗೆ ನಿರ್ವಿವಾದ ನಾಯಕನಾಗಿರುವುದರಲ್ಲಿ ಆಶ್ಚರ್ಯವಿಲ್ಲ ಎಂದು ಟಿವಿ9 ಕರ್ನಾಟಕದ ವ್ಯವಸ್ಥಾಪಕ ಸಂಪಾದಕ ಆರ್.ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಟಿವಿ9 ಕನ್ನಡ ಟಿವಿ9 ನೆಟ್‌ವರ್ಕ್‌ನ ಭಾಗವಾಗಿದೆ. ಇದು ಭಾರತದ ಅತಿದೊಡ್ಡ ಸುದ್ದಿ ಪ್ರಸಾರಕವಾಗಿದೆ. ಆದ್ದರಿಂದ, ನಮ್ಮ ನೆಟ್‌ವರ್ಕ್ ಸಿಇಒ ಶ್ರೀ ಬರುನ್ ದಾಸ್ ಅಥವಾ ನಮ್ಮ ಗ್ರೂಪ್ ಎಡಿಟರ್ ಶ್ರೀ ಬಿ. ವಿ ರಾವ್ ಆಗಿರಲಿ ಎಲ್ಲರೂ ನಮಗೆ ಅಗತ್ಯವಾದ ಸಂಪನ್ಮೂಲಗಳನ್ನು ನೀಡಿದ್ದಾರೆ. ಇದೇ ಕಾರಣಕ್ಕೆ ನಮ್ಮಲ್ಲಿ ನಾಯಕತ್ವದ ಬದ್ಧತೆ ಇದೆ. ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಅಂದರೆ ಉದಾಹರಣೆಗೆ, ಟಿವಿ9 ನೆಟ್‌ವರ್ಕ್ ಯುದ್ಧ ವಲಯದಲ್ಲಿ ವರದಿಗಾರರನ್ನು ನಿಯೋಜಿಸಿದೆ. ಕನ್ನಡದ ಯಾವ ಸುದ್ದಿ ವಾಹಿನಿಯೂ ಹೀಗೆ ಮಾಡಿಲ್ಲ. ಅದಕ್ಕಾಗಿಯೇ ನಾವು ನಮ್ಮ ವೀಕ್ಷಕರಿಗೆ ಯುದ್ಧದ ಹೆಚ್ಚು ನಿಖರ ಮತ್ತು ಉತ್ತಮ ಕವರೇಜ್ ಅನ್ನು ತರಲು ಸಮರ್ಥರಾಗಿದ್ದೇವೆ. ಉಕ್ರೇನ್‌ನಲ್ಲಿ ಕನ್ನಡ ವಿದ್ಯಾರ್ಥಿಗಳ ದುಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡವರಲ್ಲಿ ನಾವು ಮೊದಲಿಗರಾಗಿದ್ದೇವೆ. ಅದೇ ರೀತಿ ನಮ್ಮ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳ ಕುಟುಂಬಗಳೊಂದಿಗೆ ಮಾತನಾಡಲು ಅವರನ್ನು ಸಂಪರ್ಕಿಸಲು ನಾವು ಮೊದಲಿಗರಾಗಿದ್ದೇವೆ ಎಂದು ಟಿವಿ9 ಕರ್ನಾಟಕದ ವ್ಯವಸ್ಥಾಪಕ ಸಂಪಾದಕ ಆರ್.ಶ್ರೀಧರನ್ ತಿಳಿಸಿದರು.

ಟಿವಿ9 ಕನ್ನಡದ ನಿರಂತರ ಯಶಸ್ಸಿಗೆ ನಮ್ಮ ವೀಕ್ಷಕರು, ಜಾಹೀರಾತುದಾರರು, ವಿತರಕರು ಮತ್ತು ನಾವು ನಮ್ಮ ಉದ್ಯೋಗಿಗಳೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವೇ ಕಾರಣ. ಇದು ಮಾತ್ರ ಪ್ರತಿ ವರ್ಷ ಹಾದುಹೋಗುವ ಮತ್ತು ಬಲವಾಗಿ ಬೆಳೆಯುವ ಬಂಧವಾಗಿದೆ. ಒಟ್ಟಾರೆ ವೀಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಪ್ರತಿ ದಿನವೂ ಶ್ರಮಿಸಲು ನಾವು ಬದ್ಧರಾಗಿದ್ದೇವೆ ಎಂದು ಟಿವಿ9 ಕರ್ನಾಟಕದ ವ್ಯವಸ್ಥಾಪಕ ಸಂಪಾದಕ ಆರ್.ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ.

Published On - 12:11 pm, Thu, 17 March 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ