ಪ್ರೀತಿ ತೊರೆದು ಒಂಟಿಯಾಗಿ ಬದುಕಲು ನಿರ್ಧರಿಸಿದ ದಿವ್ಯಾ; ಬಿಗ್​ ಬಾಸ್​ ಸ್ಪರ್ಧಿಯ ಬಾಳಲ್ಲಿ ಕಹಿ ಘಟನೆ  

ಪ್ರೀತಿ ತೊರೆದು ಒಂಟಿಯಾಗಿ ಬದುಕಲು ನಿರ್ಧರಿಸಿದ ದಿವ್ಯಾ; ಬಿಗ್​ ಬಾಸ್​ ಸ್ಪರ್ಧಿಯ ಬಾಳಲ್ಲಿ ಕಹಿ ಘಟನೆ  

ಮಧುರಿಮಾ ರಾಯ್​ ಜತೆ ವರುಣ್​​ ಅಫೇರ್​ ಇಟ್ಟುಕೊಂಡಿದ್ದಾರೆ ಹಾಗೂ ಇದೇ ಕಾರಣಕ್ಕೆ ಬ್ರೇಕಪ್​ ಆಗಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದರು. ಇದಕ್ಕೂ ದಿವ್ಯಾ ಉತ್ತರಿಸಿದ್ದಾರೆ.

TV9kannada Web Team

| Edited By: Rajesh Duggumane

Mar 07, 2022 | 3:01 PM

ಹಿಂದಿಯಲ್ಲಿ ಪ್ರಸಾರವಾದ ‘ಬಿಗ್​ ಬಾಸ್​ ಒಟಿಟಿ’ (Bigg Boss OTT) ವಿನ್ನರ್​ ಆಗಿ ದಿವ್ಯಾ ಅಗರ್​ವಾಲ್​ (Divya Agarwal) ಹೊರಹೊಮ್ಮಿದ್ದರು. ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ನಡೆದ ಅದ್ದೂರಿ ಫಿನಾಲೆ ಎಪಿಸೋಡ್​ನಲ್ಲಿ ದಿವ್ಯಾ ಹೆಸರನ್ನು ವಿನ್ನರ್​ ಎಂದು ನಿರೂಪಕ ಕರಣ್​ ಜೋಹರ್​ ಘೋಷಣೆ ಮಾಡುತ್ತಿದ್ದಂತೆ ಅವರು ಕುಣಿದು ಕುಪ್ಪಳಿಸಿದ್ದರು. ಈಗ ಅವರ ಬಾಳಲ್ಲಿ ಕಹಿ ಘಟನೆ ಒಂದು ನಡೆದಿದೆ. ಹಲವು ವರ್ಷಗಳ ಕಾಲ ಜತೆಗೆ ಇದ್ದ ಬಾಯ್​ಫ್ರೆಂಡ್ ವರುಣ್ ಸೂದ್​ (Varun Sood) ಜತೆಗೆ ದಿವ್ಯಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಘೋಷಣೆ ಮಾಡಿದ್ದಾರೆ. ಇನ್ನು, ವರುಣ್​ ಅವರನ್ನು ಟ್ರೋಲ್​ ಮಾಡಿದ ಕೆಲವರಿಗೆ ಅವರು ತಿರುಗೇಟು ನೀಡಿದ್ದಾರೆ.

‘ಜೀವನ ಒಂದು ರೀತಿಯಲ್ಲಿ ಸರ್ಕಸ್​. ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನಿಸಿ. ನಮ್ಮ ಮೇಲೆ ನಮಗೆ ಪ್ರೀತಿ ಕಡಿಮೆಯಾಗಲು ಪ್ರಾರಂಭಿಸಿದಾಗ ಏನಾಗುತ್ತದೆ? ನಾನು ಈಗ ತೆಗೆದುಕೊಳ್ಳುತ್ತಿರುವ ನಿರ್ಧಾರಕ್ಕೆ ಯಾರನ್ನೂ ದ್ವೇಷಿಸುತ್ತಿಲ್ಲ. ನಾನು ನನಗಾಗಿ ಬದುಕಲು ಬಯಸುತ್ತೇನೆ. ನಾನು ನಮ್ಮ ರಿಲೇಷನ್​ಶಿಪ್​ನಿಂದ ಹೊರಬರುತ್ತಿದ್ದೇನೆ. ಇದು ನನ್ನ ಆಯ್ಕೆ. ವರುಣ್ ಜತೆ ಕಳೆದ ಸಮಯ ನನಗೆ ಈಗಲೂ ಖುಷಿ ನೀಡುತ್ತದೆ’ ಎಂದಿದ್ದಾರೆ ದಿವ್ಯಾ.

‘ವರುಣ್​ ನೀನು ಮಾಡಿದ ಎಲ್ಲಾ ಸಹಾಯಕ್ಕೆ ಧನ್ಯವಾದಗಳು. ನೀನು ಯಾವಾಗಲೂ ನನ್ನ ಉತ್ತಮ ಗೆಳೆಯನಾಗಿರುತ್ತೀಯ’ ಎಂದು ಹೇಳಿದ್ದಾರೆ ದಿವ್ಯಾ. ಈ ಮೂಲಕ ಬ್ರೇಕಪ್ ವಿಚಾರವನ್ನು ಅಧಿಕೃತ ಮಾಡಿದ್ದಾರೆ.  ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ದಿವ್ಯಾ ಸದಾ ವರುಣ್​ ಬಗ್ಗೆ ಮಾತನಾಡುತ್ತಿದ್ದರು. ಶೀಘ್ರವೇ ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಈಗ ಇಬ್ಬರೂ ಬೇರೆ ಆಗಿದ್ದಾರೆ.

ಮಧುರಿಮಾ ರಾಯ್​ ಜತೆ ವರುಣ್​​ ಅಫೇರ್​ ಇಟ್ಟುಕೊಂಡಿದ್ದಾರೆ ಹಾಗೂ ಇದೇ ಕಾರಣಕ್ಕೆ ಬ್ರೇಕಪ್​ ಆಗಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದರು.

ಇದಕ್ಕೂ ದಿವ್ಯಾ ಉತ್ತರಿಸಿದ್ದಾರೆ. ‘ವರುಣ್ ಬಗ್ಗೆ ಯಾರೂ ಏನನ್ನೂ ಹೇಳಬೇಡಿ. ವರುಣ್​ ಪ್ರಾಮಾಣಿಕ ವ್ಯಕ್ತಿ. ಒಂಟಿಯಾಗಿ ಇರಬೇಕು ಎಂಬುದು ನನ್ನ ನಿರ್ಧಾರ. ಯಾರಿಗೂ ಏನನ್ನೂ ಮಾತನಾಡುವ ಹಕ್ಕು ಇಲ್ಲ. ಜೀವನದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಕಷ್ಟು ಶಕ್ತಿ ಬೇಕು’ ಎಂದು ದಿವ್ಯಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada