‘ರಾಜಾ-ರಾಣಿ ಸೀಸನ್​ 2’ ಗ್ರ್ಯಾಂಡ್​ ಓಪನಿಂಗ್​ಗೆ ದಿನಗಣನೆ; ಈ ಬಾರಿ ಇರಲಿದೆ ಇನ್ನಷ್ಟು ಮನರಂಜನೆ

Raja Rani Season 2: ಈ ಬಾರಿ ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ‘ರಾಜಾ ರಾಣಿ ಸೀಸನ್​ 2’ ವೇದಿಕೆ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರ ಆಗಲಿದೆ.

‘ರಾಜಾ-ರಾಣಿ ಸೀಸನ್​ 2’ ಗ್ರ್ಯಾಂಡ್​ ಓಪನಿಂಗ್​ಗೆ ದಿನಗಣನೆ; ಈ ಬಾರಿ ಇರಲಿದೆ ಇನ್ನಷ್ಟು ಮನರಂಜನೆ
ತಾರಾ, ಸೃಜನ್​ ಲೋಕೇಶ್
Follow us
TV9 Web
| Updated By: ಮದನ್​ ಕುಮಾರ್​

Updated on: Jun 06, 2022 | 11:58 AM

ಕನ್ನಡ ಕಿರುತೆರೆಯಲ್ಲಿ ಎಲ್ಲ ವಾಹಿನಿಗಳ ನಡುವೆ ಪೈಪೋಟಿ ಇದೆ. ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳ (Reality Show) ವಿಚಾರದಲ್ಲೂ ಸಖತ್​ ಸ್ಪರ್ಧೆ ಏರ್ಪಟ್ಟಿದೆ. ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಲು ಎಲ್ಲ ಚಾನೆಲ್​ಗಳು ಪ್ರಯತ್ನಿಸುತ್ತಿವೆ. ಕಲರ್ಸ್​ ಕನ್ನಡ (Colors Kannada) ವಾಹಿನಿಯಲ್ಲಿ ಹಲವು ನಾನ್​-ಫಿಕ್ಷನ್​ ಶೋಗಳು ಗಮನ ಸೆಳೆಯುತ್ತಿವೆ. ಆ ಪೈಕಿ ‘ರಾಜಾ ರಾಣಿ’ ಕಾರ್ಯಕ್ರಮಕ್ಕೆ ತನ್ನದೇ ಆದ ಚಾರ್ಮ್​ ಇದೆ. ಈಗಾಗಲೇ ಒಂದು ಸೀಸನ್​ ಅನ್ನು ಯಶಸ್ವಿಯಾಗಿ ಮುಗಿಸಿರುವ ಈ ಕಾರ್ಯಕ್ರಮದ ಎರಡನೇ ಸೀಸನ್​ಗೆ ಸಕಲ ತಯಾರಿ ನಡೆದಿದೆ. ‘ರಾಜಾ ರಾಣಿ ಸೀಸನ್​ 2’ (Raja Rani Season 2) ಆರಂಭಿಸಲು ದಿನಾಂಕ ಕೂಡ ನಿಗದಿ ಆಗಿದೆ. ಜೂನ್​ 11ರಂದು ಅದ್ದೂರಿಯಾಗಿ ಇದರ ಗ್ರ್ಯಾಂಡ್​ ಓಪನಿಂಗ್​ ಆಗಲಿದೆ. ಈ ಬಾರಿ ಕೂಡ ಕಿರುತೆರೆ ಲೋಕದ ರಿಯಲ್​ ಲೈಫ್​ ಜೋಡಿಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಕಲರ್ಸ್​ ಕನ್ನಡದ ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ‘ರಾಜಾ ರಾಣಿ ಸೀಸನ್​ 2’ ಕಾರ್ಯಕ್ರಮದ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಈ ಹೊಸ ಸೀಸನ್​ನಲ್ಲಿ ಭಾಗವಹಿಸುವ ಜೋಡಿಗಳ ಬಗ್ಗೆ ಮಾಹಿತಿ ಇದರಲ್ಲಿ ಇದೆ. ಈಗಾಗಲೇ ಕೆಲವು ಎಪಿಸೋಡ್​ಗಳ ಶೂಟಿಂಗ್​ ಕೂಡ ಮಾಡಲಾಗಿದೆ. ಕಳೆದ ಸೀಸನ್​ಗಿಂತಲೂ ಈ ಬಾರಿ ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ವೇದಿಕೆ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರ ಆಗಲಿದೆ.

ಇದನ್ನೂ ಓದಿ
Image
ಕಲರ್ಸ್​ನಲ್ಲಿ ಮತ್ತೆ ಬರ್ತಿದೆ ‘ರಾಜಾ-ರಾಣಿ’ ರಿಯಾಲಿಟಿ ಶೋ; ‘ಬಿಗ್​ ಬಾಸ್​’ ಬಗ್ಗೆ ಪ್ರಶ್ನೆ ಇಟ್ಟ ಫ್ಯಾನ್ಸ್
Image
ಕಿರುತೆರೆ ನಟಿ ಸುನೇತ್ರಾ ಅಪಘಾತಕ್ಕೆ ಒಳಗಾದ ಘಟನೆಯ ಸಿಸಿಟಿವಿ ದೃಶ್ಯ ಇಲ್ಲಿದೆ
Image
ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ
Image
‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ

ಇದನ್ನೂ ಓದಿ: ‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ

ಈ ಬಾರಿ ಕೂಡ ಸೃಜನ್​ ಲೋಕೇಶ್​ ಮತ್ತು ನಟಿ ತಾರಾ ಅವರು ಜಡ್ಜ್​ ಆಗಿರಲಿದ್ದಾರೆ. ಕಳೆದ ಸೀಸನ್​ಗೆ ಅನುಪಮಾ ಗೌಡ ಅವರು ನಿರೂಪಕಿ ಆಗಿದ್ದರು. ಈ ಬಾರಿ ಕೂಡ ಅವರೇ ನಿರೂಪಣೆ ಮಾಡಬೇಕು ಎಂದು ಕಮೆಂಟ್​ಗಳ ಮೂಲಕ ವೀಕ್ಷಕರು ಒತ್ತಾಯಿಸಿದ್ದಾರೆ. ಮೊದಲ ಸೀಸನ್​ನಲ್ಲಿ ನೇಹಾ ಗೌಡ ಮತ್ತು ಚಂದನ್​ ವಿನ್ನರ್​ ಆಗಿದ್ದರು. ಹೊಸ ಸೀಸನ್​ನಲ್ಲಿ ಅವರೇನಾದರೂ ಅತಿಥಿಗಳಾಗಿ ಬಂದು ಹೋಗುತ್ತಾರಾ ಎಂಬ ಕೌತುಕ ಕೂಡ ಮೂಡಿದೆ.

ಶಾಲಿನಿ-ಧನರಾಜ್​, ವೀಣಾ-ಸುಂದರ್​, ಅರುಣ್​ ಮಾಧುರ್ಯಾ, ಸಂದೇಶ್​-ಮನೀಷಾ, ಕಾವ್ಯಾ-ಕುಮಾರ್​, ಸುಜಾತಾ-ಅಕ್ಷಯ್​, ಮುಂತಾದ ದಂಪತಿಗಳು ಈ ಸೀಸನ್​ನಲ್ಲಿ ಭಾಗವಹಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ