‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ

Raja Rani Winner: ಭಾನುವಾರ ನಡೆದ ಫಿನಾಲೆ ತುಂಬಾನೇ ಅದ್ದೂರಿಯಾಗಿತ್ತು. ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ವಿನ್ನರ್​ ಮಂಜು ಪಾವಗಡ, ಸ್ಪರ್ಧಿಗಳಾದ ಶುಭಾ ಪೂಂಜಾ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ 'ಗೊಂಬೆ' ದಂಪತಿ
ನೇಹಾ-ಚಂದನ್​

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಅಂತ್ಯಗೊಂಡಿದೆ. ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದ ಈ ಕಾರ್ಯಕ್ರಮದ ಫಿನಾಲೆ ಭಾನುವಾರ (ನವೆಂಬರ್​ 21) ನಡೆದಿದೆ. ರಿಯಾಲಿಟಿ ಶೋ ಫಿನಾಲೆ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಅದೇ ರೀತಿ ಈ ಶೋನ ಕೊನೆಯ ಎಪಿಸೋಡ್​ ಸಖತ್​ ಗ್ರ್ಯಾಂಡ್​ ಆಗಿತ್ತು. ಈ ರಿಯಾಲಿಟಿಶೋನಲ್ಲಿ ‘ಗೊಂಬೆ’ ನೇಹಾ ಗೌಡ ಹಾಗೂ ಅವರ ಪತಿ ಚಂದನ್​ ಗೆದ್ದು ಬೀಗಿದ್ದಾರೆ. ಈ ಮೂಲಕ ರಾಜಾ-ರಾಣಿ ಕಿರೀಟ ತೊಟ್ಟಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದರು. ಹೆಸರೇ ಸೂಚಿಸುವಂತೆ ಈ ಶೋಗೆ ಒಬ್ಬರೇ ಬರುವಂತಿರಲಿಲ್ಲ. ಜೋಡಿ ಸಮೇತವೇ ಬರಬೇಕಿತ್ತು. ಅಂತಿಮವಾಗಿ ಗೊಂಬೆ ದಂಪತಿ ಗೆದ್ದು ಬೀಗಿದೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಮೂಲಕ ಈ ಧಾರಾವಾಹಿ ಸಾವಿರಾರು ಕಂತುಗಳನ್ನು  ಪ್ರಸಾರ ಮಾಡಿತ್ತು. ಅಲ್ಲದೆ, ವೀಕ್ಷಕರಿಗೂ ಧಾರಾವಾಹಿ ಇಷ್ಟವಾಗಿತ್ತು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯರಾದವರು ನೇಹಾ ಗೌಡ. ಅವರು ಚಂದನ್​ ಜತೆ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ.  ಈಗ ಈ ದಂಪತಿಗೆ ರಾಜಾ ರಾಣಿ ಕಿರೀಟ ಗೆದ್ದಿದೆ

‘ರಾಜಾ-ರಾಣಿ’ ಶೋ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಮನೆ ಮಂದಿ ಎಲ್ಲರೂ ಈ ಶೋನ ಇಷ್ಟಪಟ್ಟಿದ್ದರು. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅನೇಕರಲ್ಲಿ ಇರುತ್ತದೆ. ‘ರಾಜಾ-ರಾಣಿ’ ವೇದಿಕೆ ಮೇಲೆ ಕಿರುತೆರೆ ಸೆಲೆಬ್ರಿಟಿಗಳ ಸಾಕಷ್ಟು ಗುಟ್ಟುಗಳು ರಟ್ಟಾಗಿತ್ತು. ಇದು ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿತ್ತು.

ಭಾನುವಾರ ನಡೆದ ಫಿನಾಲೆ ತುಂಬಾನೇ ಅದ್ದೂರಿಯಾಗಿತ್ತು. ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ವಿನ್ನರ್​ ಮಂಜು ಪಾವಗಡ, ಸ್ಪರ್ಧಿಗಳಾದ ಶುಭಾ ಪೂಂಜಾ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಸಂಪೂರ್ಣ ಕಾರ್ಯಕ್ರಮ ಭರ್ಜರಿಯಾಗಿ ಮನರಂಜನೆ ನೀಡಿತ್ತು.

ಇದನ್ನೂ ಓದಿ: ‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು

 

Click on your DTH Provider to Add TV9 Kannada