AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೊರೊನಾ ಭೀತಿ; ಖ್ಯಾತ ಹಿರಿಯ ಕಿರುತೆರೆ ನಟಿ ಕೊವಿಡ್​ಗೆ ಬಲಿ

‘ಅನುಪಮಾ’ ಧಾರಾವಾಹಿಯಲ್ಲಿ ಅನುಪಮಾ ತಾಯಿ ಆಗಿ ಮಾಧವಿ ಗೋಗಟೆ ಕಾಣಿಸಿಕೊಂಡಿದ್ದರು. ಅದ್ಭುತ ನಟನೆ ಮೂಲಕ ಮನೆ ಮಾತಾಗಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು.

ಮತ್ತೆ ಕೊರೊನಾ ಭೀತಿ; ಖ್ಯಾತ ಹಿರಿಯ ಕಿರುತೆರೆ ನಟಿ ಕೊವಿಡ್​ಗೆ ಬಲಿ
ಮಾಧವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 22, 2021 | 5:11 PM

ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡಿದ್ದ ಕೊವಿಡ್​ ಎರಡನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಕೊರೊನಾಗೆ ಬಲಿಯಾಗಿದ್ದರು. ಈಗ ಕೊವಿಡ್​ ಎರಡನೇ ಅಲೆ ತಣ್ಣಗಾಗಿದೆ. ಆದಾಗ್ಯೂ ಅಲ್ಲೊಂದು ಇಲ್ಲೊಂದು ಸಾವು ಕೊರೊನಾದಿಂದ ಸಂಭವಿಸುತ್ತಿದೆ. ಈಗ ಕಿರುತೆರೆಯ ಹಿರಿಯ ನಟಿ ಕೊವಿಡ್​ಗೆ ಬಲಿಯಾಗಿದ್ದಾರೆ. ಮಾರಕ ವೈರಸ್​ನಿಂದ ಅವರು ಮೃತಪಟ್ಟಿರುವ ವಿಚಾರ ಸಾಕಷ್ಟು ಮಂದಿಗೆ ನೋವು ತರಿಸಿದೆ. ಈ ಬಗ್ಗೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗುತ್ತಿದೆ.

‘ಅನುಪಮಾ’ ಧಾರಾವಾಹಿಯಲ್ಲಿ ಅನುಪಮಾ ತಾಯಿ ಆಗಿ ಮಾಧವಿ ಗೋಗಟೆ ಕಾಣಿಸಿಕೊಂಡಿದ್ದರು. ಅದ್ಭುತ ನಟನೆ ಮೂಲಕ ಮನೆ ಮಾತಾಗಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಮಾಧವಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಕೊವಿಡ್​ನಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಅವರ ಪರಿಸ್ಥಿತಿ ತುಂಬಾನೇ ಬಿಗಡಾಯಿಸಿತ್ತು. ಕೊನೆಗೂ ಅವರನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲ.

‘ಮಾಧವಿ ನೀವು ನನ್ನ ಆತ್ಮೀಯ ಸ್ನೇಹಿತೆ. ನೀವು ನಮ್ಮನ್ನು ಬಿಟ್ಟು ಹೋಗಿದ್ದೀರಿ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮದು ಇನ್ನೂ ಸಣ್ಣ ವಯಸ್ಸಾಗಿತ್ತು. ನೀವು ನನ್ನ ಮೆಸೇಜ್‌ಗೆ ಉತ್ತರಿಸದಿದ್ದಾಗ ನಾನು ನನ್ನ ಮೊಬೈಲ್​ ತೆಗೆದುಕೊಂಡು ನಿಮಗೆ ಕರೆ ಮಾಡಬೇಕಿತ್ತು. ನಾನೀಗ ಪಶ್ಚಾತ್ತಾಪ ಪಡಲಷ್ಟೇ ಸಾಧ್ಯ’ ಎಂದು ನೀಲು ಕೊಹ್ಲಿ ಬರೆದುಕೊಂಡಿದ್ದಾರೆ. ಇದಲ್ಲದೆ, ಸಾಕಷ್ಟು ಸೆಲೆಬ್ರಿಟಿಗಳು ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

View this post on Instagram

A post shared by Nilu Kohli (@nilukohli)

ಮಾಧವಿ ಸಿನಿಮಾ ಹಾಗೂ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದರು. ‘ತುಜಾ ಮಜಾ ಕುನಿಕಡೆ’ ಧಾರಾವಾಹಿ ಮೂಲಕ ಅವರು ಮರಾಠಿ ಕಿರುತೆರೆಗೂ ಕಾಲಿಟ್ಟಿದ್ದರು. ‘ಕೋಯಿ ಅಪ್ನಾ ಸಾ’, ‘ಐಸಾ ಕಭಿ ಸೋಚ್​ ನಾ ಥಾ’ ಮೊದಲಾದ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: Payal Rajput: ಫೋಟೋಶೂಟ್​ ವೇಳೆ ಮಿತಿ ಮೀರಿ ವರ್ತಿಸಿದ ಜೋಡಿ; ಕನ್ನಡಕ್ಕೆ ಕಾಲಿಡಲಿರುವ ನಟಿಯ ಹಾಟ್​​ ಫೋಟೋ ವೈರಲ್

ವಿಚಿತ್ರ ಹೆಸರಲ್ಲಿ ಅವಾರ್ಡ್​ ಕೊಡೋಕೆ ಮುಂದಾದ ಮಂಜು ಪಾವಗಡ; ಬಿಗ್​ ಬಾಸ್​ ವಿನ್ನರ್​ಗೆ ಏನಾಯ್ತು?