Payal Rajput: ಫೋಟೋಶೂಟ್​ ವೇಳೆ ಮಿತಿ ಮೀರಿ ವರ್ತಿಸಿದ ಜೋಡಿ; ಕನ್ನಡಕ್ಕೆ ಕಾಲಿಡಲಿರುವ ನಟಿಯ ಹಾಟ್​​ ಫೋಟೋ ವೈರಲ್

Payal Rajput Photos: ತೆಲುಗು, ಹಿಂದಿ, ಪಂಜಾಬಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ ಬಳಿಕ ಪಾಯಲ್​ ರಜಪೂತ್​ ಅವರಿಗೆ ಕನ್ನಡ ಚಿತ್ರರಂಗದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಈ ನಡುವೆ ಅವರ ಹಾಟ್​ ಫೋಟೋ ವೈರಲ್​ ಆಗಿದೆ.

Payal Rajput: ಫೋಟೋಶೂಟ್​ ವೇಳೆ ಮಿತಿ ಮೀರಿ ವರ್ತಿಸಿದ ಜೋಡಿ; ಕನ್ನಡಕ್ಕೆ ಕಾಲಿಡಲಿರುವ ನಟಿಯ ಹಾಟ್​​ ಫೋಟೋ ವೈರಲ್
ಪಾಯಲ್ ರಜಪೂತ್, ಸೌರಭ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 20, 2021 | 1:52 PM

ಬಣ್ಣದ ಜಗತ್ತಿನಲ್ಲಿ ಗ್ಲಾಮರ್​ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ತುಂಬ ಕಲರ್​ಫುಲ್​ ಆಗಿ ಫೋಟೋಶೂಟ್​ ಮಾಡಿಸಲಾಗುತ್ತದೆ. ನಟಿಯರು ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​ ನೀಡುವುದು ಕೂಡ ಹೊಸದೇನಲ್ಲ. ಆದರೂ ಕೂಡ ಕೆಲವೊಮ್ಮೆ ಜನರ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ‘ಆರ್​ಎಕ್ಸ್​ 100’ (RX 100 Movie) ಖ್ಯಾತಿಯ ನಟಿ ಪಾಯಲ್​ ರಜಪೂತ್ (Payal Rajput)​ ಅವರ ಒಂದು ಹೊಸ ಫೋಟೋಶೂಟ್​ ಕೂಡ ಹಾಗೆಯೇ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಹಂಚಿಕೊಂಡಿರುವ ಫೋಟೋಗಳನ್ನು ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ. ತುಂಬ ಮಿತಿ ಮೀರಿದ ರೀತಿಯಲ್ಲಿ ಪಾಯಲ್​ ರಜಪೂತ್​ ಪೋಸ್​ ನೀಡಿರುವುದನ್ನು ಕಂಡು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಅಷ್ಟಕ್ಕೂ ಈ ಫೋಟೋದಲ್ಲಿ ಪಾಯಲ್​ ಜೊತೆ ಇರುವುದು ಬೇರಾರೂ ಅಲ್ಲ, ಅವರ ಪ್ರಿಯಕರ ಸೌರಭ್​​ ಡಿಂಗ್ರಾ. 

ಪಾಯಲ್​ ರಜಪೂತ್​ ಮೂಲತಃ ಪಂಜಾಬ್​ನವರು. ತೆಲುಗು ಮತ್ತು ಪಂಬಾಬಿ ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಂದ ತೆಲುಗಿನ ‘ಆರ್​ಎಕ್ಸ್​ 100’ ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಿತು. ಈಗ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಡಾಲಿ ಧನಂಜಯ ನಟನೆಯ ‘ಹೆಡ್​ ಬುಷ್​’ ಸಿನಿಮಾದಲ್ಲಿ ಪಾಯಲ್​ ರಜಪೂತ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರ ನಡುವೆ ಅವರ ಈ ಹಾಟ್​ ಫೋಟೋಶೂಟ್​ ಗಮನ ಸೆಳೆಯುತ್ತಿದೆ.

‘ಆಹಾ’ ಓಟಿಟಿ ಮೂಲಕ ಬಿಡುಗಡೆಯಾದ ‘3 ರೋಸಸ್’ ವೆಬ್​ ಸಿರೀಸ್​ನಲ್ಲಿ ಪಾಯಲ್​ ರಜಪೂತ್​ ಮತ್ತು ಅವರ ಬಾಯ್​ಫ್ರೆಂಡ್​ ಸೌರಭ್​​ ಜೊತೆಯಾಗಿ ನಟಿಸಿದ್ದಾರೆ. ಈಗ ಈ ಜೋಡಿ ಒಂದು ಫೋಟೋಶೂಟ್​ ಮಾಡಿಸಿದೆ. ಪಾಯಲ್​ ಅವರ ಬಟ್ಟೆಯೊಳಗೆ ಸೌರಭ್​ ಕೈ ಹಾಕಿರುವ ಭಂಗಿಯಲ್ಲಿ ಪೋಸ್​ ನೀಡಿರುವುದು ಅನೇಕರ ಕಣ್ಣು ಕುಕ್ಕುತ್ತಿದೆ! ಈ ಫೋಟೋಗೆ ನೆಟ್ಟಿಗರಿಂದ ಚಿತ್ರ-ವಿಚಿತ್ರ ಕಮೆಂಟ್​ಗಳು ಬರುವುದು ಸಹಜ. ಹಾಗಾಗಿ ಅವರು ಕಮೆಂಟ್​ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ!

View this post on Instagram

A post shared by Payal Rajput (@rajputpaayal)

ಪ್ರಿಯತಮೆ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಸೌರಭ್​​ ಡಿಂಗ್ರಾ ಅವರು, ‘3 ರೋಸಸ್​ ಪೈಕಿ ಒಂದನ್ನು ಕದ್ದಿದ್ದೇನೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಅದೇ ಫೋಟೋವನ್ನು ಪಾಯಲ್​ ರಜಪೂತ್​ ಕೂಡ ಹಂಚಿಕೊಂಡಿದ್ದಾರೆ. ಅಂದಹಾಗೆ, ಪಾಯಲ್​ ಅವರು ಈ ರೀತಿ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದು ಇದೇ ಮೊದಲೇನಲ್ಲ. ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಕಣ್ಣಾಡಿಸಿದರೆ ಅನೇಕ ಪೋಟೋಗಳು ರಾರಾಜಿಸುತ್ತವೆ.

ತೆಲುಗು, ಹಿಂದಿ, ಪಂಜಾಬಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ ಬಳಿಕ ಪಾಯಲ್​ ರಜಪೂತ್​ ಅವರಿಗೆ ಕನ್ನಡ ಚಿತ್ರರಂಗದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಡಾಲಿ ಧನಂಜಯ ನಟಿಸುತ್ತಿರುವ ಬಹುನಿರೀಕ್ಷಿತ ‘ಹೆಡ್​ ಬುಷ್​’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ಪಾಯಲ್​ ಖುಷಿ ಆಗಿದ್ದಾರೆ.

ಇದನ್ನೂ ಓದಿ:

‘ಮುಂಗಾರು ಮಳೆ 2’ ನಟಿ ನೇಹಾ ಶೆಟ್ಟಿ ಆಕರ್ಷಕ ಫೋಟೋಶೂಟ್​

ಸುರಿಯುವ ಮಳೆಯಲ್ಲಿ ಪುನೀತ್ ಫೋಟೋ​ಗೆ ಕೈ ಮುಗಿದು ಕುಳಿತ ಅಭಿಮಾನಿ; ಇಲ್ಲಿದೆ ವೈರಲ್​ ವಿಡಿಯೋ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ