AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ

ವೀಣಾ ಅವರು 2019ರಲ್ಲಿ ಪ್ರಸಾರವಾದ ‘ಮರಾಠಿ ಬಿಗ್​ ಬಾಸ್​ 2’ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಅವರ ಬಗ್ಗೆ ಈ ಮೊದಲಿನಿಂದಲೂ ವದಂತಿ ಒಂದಿದೆ. ಈ ಬಗ್ಗೆ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ.

ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ
ವೀಣಾ
TV9 Web
| Edited By: |

Updated on: May 08, 2022 | 7:00 AM

Share

ಸೆಲೆಬ್ರಿಟಿಗಳು (Celerity) ತಮ್ಮ ಖಾಸಗಿ ಬದುಕಿನ ವಿಚಾರವನ್ನು ಆದಷ್ಟು ಗುಟ್ಟಾಗಿ ಇಡೋಕೆ ಪ್ರಯತ್ನಿಸುತ್ತಾರೆ. ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಪ್ರೀತಿಪಾತ್ರರರ ಜತೆ ಸುತ್ತಾಟ ನಡೆಸಿದ ಹೊರತಾಗಿಯೂ ಆ ಬಗ್ಗೆ ಹೇಳಿಕೊಳ್ಳೋಕೆ ಹಿಂದೇಟು ಹಾಕುತ್ತಾರೆ. ಈ ರೀತಿಯ ವಿಚಾರಗಳು ಮಾಧ್ಯಮ ಅಥವಾ ಫ್ಯಾನ್ಸ್ ಕಿವಿಗೆ ಬಿದ್ದರೆ ಅದು ನಾನಾ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಭಯ ಅವರನ್ನು ಸದಾ ಕಾಡುತ್ತಿರುತ್ತದೆ. ಈಗ ಮರಾಠಿ ಕಿರುತೆರೆ ನಟಿ ವೀಣಾ ಜಗ್​ತಾಪ್​ಗೆ (Veena Jagtap) ಅಭಿಮಾನಿಯೋರ್ವ ವೈಯಕ್ತಿಕ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ನಟಿ ಖಡಕ್ ಉತ್ತರ ನೀಡಿದ್ದಾರೆ.

ವೀಣಾ ಅವರು 2019ರಲ್ಲಿ ಪ್ರಸಾರವಾದ ‘ಮರಾಠಿ ಬಿಗ್​ ಬಾಸ್​ 2’ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಈ ರಿಯಾಲಿಟಿ ಶೋನಿಂದ ಅವರಿಗೆ ಆಫರ್​​ಗಳು ಹೆಚ್ಚಿದವು. ಸುಮಾರು 4 ಲಕ್ಷ ಜನರು ವೀಣಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸುತ್ತಿದ್ದಾರೆ. ಅವರ ಬಗ್ಗೆ ಈ ಮೊದಲಿನಿಂದಲೂ ವದಂತಿ ಒಂದಿದೆ. ಈ ಬಗ್ಗೆ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ ಮೂಡಿದ ಸಾಕಷ್ಟು ಉದಾಹರಣೆ ಇದೆ. ಈ ಸಾಲಿನಲ್ಲಿ ವೀಣಾ ಕೂಡ ಇದ್ದಾರೆ. ಬಿಗ್ ಬಾಸ್​ನ ಸಹ ಸ್ಪರ್ಧಿ ಆಗಿದ್ದ ಶಿವ್ ಠಾಕ್ರೆ ಜತೆ ವೀಣಾಗೆ ಪ್ರೀತಿ ಮೂಡಿದೆ ಎನ್ನುವ ಮಾತು ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಆದರೆ, ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ
Image
ಹುಟ್ಟುಹಬ್ಬದಂದು ರಕ್ತಸಿಕ್ತ ಲುಕ್​​ನಲ್ಲಿ ಬಂದ ವಿನಯ್ ರಾಜ್​​ಕುಮಾರ್
Image
ಸೋಶಿಯಲ್ ಮೀಡಿಯಾದಲ್ಲಿ ಹೀಟ್ ಹೆಚ್ಚಿಸಿದ ಸಮಂತಾ; ಹೊಸ ಫೋಟೋ ಇಲ್ಲಿದೆ
Image
ಕೃತಿ ಶೆಟ್ಟಿಗೆ ರಶ್ಮಿಕಾ ಮಂದಣ್ಣ ರೀತಿ ಆಗುವ ಕನಸು; ದೊಡ್ಡ ಹೀರೋಗಳಿಂದ ಬಂದ ಉತ್ತರದಿಂದ ನಿರಾಸೆ?
Image
‘ನಾನು ಮತ್ತು ನನ್ನವನು’; ಸ್ವಿಮ್ಮಿಂಗ್​ಪೂಲ್​ನಲ್ಲಿ ವಿಕ್ಕಿಯನ್ನು ತಬ್ಬಿ ಫೋಟೋ ಹಂಚಿಕೊಂಡ ಕತ್ರಿನಾ

ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಆಸ್ಕ್​ ಮಿ ಎನಿಥಿಂಗ್​ ಸೆಶನ್ ನಡೆಸಿದ್ದರು. ಈ ವೇಳೆ ಅವರಿಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗಿದ್ದವು. ಆ ಪೈಕಿ ರಿಲೇಶನ್​ಶಿಪ್​ ಬಗ್ಗೆಯೂ ಪ್ರಶ್ನೆ ಎದುರಾಯಿತು. ಇದಕ್ಕೆ ಅವರು ಉತ್ತರ ನೀಡದೇ ಇರಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ ಬದಲಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

‘ಮೊದಲು ಮತ್ತು ಕೊನೆಯದಾಗಿ ಹೇಳುತ್ತಿದ್ದೇನೆ. ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಾನು ಉತ್ತರ ನೀಡುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ಪೇಸ್​ ನೀಡಿ. ನಾನು ಎಂದಾದರೂ ಬಂದು ನಿಮ್ಮ ಕಥೆ ಏನು? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದೀನಾ? ನಿಮ್ಮದನ್ನು ನೀವು ನೋಡಿಕೊಳ್ಳಿ’ ಎಂದು ವೀಣಾ ಉತ್ತರಿಸಿದ್ದಾರೆ. ಕಳೆದ ವರ್ಷ ಇವರ ರಿಲೇಶನ್​ಶಿಪ್​ ಬ್ರೇಕಪ್​ನಲ್ಲಿ ಅಂತ್ಯವಾಗಿದೆ ಎಂಬ ವದಂತಿ ಹಬ್ಬಿತ್ತು. ವೀಣಾ ಅವರು 2013ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

Follow Us
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ