ಕಲರ್ಸ್​ನಲ್ಲಿ ಮತ್ತೆ ಬರ್ತಿದೆ ‘ರಾಜಾ-ರಾಣಿ’ ರಿಯಾಲಿಟಿ ಶೋ; ‘ಬಿಗ್​ ಬಾಸ್​’ ಬಗ್ಗೆ ಪ್ರಶ್ನೆ ಇಟ್ಟ ಫ್ಯಾನ್ಸ್

ಕಲರ್ಸ್​ನಲ್ಲಿ ಮತ್ತೆ ಬರ್ತಿದೆ ‘ರಾಜಾ-ರಾಣಿ’ ರಿಯಾಲಿಟಿ ಶೋ; ‘ಬಿಗ್​ ಬಾಸ್​’ ಬಗ್ಗೆ ಪ್ರಶ್ನೆ ಇಟ್ಟ ಫ್ಯಾನ್ಸ್
ರಾಜಾ-ರಾಣಿ

‘ಕಲರ್ಸ್​ ಕನ್ನಡ’ ಸದಾ ಹೊಸಹೊಸ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಎದುರು ಬರುತ್ತಿದೆ. ಈ ಬಾರಿ ‘ರಾಜಾ-ರಾಣಿ 2’ ಶೋಅನ್ನು ಮತ್ತೆ ತರಲಾಗುತ್ತಿದೆ.

TV9kannada Web Team

| Edited By: Rajesh Duggumane

May 15, 2022 | 7:00 AM

ಕಲರ್ಸ್​ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ-ರಾಣಿ’ ರಿಯಾಲಿಟಿ ಶೋ (Raja Rani Show) ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈ ಶೋಅನ್ನು ಮನೆ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ತಾರಾ ಈ ಶೋಗೆ ಜಡ್ಜ್​ ಆಗಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ಈ ಶೋ ಪೂರ್ಣಗೊಂಡಿದೆ. ಈಗ ‘ರಾಜಾ-ರಾಣಿ’ ಶೋ ಮತ್ತೆ ಬರುತ್ತಿದೆ. ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ವೀಕ್ಷಕರು ‘ಬಿಗ್​ ಬಾಸ್’ ಹೊಸ ಸೀಸನ್ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

‘ಕಲರ್ಸ್​ ಕನ್ನಡ’ ಸದಾ ಹೊಸಹೊಸ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಎದುರು ಬರುತ್ತಿದೆ. ಈ ಬಾರಿ ‘ರಾಜಾ-ರಾಣಿ 2’ ಶೋಅನ್ನು ಮತ್ತೆ ತರಲಾಗುತ್ತಿದೆ. ಮೊದಲ ಸೀಸನ್​ಅನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅನೇಕರಲ್ಲಿ ಇರುತ್ತದೆ. ‘ರಾಜಾ-ರಾಣಿ’ ವೇದಿಕೆ ಮೇಲೆ ಕಿರುತೆರೆ ಸೆಲೆಬ್ರಿಟಿಗಳ ಸಾಕಷ್ಟು ಗುಟ್ಟುಗಳು ರಟ್ಟಾಗಿತ್ತು. ಇದು ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿತ್ತು. ಈಗ ಎರಡನೇ ಸೀಸನ್​ನಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಬರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಕೊವಿಡ್ ಎರಡನೇ ಅಲೆ ಸಂದರ್ಭದಲ್ಲಿ ‘ಬಿಗ್ ಬಾಸ್ ಸೀಸನ್ 8’ ಪ್ರಸಾರ ಕಂಡಿತ್ತು. ಕೊವಿಡ್ ಕಾರಣದಿಂದ ಇದೇ ಮೊದಲ ಬಾರಿಗೆ ಅರ್ಧಕ್ಕೆ ನಿಂತಿದ್ದ ಶೋ ಮತ್ತೆ ಮುಂದುವರಿಸಿದರು. ಇದಾದ ಬಳಿಕ ‘ರಾಜಾ ರಾಣಿ’ ಶೋ ಪ್ರಸಾರ ಕಂಡಿದೆ. ಬಿಗ್​ ಬಾಸ್ ಆರಂಭಿಸದೆ ಈ ಶೋನ ಹೊಸ ಸೀಸನ್ ತರುತ್ತಿರುವುದು ಬಿಗ್ ಬಾಸ್ ಪ್ರಿಯರಿಗೆ ಬೇಸರ ಮೂಡಿಸಿದೆ.

‘ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ರಿಯಾಲಿಟಿ ಶೋ ರಾಜಾ-ರಾಣಿ ಮತ್ತೆ ಬರುತ್ತಿದೆ. ರಾಜಾ-ರಾಣಿ 2’ ಎಂದು ಕಲರ್ಸ್​ ಕನ್ನಡ ವಾಹಿನಿ ಇನ್​ಸ್ಟಾಗ್ರಾಮ್​ನಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋದ ಕಮೆಂಟ್ ಬಾಕ್ಸ್​ನಲ್ಲಿ ಫ್ಯಾನ್ಸ್ ‘ಬಿಗ್ ಬಾಸ್ ಹಾಗೂ ಮಜಾ ಟಾಕೀಸ್​ ಹೊಸ ಸೀಸನ್ ಯಾವಾಗ’ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ವಾಹಿನಿ ಕಡೆಯಿಂದ ಉತ್ತರ ಬಂದಿಲ್ಲ.

ಕಳೆದ ಸೀಸನ್​ನಲ್ಲಿ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಮೊದಲಾದವರು ಭಾಗಿ ಆಗಿದ್ದರು. ಅಂತಿಮವಾಗಿ ‘ಗೊಂಬೆ’ ನೇಹಾ ಗೌಡ ಹಾಗೂ ಅವರ ಪತಿ ಚಂದನ್​ ಗೆದ್ದು ಬೀಗಿದ್ದರು. ಈ ಮೂಲಕ ರಾಜಾ-ರಾಣಿ ಕಿರೀಟ ತೊಟ್ಟಿದ್ದರು. ರಿಯಾಲಿಟಿ ಶೋ ಯಾವಾಗ ಪ್ರಸಾರವಾಗಲಿದೆ ಎಂಬ ಬಗ್ಗೆ ಘೋಷಣೆ ಆಗಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada