‘ಶಾರ್ಕ್ ಟ್ಯಾಂಕ್’ಗೆ ಪ್ರತಿ ಜಡ್ಜ್ಗಳು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಅಚ್ಚರಿಯ ವಿಚಾರ
ಅಶ್ನೀರ್, ವಿನೀತ್ ಸಿಂಗ್, ಪೀಯುಶ್ ಬನ್ಸಲ್, ನಮಿತಾ ಥಾಪರ್, ಅಮನ್ ಗುಪ್ತಾ, ಘಜಲ್, ಅನುಪಮ್ ಮಿತ್ತಲ್ ಈ ಶೋನಲ್ಲಿ ಶಾರ್ಕ್ ಆಗಿ ಕಾಣಿಸಿಕೊಂಡಿದ್ದರು. ಇವರು ಪ್ರತಿ ಎಪಿಸೋಡ್‌ಗೆ ಲಕ್ಷ ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು.
‘ಶಾರ್ಕ್ ಟ್ಯಾಂಕ್’ ರಿಯಾಲಿಟಿ ಶೋನ (Shark Tank Show) ಮೊದಲ ಸೀಸನ್ ಪೂರ್ಣಗೊಂಡಿದೆ. ಈ ಶೋ ವೀಕ್ಷಕರಿಗೆ ಇಷ್ಟವಾಗಿದೆ. ಸೋನಿಯಲ್ಲಿ ಪ್ರಸಾರವಾಗಿದ್ದ ಈ ಶೋನ ಎರಡನೇ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಇದು ಭಾರತದ ವೀಕ್ಷಕರ ಪಾಲಿಗೆ ಹೊಸ ರೀತಿಯ ಶೋ. ಸ್ಟಾರ್ಟ್ಅಪ್ ಆರಂಭಿಸಿದವರು ಹೂಡಿಕೆ ಪಡೆಯಲು ಈ ಶೋಗೆ ಬರುತ್ತಾರೆ. ಈ ಶೋನ ಶಾರ್ಕ್ಗಳ (ಜಡ್ಜ್) ಬಳಿ ತಮ್ಮ ಐಡಿಯಾ ಹೇಳುತ್ತಾರೆ. ಈ ಐಡಿಯಾ ಇಷ್ಟವಾದರೆ ಶಾರ್ಕ್ಗಳು ಹಣ ಹೂಡಿಕೆಗೆ ಒಪ್ಪಿಕೊಳ್ಳುತ್ತಾರೆ. ಭಾರತ್ಪೇನ (BharatPe) ಸಹ ಸಂಸ್ಥಾಪಕ ಹಾಗೂ ಮಾಜಿ ಮ್ಯಾನೆಜಿಂಗ್ ಡೈರೆಕ್ಟರ್ ಅಶ್ನೀರ್ ಗ್ರೋವರ್ (Ashneer Grover) ಅವರು ಶಾರ್ಕ್ ಟ್ಯಾಂಕ್ನ ಮೊದಲ ಸೀಸನ್ನಲ್ಲಿ ಜಡ್ಜ್ ಆಗಿದ್ದರು. ಈಗ ಅವರು ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.
ಅಶ್ನೀರ್, ವಿನೀತ್ ಸಿಂಗ್, ಪೀಯುಶ್ ಬನ್ಸಲ್, ನಮಿತಾ ಥಾಪರ್, ಅಮನ್ ಗುಪ್ತಾ, ಘಜಲ್, ಅನುಪಮ್ ಮಿತ್ತಲ್ ಈ ಶೋನಲ್ಲಿ ಶಾರ್ಕ್ ಆಗಿ ಕಾಣಿಸಿಕೊಂಡಿದ್ದರು. ಇವರು ಪ್ರತಿ ಎಪಿಸೋಡ್‌ಗೆ ಲಕ್ಷ ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ಅಶ್ನೀರ್ ಅಲ್ಲಗಳೆದಿದ್ದಾರೆ. ಈ ಶೋನ ಯಾವ ಜಡ್ಜ್ಗಳಿಗೂ ಸಂಭಾವನೆ ನೀಡಿಲ್ಲ.
‘ನಾವೇನೂ ಹಣ ಮಾಡುವ ಉದ್ದೇಶದಿಂದ ಶೋಗೆ ಹೋಗಿಲ್ಲ. ನಾವು ಈ ಶೋನಿಂದ ಹಣ ಗಳಿಸಲಿಲ್ಲ. ನಾವು ಪ್ರತಿ ಎಪಿಸೋಡ್‌ಗೆ 10 ಲಕ್ಷ ರೂಪಾಯಿ ಪಡೆದಿದ್ದೇವೆ ಎಂದು ವರದಿ ಆಗಿದೆ. ಆದರೆ ನನಗೆ 5 ಲಕ್ಷ ರೂಪಾಯಿ ಸಿಕ್ಕಿದ್ದರೂ ಖುಷಿಪಡುತ್ತಿದ್ದೆ. ಈ ಶೋನ ಪರಿಕಲ್ಪನೆ ತುಂಬಾ ಸರಳ. ನಮ್ಮಲ್ಲಿ ಹಣವಿದೆ. ಹೀಗಾಗಿ ಸ್ವಲ್ಪ ಹಣವನ್ನು ಇಲ್ಲಿ ಹೂಡಿಕೆ ಮಾಡಲು ಕೋರಿದರು. ಈ ಶೋಗೆ ಒಬ್ಬರಿಗೆ 10 ಕೋಟಿ ರೂಪಾಯಿ ಹೂಡಿಕೆ ಮಾಡಲು ಅವಕಾಶ ಇತ್ತು. ನಾವು ಇದಕ್ಕೆ ಓಕೆ ಎಂದೆವು’ ಎಂದಿದ್ದಾರೆ ಅಶ್ನೀರ್.
ಸಂಭಾವನೆಯನ್ನು ಪಡೆದೇ ಇಲ್ಲ ಎಂದು ಹೇಳಿರುವ ಅಶ್ನೀರ್, ‘ನಮಗೆ ಯಾವುದೇ ಸಂಚಿಕೆಗೆ ಸಂಭಾವನೆ ನೀಡಿಲ್ಲ. ನಿಜವಾಗಿ ಹೇಳಬೇಕೆಂದರೆ ನಾವು ಹಲವು ಗಂಟೆಗಳ ಬಂಧಿತ ಕಾರ್ಮಿಕರಂತೆ ಕೆಲಸ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಅಶ್ನೀರ್ ಅವರ ಆಯ್ಕೆ ವೇಳೆ ಸೋನಿ ಅವರು ಮನೆಯಲ್ಲೇ ಶೂಟಿಂಗ್ ನಡೆಸಿದ್ದರು ಅನ್ನೋದು ವಿಶೇಷ.
ಹಣ ದುರುಪಯೋಗದ ಆರೋಪದ ನಂತರ ಮಾರ್ಚ್‌ನಲ್ಲಿ ಅಶ್ನೀರ್ ಭಾರತ್‌ಪೇ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅಶ್ನೀರ್ ಹಾಗೂ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ಕಂಪನಿಯ ಮಂಡಳಿಯಿಂದ ತೆಗೆದುಹಾಕಲಾಯಿತು.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.