Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ. ಹೆಂಡತಿಯ […]

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!
Follow us
KUSHAL V
|

Updated on: Aug 16, 2020 | 3:12 PM

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ.

ಹೆಂಡತಿಯ ಚೀತ್ಕಾರ ಕೇಳಿದ ಪತಿ ಮಾರ್ಕ್​ ಱಪ್ಲೇ ಕೂಡಲೇ ಆಕೆಯ ಬಳಿಗೆ ಈಜಿಬಂದು ಶಾರ್ಕ್ ಬಾಯಲ್ಲಿ ಸಿಲುಕಿದ್ದ ಪತ್ನಿಯ ಬಲಗಾಲನ್ನು ಹೊರತೆಗೆಯಲು ಪ್ರಯತ್ನಿಸಿದ. ಆದರೆ, ಹೆಂಡತಿಯ ಕಾಲನ್ನು ಶಾರ್ಕ್​ ಬಲವಾಗಿ ಕಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ಸಿಟ್ಟಿಗೆದ್ದ ಮಾರ್ಕ್ ಶಾರ್ಕ್​ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾನಂತೆ.

ಮಾರ್ಕ್​ನ ಆಕ್ರಮಣದಿಂದ ಕೊಂಚ ವಿಚಲಿತಗೊಂಡ ಶಾರ್ಕ್ ಪತ್ನಿಯ ಕಾಲನ್ನು ಬಿಡುಗಡೆ ಮಾಡಿ ಅಲ್ಲಿಂದ ಪರಾರಿಯಾಗಿದೆ. ಇತರರ ಸಹಾಯದಿಂದ ಆಕೆಯನ್ನ ತೀರಕ್ಕೆ ಕರೆತಂದ ಮಾರ್ಕ್​ ಕೂಡಲೇ ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ಅವಳ ಪ್ರಾಣ ಉಳಿಸಿದ್ದಾನೆ. ಒಟ್ನಲ್ಲಿ, ಸಾವಿನ ದವಡೆಯಿಂದ ಹೆಂಡತಿಯನ್ನ ಪಾರುಮಾಡಿದ ಮಾರ್ಕ್​ ನಿಜಕ್ಕೂ ಗಂಡೆದೆಯ ಗಂಡು ಅಲ್ಲ ಗಂಡೆದೆಯ ಗಂಡ ಎಂದು ತೋರಿಸಿಕೊಟ್ಟಿದ್ದಾನೆ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !