‘ನಿಮಗೆ ವಯಸ್ಸಾಗಿದೆ ಅಂದ್ರೆ ಯಾರು ನಂಬ್ತಾರೆ’? ಲಕ್ಷ್ಮೀ-ಶಿವಣ್ಣ ಡ್ಯಾನ್ಸ್ ನೋಡಿ ರವಿಚಂದ್ರನ್ ಮಾತು

ಜಡ್ಜ್​ಗಳಾದ ರವಿಚಂದ್ರನ್, ಶಿವರಾಜ್​ಕುಮಾರ್, ರಕ್ಷಿತಾ, ಲಕ್ಷ್ಮೀ ಹಾಗೂ ರಚಿತಾ ರಾಮ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರು. ವಿಶೇಷ ಎಂದರೆ, ಲಕ್ಷ್ಮೀ ಹಾಗೂ ಶಿವಣ್ಣ ‘ನಾ ನಿನ್ನ ಮರೆಯಲಾರೆ..’ ಹಾಡಿಗೆ ಹೆಜ್ಜೆ ಹಾಕಿದರು. ‘

‘ನಿಮಗೆ ವಯಸ್ಸಾಗಿದೆ ಅಂದ್ರೆ ಯಾರು ನಂಬ್ತಾರೆ’? ಲಕ್ಷ್ಮೀ-ಶಿವಣ್ಣ ಡ್ಯಾನ್ಸ್ ನೋಡಿ ರವಿಚಂದ್ರನ್ ಮಾತು
ಶಿವಣ್ಣ-ಲಕ್ಷ್ಮೀ ಮತ್ತು ರವಿ ಚಂದ್ರನ್
Follow us
| Updated By: ರಾಜೇಶ್ ದುಗ್ಗುಮನೆ

Updated on:Jun 06, 2022 | 3:01 PM

ಎರಡು ರಿಯಾಲಿಟಿ ಶೋಗಳ ಸ್ಪರ್ಧಿಗಳು ಹಾಗೂ ಜಡ್ಜ್​​ಗಳು ಒಂದೇ ವೇದಿಕೆ ಏರಿದರೆ ವೀಕ್ಷಕರಿಗೆ ಡಬಲ್ ಮಜಾ ಗ್ಯಾರಂಟಿ. ಕಳೆದ ವಾರಾಂತ್ಯದಲ್ಲಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್​ 4’ ಮತ್ತು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ 6’ನ ಶೋಗಳು ಒಂದಾಗಿವೆ. ಈ ಮಹಾ ಸಂಗಮದ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಲ್ಯದ ಸ್ನೇಹಿತರಾಗಿರುವ ರವಿಚಂದ್ರನ್ (Ravichandran) ಹಾಗೂ ಶಿವಣ್ಣ (Shivarajkumar) ಅವರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಇವರ ಡ್ಯಾನ್ಸ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

‘ಡ್ರಾಮಾ ಜ್ಯೂನಿಯರ್ಸ್​’ ಅನೇಕ ಟ್ಯಾಲೆಂಟ್​ಗಳಿಗೆ ವೇದಿಕೆ ಆಗಿದೆ. ಇದರಿಂದ ಅನೇಕ ಕಲಾವಿದರು ಬಾಳು ಕಟ್ಟಿಕೊಂಡಿದ್ದಾರೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ನಿಂದ’ ಸಾಕಷ್ಟು ಡ್ಯಾನ್ಸರ್​ಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಪಡಿಸಲು ಅವಕಾಶ ಸಿಕ್ಕಿದೆ. ಈ ವರ್ಷ ಈ ಎರಡೂ ರಿಯಾಲಿಟಿ ಶೋಗಳು ಒಟ್ಟೊಟ್ಟಿಗೆ ನಡೆಯುತ್ತಿವೆ. ಈ ಕಾರಣಕ್ಕೆ ವಾಹಿನಿಯವರು ಮಹಾಸಂಗಮ ಏರ್ಪಡಿಸಿದ್ದರು.

ಇದನ್ನೂ ಓದಿ
Image
ಸೋತ ಸಿನಿಮಾಗಳ ಹೊಣೆ ನನ್ನದೇ ಎಂದ ರವಿಚಂದ್ರನ್
Image
ಎಸ್​ಎಸ್​ಎಲ್​ಸಿಯಲ್ಲಿ ಶೇ.99 ಅಂಕ ಪಡೆದ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಮಹತಿ ಭಟ್
Image
ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ
Image
ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ

ಜಡ್ಜ್​ಗಳಾದ ರವಿಚಂದ್ರನ್, ಶಿವರಾಜ್​ಕುಮಾರ್, ರಕ್ಷಿತಾ, ಲಕ್ಷ್ಮೀ ಹಾಗೂ ರಚಿತಾ ರಾಮ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರು. ವಿಶೇಷ ಎಂದರೆ, ಲಕ್ಷ್ಮೀ ಹಾಗೂ ಶಿವಣ್ಣ ‘ನಾ ನಿನ್ನ ಮರೆಯಲಾರೆ..’ ಹಾಡಿಗೆ ಹೆಜ್ಜೆ ಹಾಕಿದರು. ‘ರಾಜ್​ಕುಮಾರ್ ಅವರು ಮತ್ತೆ ನೆನಪಾದರು. ನಿಮಗೆ ವಯಸ್ಸಾಗಿದೆ ಎಂದರೆ ಯಾರು ನಂಬುತ್ತಾರೆ’ ಎಂದು ರವಿಚಂದ್ರನ್ ಮೆಚ್ಚುಗೆ ಸೂಚಿಸಿದರು. ಈ ವೇಳೆ ಲಕ್ಷ್ಮೀ ಅವರು ನಾಚಿ ನೀರಾದರು.

ಒಂದು ವಾರದಿಂದಲೇ ಜೀ ಕನ್ನಡ ವಾಹಿನಿ ಈ ಮಹಾಸಂಗಮಕ್ಕೆ ಸಂಬಂಧಿಸಿದ ಪ್ರೋಮೋಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಲಿತ್ತು. ಹೀಗಾಗಿ, ಈ ಮಹಾಸಂಗಮದ ಬಗ್ಗೆ ನಿರೀಕ್ಷೆ ಮೂಡಿತ್ತು. ವೀಕೆಂಡ್​ನಲ್ಲಿ ಮನೆ ಮಂದಿ ಈ ಮಹಾಸಂಗಮ ನೋಡಿ ಸಖತ್ ಖುಷಿಪಟ್ಟಿದ್ದಾರೆ. ರಾತ್ರಿ 7.30ರಿಂದ ರಾತ್ರಿ 10.30ರವರೆಗೆ ಈ ಶೋ ಪ್ರಸಾರವಾಗಿದೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ

ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್ 4’ ಪ್ರಸಾರ ಶುರು ಆಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಬಿತ್ತರ ಆಗುತ್ತಿದೆ. ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇದೆ.  ಇದೇ ಮೊದಲ ಬಾರಿಗೆ ‘ಡ್ರಾಮಾ ಜ್ಯೂನಿಯರ್ಸ್’ ಜಡ್ಜ್ ಸ್ಥಾನಕ್ಕೆ ರವಿಚಂದ್ರನ್ ಮತ್ತು ರಚಿತಾ ರಾಮ್ ಆಗಮಿಸಿರುವುದು ವಿಶೇಷ. ‘ಡಿಕೆಡಿ 6’ರಲ್ಲಿ ಶಿವಣ್ಣ ಹಾಗೂ ರಕ್ಷಿತಾ ರಾಮ್ ಜಡ್ಜ್​ ಸ್ಥಾನ ಅಲಂಕರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Mon, 6 June 22

ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಜನರೊಂದಿಗಿನ ಸಂಪರ್ಕ ನನಗೆ ಮತಗಳಲ್ಲಿ ಪರಿವರ್ತನೆಯಾಗುತ್ತದೆ: ಯೋಗೇಶ್ವರ್
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಹಾಸನಾಂಬ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಚಿಕ್ಕಮಗಳೂರು: ದೇವಿರಮ್ಮ ದರ್ಶನಕ್ಕೆ ಬಂದಿದ್ದ ಭಕ್ತೆ ಅಸ್ವಸ್ಥ
ಅಪರೂಪದ ಮಹಿಳೆ ವಿಜಯಲಕ್ಷ್ಮಿ ನಿಜ ಅರ್ಥದಲ್ಲಿ ಕ್ಷಮಯಾ ಧರಿತ್ರಿ: ಯಮುನಾ
ಅಪರೂಪದ ಮಹಿಳೆ ವಿಜಯಲಕ್ಷ್ಮಿ ನಿಜ ಅರ್ಥದಲ್ಲಿ ಕ್ಷಮಯಾ ಧರಿತ್ರಿ: ಯಮುನಾ
ಮಸ್ಟಾಂಗ್, ವೆಲ್​ಫೈಯರ್​; ಹೇಗಿದೆ ನೋಡಿ ದರ್ಶನ್ ಕಾರ್ ಕಲೆಕ್ಷನ್
ಮಸ್ಟಾಂಗ್, ವೆಲ್​ಫೈಯರ್​; ಹೇಗಿದೆ ನೋಡಿ ದರ್ಶನ್ ಕಾರ್ ಕಲೆಕ್ಷನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಬೆನ್ನುನೋವಿನ ಸಮಸ್ಯೆಗಾಗಿ ಇಂದು ಮಧ್ಯಾಹ್ನ ವೈದ್ಯರನ್ನು ಕಾಣಲಿರುವ ದರ್ಶನ್
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಕಡಿತಗೊಳಿಸುವ ಸಾಧ್ಯತೆ: ಕುಮಾರಸ್ವಾಮಿ