ಸೋತ ಸಿನಿಮಾಗಳ ಹೊಣೆ ನನ್ನದೇ ಎಂದ ರವಿಚಂದ್ರನ್
ಗೆಲುವಿನ ಕ್ರೆಡಿಟ್ ಬೇರೆಯವರಿಗೆ ಕೊಡುವ ಅವರು, ಸೋತ ಸಿನಿಮಾಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಾವೇ ತೆಗೆದುಕೊಳ್ಳುತ್ತಾರೆ. ಮೇ 30 ರವಿಚಂದ್ರನ್ ಅವರ ಜನ್ಮದಿನ. ಆ ಪ್ರಯುಕ್ತ ಟಿವಿ9 ಕನ್ನಡದಲ್ಲಿ ಅವರ ವಿಶೇಷ ಸಂದರ್ಶನ ಪ್ರಸಾರವಾಯಿತು. ಈ ವೇಳೆ ಅವರು ಗೆಲುವು ಸೋಲಿನ ಬಗ್ಗೆ ಮಾತನಾಡಿದ್ದಾರೆ.
ರವಿಚಂದ್ರನ್ ಅವರು (V Ravichandran) ಸ್ಯಾಂಡಲ್ವುಡ್ನಲ್ಲಿ ನಟನಾಗಿ, ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ಹಲವು ಚಿತ್ರಗಳು ಗೆದ್ದಿವೆ. ಇನ್ನೂ ಕೆಲವು ಸೋತಿದೆ. ಸಾಮಾನ್ಯವಾಗಿ ಜನರು ಸಿನಿಮಾ ಗೆದ್ದಾಗ ಗೆಲುವು ತಮ್ಮದು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸೋತಾಗ ಬೇರೆಯವರ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ, ರವಿಚಂದ್ರನ್ ಈ ವಿಚಾರದಲ್ಲಿ ಭಿನ್ನ. ಗೆಲುವಿನ ಕ್ರೆಡಿಟ್ ಬೇರೆಯವರಿಗೆ ಕೊಡುವ ಅವರು, ಸೋತ ಸಿನಿಮಾಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಾವೇ ತೆಗೆದುಕೊಳ್ಳುತ್ತಾರೆ. ಮೇ 30 ರವಿಚಂದ್ರನ್ ಅವರ ಜನ್ಮದಿನ. ಆ ಪ್ರಯುಕ್ತ ಟಿವಿ9 ಕನ್ನಡದಲ್ಲಿ ಅವರ ವಿಶೇಷ ಸಂದರ್ಶನ ಪ್ರಸಾರವಾಯಿತು. ಈ ವೇಳೆ ಅವರು ಗೆಲುವು ಸೋಲಿನ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 31, 2022 08:24 AM
Latest Videos