AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ

‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರೋಮೋ ತುಂಬ ಇಂಟರೆಸ್ಟಿಂಗ್​ ಆಗಿ ಮೂಡಿಬಂದಿದೆ. ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ರಚಿತಾ ರಾಮ್​ ಹಂಚಿಕೊಂಡಿದ್ದಾರೆ.

ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ
ರಚಿತಾ ರಾಮ್, ಲಕ್ಷ್ಮೀ
TV9 Web
| Edited By: |

Updated on: Mar 12, 2022 | 12:02 PM

Share

ಶೂಟಿಂಗ್​ ಸಲುವಾಗಿ ಸ್ಟುಡಿಯೋಗೆ ತೆರಳಲು ನಟಿ ರಚಿತಾ ರಾಮ್​ (Rachita Ram) ಅವರು ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಸ್ಟುಡಿಯೋಗೆ ತೆರಳುವಂತೆ ಡ್ರೈವರ್​ಗೆ ಸೂಚಿಸುತ್ತಾರೆ. ಆಗ ಅವರಿಗೆ ಶಾಕ್​ ಎದುರಾಗುತ್ತದೆ. ಹಿಂಬದಿಯ ಸೀಟ್​ನಲ್ಲಿ ಕುಳಿತುಕೊಂಡ ಇಬ್ಬರು ಗನ್​ ತೋರಿಸುತ್ತಾರೆ. ‘ಏ ಹುಡುಗಿ.. ನೀನು ಎಲ್ಲಿ ಹೋಗಬೇಕು ಅಂತ ನಾವು ಡಿಸೈಡ್​ ಮಾಡ್ತೀವಿ’ ಅಂತ ಬೆದರಿಸುತ್ತಾರೆ. ಇದೆಲ್ಲ ಏನು ಎಂಬಂತೆ ಡ್ರೈವರ್ ಕಡೆಗೆ ರಚಿತಾ ಪ್ರಶ್ನೆ ಎಸೆಯುತ್ತಾರೆ. ಡ್ರೈವರ್ ಕೆಕ್ಕರಿಸಿ ನೋಡುತ್ತಾನೆ. ಆಗ ಶುರುವಾಗುತ್ತದೆ ರಚಿತಾಗೆ ಅಸಲಿ ಸಂಕಟ. ಅಷ್ಟು ಹೊತ್ತಿಗಾಗಲೇ ಅವರು ಅಪಹರಣಕಾರರ ಹಿಡಿತದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಖಚಿತವಾಗುತ್ತದೆ. ಅವರನ್ನು ಸ್ಟುಡಿಯೋ ಬದಲಿಗೆ ಏರ್​ಪೋರ್ಟ್​ಗೆ ಕರೆದುಕೊಂಡು ಹೋಗಲಾಗುತ್ತದೆ. ಇದು ರಚಿತಾ ರಾಮ್​ ಕಿಡ್ನಾಪ್​ ಆಗುವ ದೃಶ್ಯ. ಹಾಗಂತ ಅವರು ನಿಜವಾಗಿಯೂ ಅಪಹರಣಕ್ಕೆ ಒಳಗಾಗಿಲ್ಲ. ಇದೊಂದು ಡ್ರಾಮಾ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಡ್ರಾಮಾ ಜ್ಯೂನಿಯರ್ಸ್​ 4’  (Drama Juniors 4) ಕಾರ್ಯಕ್ರಮದ ಪ್ರೋಮೋ. ಈ ಹಿಂದೆ ನಟ ರವಿಚಂದ್ರನ್​ ಅವರನ್ನು ಮಕ್ಕಳು ಕಿಡ್ನಾಪ್​ ಮಾಡುವ ರೀತಿಯಲ್ಲಿ ಪ್ರೋಮೋ ತಯಾರಿಸಲಾಗಿತ್ತು. ಈಗ ಅದೇ ರೀತಿ ರಚಿತಾ ರಾಮ್​ ಕಿಡ್ನಾಪ್​ ಕಹಾನಿಯನ್ನು ಜನರ ಮುಂದೆ ಇರಿಸಲಾಗಿದೆ.

ಅಪಹರಣಕಾರರ ಕೈಗೆ ಸಿಕ್ಕ ರಚಿತಾ ರಾಮ್​ ಅವರು ವಿಮಾನಕ್ಕೆ ಬರುತ್ತಾರೆ. ಅಲ್ಲಿ ಬರೀ ಮಕ್ಕಳದ್ದೇ ಸಾಮ್ರಾಜ್ಯ. ‘ನನ್ನನ್ನು ಯಾರೋ ಕಿಡ್ಯಾಪ್​ ಮಾಡಿದ್ದಾರೆ. ದಯವಿಟ್ಟು ಸಹಾಯ ಮಾಡಿ..’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗುವುದಿಲ್ಲ. ಕಡೆಗೂ ವಿಮಾನದ ಒಳಗೆ ಬಂದು ಕುಳಿತಾಗ ಅಲ್ಲಿ ರವಿಚಂದ್ರನ್​ ಕೂತಿರುತ್ತಾರೆ. ‘ಖ್ಯಾತ ನಟ ರವಿಚಂದ್ರನ್​ ಅಪಹರಣ’ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅವರು ಓದುತ್ತ ಕುಳಿತಿರುತ್ತಾರೆ. ‘ಇದೆಲ್ಲ ಇವನದ್ದೇ ಕೆಲಸ’ ಎಂದು ಮಾಸ್ಟರ್​ ಆನಂದ್​ ಕಡೆಗೆ ರವಿಚಂದ್ರನ್​ ಕೈ ತೋರಿಸುತ್ತಾರೆ. ‘ಇದರಲ್ಲಿ ನಂದೇನೂ ಇಲ್ಲ. ಎಲ್ಲಾ ಪ್ಲಾನ್​ ನಮ್​ ಬಾಸ್​ ಅವರದ್ದೇ’ ಅಂತ ಆನಂದ್​ ಜಾರಿಕೊಂಡಾಗ ಹಿರಿಯ ನಟಿ ಲಕ್ಷ್ಮೀ ಎಂಟ್ರಿ ಆಗುತ್ತದೆ.

‘ಈ ಸೀಸನ್​ನಲ್ಲಿ ನಮ್ಮ ಜೊತೆ ಸೇರಿದ್ದಕ್ಕೆ ತುಂಬ ಸಂತೋಷ. ಈಗ ಆರಾಮಾಗಿ ಕುಳಿತುಕೊಳ್ಳಿ. ಮುಂದೆ ಮಾತಾಡೋಕೆ ಇನ್ನೂ ತುಂಬಾ ಇದೆ. ಈಗ ಜರ್ನಿ ಶುರು ಮಾಡೋಣ’ ಎಂದು ಲಕ್ಷ್ಮೀ ಹೇಳುತ್ತಾರೆ. ಈ ರೀತಿ ತುಂಬ ಇಂಟರೆಸ್ಟಿಂಗ್​ ಆಗಿ ‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರೋಮೋ ಮೂಡಿಬಂದಿದೆ. ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ರಚಿತಾ ರಾಮ್​ ಹಂಚಿಕೊಂಡಿದ್ದಾರೆ.

ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರಸಾರ ಶುರು ಆಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30 ಬಿತ್ತರ ಆಗುವ ಈ ಶೋ ನೋಡಲು ವೀಕ್ಷಕರು ಕಾದಿದ್ದಾರೆ. ಪ್ರೋಮೋ ನೋಡಿದ ಬಳಿಕ ವೀಕ್ಷಕರ ಕೌತುಕ ಹೆಚ್ಚಿದೆ. ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇರುತ್ತದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗಿಸಿದೆ. ಇದೇ ಮೊದಲ ಬಾರಿಗೆ ‘ಡ್ರಾಮಾ ಜ್ಯೂನಿಯರ್ಸ್’ ಜಡ್ಜ್​ ಸ್ಥಾನಕ್ಕೆ ರವಿಚಂದ್ರನ್​ ಮತ್ತು ರಚಿತಾ ರಾಮ್​ ಆಗಮಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

‘ಮ್ಯಾಟ್ನಿ’ ಶೂಟಿಂಗ್​ ಸೆಟ್​​ನಲ್ಲಿ ಸತೀಶ್​ ‘ನೀನಾಸಂ’, ರಚಿತಾ ರಾಮ್​; ಇಲ್ಲಿವೆ ಫೋಟೋಗಳು

‘ಅಮ್ಮ ಇಲ್ಲದಿದ್ದರೆ ಎಷ್ಟು ಕಷ್ಟ ಅಂತ ನಮಗೆ ಗೊತ್ತು’: ರವಿಚಂದ್ರನ್​ ತಾಯಿಯ ಅಂತಿಮ ದರ್ಶನ ಪಡೆದ ರಾಘಣ್ಣ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್