‘ನನ್ನಮ್ಮ ಸೂಪರ್ ಸ್ಟಾರ್​ ಜಡ್ಜ್​​ಗಳಿಗೆ ಸೃಜನ್ ಲೋಕೇಶ್​​ ವಿಶೇಷ ಗಿಫ್ಟ್’; ಗಳಗಳನೆ ಅತ್ತ ಅನುಪಮಾ ಗೌಡ​

ಸೃಜನ್​ ಲೋಕೇಶ್​ ಅವರು ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎಲ್ಲರನ್ನೂ ನಗಿಸುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಈ ಕಾರಣಕ್ಕೆ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ.

‘ನನ್ನಮ್ಮ ಸೂಪರ್ ಸ್ಟಾರ್​ ಜಡ್ಜ್​​ಗಳಿಗೆ ಸೃಜನ್ ಲೋಕೇಶ್​​ ವಿಶೇಷ ಗಿಫ್ಟ್’; ಗಳಗಳನೆ ಅತ್ತ ಅನುಪಮಾ ಗೌಡ​
ಅನುಪಮಾ-ಸೃಜನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 13, 2022 | 4:58 PM

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಶೋ ಹೆಚ್ಚು ಜನಪ್ರಿಯತೆ ಪಡೆದಿದೆ. ಕಿರುತೆರೆ ಲೋಕದಲ್ಲಿ ಈ ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕ ಬಳಗ ಇದೆ. ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ನೋಡುಗರಿಗೆ ಮಜ ನೀಡುತ್ತದೆ. ಅದರಲ್ಲೂ ಮಾಸ್ಟರ್​ ಆನಂದ್ ಮಗಳು ಆಡುವ ಚೂಟಿ ಮಾತುಗಳು ಸಖತ್​ ಮನರಂಜನೆ ನೀಡುತ್ತದೆ. ಇನ್ನು, ತಾರಾ ಅನುರಾಧ ಹಾಗೂ ಅನು ಪ್ರಭಾಕರ್​ ಹಾಗೂ ಸೃಜನ್​ ಲೋಕೇಶ್​ ಜಡ್ಜ್​ ಸ್ಥಾನದಲ್ಲಿ ಕೂತಿದ್ದಾರೆ. ಅನುಪಮಾ ಗೌಡ ಅವರು ತಮ್ಮ ನಿರೂಪಣೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆ ಈ ಶೋ ಸಖತ್​ ಮನರಂಜನೆ ನೀಡುತ್ತಿದೆ. ಈ ವಾರ ಎಪಿಸೋಡ್​ ವಿಶೇಷವಾಗಿರಲಿದೆ ಎಂಬುದಕ್ಕೆ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಸಾಕ್ಷಿ.

ಸೃಜನ್​ ಲೋಕೇಶ್​ ಅವರು ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎಲ್ಲರನ್ನೂ ನಗಿಸುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಈ ಕಾರಣಕ್ಕೆ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ಸೃಜನ್​ ಲೋಕೇಶ್​​ ಅವರು ತಾರಾ, ಅನು ಪ್ರಭಾಕರ್​ ಹಾಗೂ ಅನುಪಮಾ ಜತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಬಾರಿ ಇವರಿಗೆ ಸೃಜನ್​ ಕಡೆಯಿಂದ ವಿಶೇಷ ಗಿಫ್ಟ್​ ಸಿಕ್ಕಿದೆ. ಈ ಪ್ರೋಮೋ ನೋಡಿ ಕೆಲವರು ಭಾವುಕರಾಗಿದ್ದಾರೆ.

ಇತ್ತೀಚೆಗೆ ತಾಯಂದಿರಿಗೆ ಗಿಫ್ಟ್​ ನೀಡೋ ಕೆಲಸವನ್ನು ಮಕ್ಕಳಿಗೆ ನೀಡಲಾಗಿತ್ತು. ಮಕ್ಕಳು ತಮ್ಮ ಅಮ್ಮಂದಿರಿಗೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಬಂದಿದ್ದರು. ಇದು ಸೃಜನ್​ಗೆ ಸ್ಫೂರ್ತಿಯಾಗಿದೆ. ಅವರು ಜಡ್ಜ್​ ಸ್ಥಾನದಲ್ಲಿ ಕುಳಿತ ಅನು ಹಾಗೂ ತಾರಾ ಅವರಿಗೆ ಗಿಫ್ಟ್​ ನೀಡಿದ್ದಾರೆ.

ಅನು ಪ್ರಭಾಕರ್​ ಅವರಿಗೆ ಸೃಜನ್​ ಸರ ಒಂದನ್ನು ಗಿಫ್ಟ್​ ಮಾಡಿದ್ದಾರೆ. ತಾರಾ ಅನುರಾಧಾಗೆ ಸೀರೆ ನೀಡಿದ್ದಾರೆ. ಸೀರೆಯನ್ನು ನೋಡಿ ತಾರಾ ಖುಷಿಪಟ್ಟಿದ್ದಾರೆ. ‘ನಮ್ಮ ಬಳಿ ಎಷ್ಟೇ ಸೀರೆ ಇದ್ದರೂ ಹೊಸ ಸೀರೆ ಬಂದಾಗ ಆಗುವ ಖುಷಿಯೇ ಬೇರೆ’ ಎಂದು ತಾರಾ ಅವರು ಸೀರೆಯನ್ನು ಮೈಮೇಲೆ ಹೊದ್ದುಕೊಂಡು ವೇದಿಕೆ ಮೇಲೆಯೇ ವಾಕ್​ ಮಾಡಿದ್ದಾರೆ.

ಅನು ಅವರಿಗೂ ಸೃಜನ್​ ಗಿಫ್ಟ್​ ಒಂದನ್ನು ನೀಡಿದ್ದಾರೆ. ಜತೆಗೆ ಅನು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಮಾಡಿದ ಸ್ಟ್ರಗಲ್​ಅನ್ನು ನೆನಪಿಸಿಕೊಂಡಿದ್ದಾರೆ. ‘ಅನುವಿನ ಸ್ಟ್ರಗಲ್​ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಅವರ ತಾಯಿಯನ್ನು ನೋಡಿಕೊಂಡಿದ್ದಿರಬಹುದು, ತಂಗಿಯನ್ನು ನೋಡಿಕೊಂಡಿದ್ದಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ನೋಡಿದ್ದೇನೆ’ ಎಂದರು ಸೃಜನ್. ಇದನ್ನು ಹೇಳುತ್ತಿದ್ದಂತೆ ಅನುಪಮಾ ಅವರು ಗಳಗಳನೆ ಅತ್ತರು. ಸೃಜನ್​ ನೀಡಿದ ಗಿಫ್ಟ್ ನೋಡಿ ಅವರು ಖುಷಿಪಟ್ಟರು.

ಇದನ್ನೂ ಓದಿ: ‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು

‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ, 6 ವರ್ಷದ ಬಾಲಕಿ ಸಮನ್ವಿ ಅಪಘಾತದಲ್ಲಿ ನಿಧನ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್