‘ಸಾಕಷ್ಟು ಸಂಭಾವನೆ ಕೇಳಿದ್ರು’; ರಣಬೀರ್ ‘ಕಾಫಿ ವಿತ್ ಕರಣ್’ಗೆ ಬರದಿರಲು ಕಾರಣ ನೀಡಿದ ಕರಣ್
ಆಲಿಯಾ ಜತೆ ರಣಬೀರ್ ಬರಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ರಣಬೀರ್ ಈ ಶೋಗೆ ಬರದಿರಲು ಕಾರಣ ಏನು ಎಂಬುದಕ್ಕೆ ಗಾಸಿಪ್ ಮಂದಿ ನಾನಾ ರೀತಿಯ ಕಾರಣ ಹುಡುಕಿದ್ದರು. ಇದಕ್ಕೆಲ್ಲ ಕರಣ್ ಸ್ಪಷ್ಟನೆ ನೀಡಿದ್ದಾರೆ.
ಕರಣ್ ಜೋಹರ್ ‘ಕಾಫಿ ವಿತ್ ಕರಣ್’ (Koffee With Karan) ಶೋ ನಡೆಸಿಕೊಡುತ್ತಾ ಬಂದಿದ್ದಾರೆ. ಈಗಾಗಲೇ ಆರು ಸೀಸನ್ಗಳು ಯಶಸ್ವಿಯಾಗಿ ಆಗಿವೆ. ಜುಲೈ 7ರಿಂದ ಏಳನೇ ಸೀಸನ್ನ ಮೊದಲ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಈ ಶೋಗೆ ಬರೋಕೆ ಸೆಲೆಬ್ರಿಟಿಗಳು ಕೂಡ ಇಷ್ಟಪಡುತ್ತಾರೆ. ಕರಣ್ಗೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳ ಜತೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಸಾಕಷ್ಟು ಸ್ಟಾರ್ ನಟರ ಸಿನಿಮಾಗೆ ಅವರು ಬಂಡವಾಳ ಹೂಡುತ್ತಾರೆ. ಹೀಗಾಗಿ, ತಮ್ಮ ಆಪ್ತರಿಗೆ ಮಾತ್ರ ಈ ಶೋಗೆ ಅತಿಥಿಯಾಗಿ ಬರಲು ಕರಣ್ (Karan Johar) ಆಮಂತ್ರಣ ನೀಡುತ್ತಾರೆ. ಇದಕ್ಕೆ ಅವರು ಸಂಭಾವನೆ ನೀಡುವುದಿಲ್ಲ. ಈಗ ರಣಬೀರ್ ಬರದಿರಲು ಕಾರಣ ಏನು ಎಂಬುದನ್ನು ಕರಣ್ ವಿವರಿಸಿದ್ದಾರೆ.
‘ಕಾಫಿ ವಿತ್ ಕರಣ್ 7’ ಮೊದಲ ಎಪಿಸೋಡ್ನಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಪ್ರೋಮೋಗಳು ಈಗಾಗಲೇ ವೈರಲ್ ಆಗಿವೆ. ಆಲಿಯಾ ಜತೆ ರಣಬೀರ್ ಬರಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ರಣಬೀರ್ ಈ ಶೋಗೆ ಬರದಿರಲು ಕಾರಣ ಏನು ಎಂಬುದಕ್ಕೆ ಗಾಸಿಪ್ ಮಂದಿ ನಾನಾ ರೀತಿಯ ಕಾರಣ ಹುಡುಕಿದ್ದರು. ಇದಕ್ಕೆಲ್ಲ ಕರಣ್ ಸ್ಪಷ್ಟನೆ ನೀಡಿದ್ದಾರೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕರಣ್, ‘ಅವರು (ರಣಬೀರ್) ನನ್ನ ಕ್ಲೋಸ್ ಫ್ರೆಂಡ್. ನಾನು ಈಗ ಏನಾದರೂ ಹೇಳಿದರೆ ಅದರಿಂದ ತೊಂದರೆಯೇ ಆಗುತ್ತದೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ. ನಂತರ ರಣಬೀರ್ ಬರದಿರಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಇದನ್ನು ಅವರು ಗಂಭೀರವಾಗಿ ಹೇಳಿದ್ದಾರೋ ಅಥವಾ ಫನ್ನಿಯಾಗಿ ಹೇಳಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
‘ಈ ಶೋನಿಂದ ನಿಮಗೆ ಏನು ಹಣ ಸಿಗುತ್ತದೆಯೋ ಅದನ್ನು ನನಗೆ ನೀಡಿ ಎಂದು ರಣಬೀರ್ ಟೀಸ್ ಮಾಡುತ್ತಿರುತ್ತಾರೆ. ನಾನು ನಿಮಗೆ ಸಂಭಾವನೆ ನೀಡುವುದಿಲ್ಲ. ಸಿನಿಮಾಗಳಲ್ಲಿ ನಿಮಗೆ ಸಾಕಷ್ಟು ಸಂಭಾವನೆ ನೀಡುತ್ತೇನೆ ಎಂದು ನಾನು ರಣಬೀರ್ಗೆ ಹೇಳಿದ್ದೇನೆ. ನನಗೆ ಆಪ್ತವಾಗಿದ್ದ ಮಾತ್ರಕ್ಕೆ ಅವರು ಶೋಗೆ ಬರಲೇಬೇಕೆಂದೇನು ಇಲ್ಲ. ಅವರಿಗೆ ಇಷ್ಟವಿದ್ದರೆ ಮಾತ್ರ ಅವರು ಬರುತ್ತಾರೆ’ ಎಂದಿದ್ದಾರೆ ಕರಣ್.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕರಣ್ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕಾಗಿ ರಣಬೀರ್ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ದಯವಿಟ್ಟು ಕಾಫಿ ವಿತ್ ಕರಣ್ ಶೋಗೆ ಬನ್ನಿ’; ಸೆಲೆಬ್ರಿಟಿಗಳಿಗೆ ಕರೆ ಮಾಡಿ ಬೇಡಿದ ಕರಣ್ ಜೋಹರ್
ಕರಣ್ ಜೋಹರ್ ಪಾರ್ಟಿ ಎಫೆಕ್ಟ್; ಶಾರುಖ್, ಕತ್ರಿನಾಗೆ ಕೊರೊನಾ ಪಾಸಿಟಿವ್
Published On - 5:38 pm, Wed, 6 July 22