Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ

Samantha | Naga Chaitanya: ಸಮಂತಾ ಮತ್ತು ನಾಗ ಚೈತನ್ಯ ಅವರ ಡಿವೋರ್ಸ್​ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡಿವೆ. ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಬಗ್ಗೆ ಈ ಮಾಜಿ ದಂಪತಿಯೇ ಸ್ಪಷ್ಟನೆ ನೀಡಬೇಕಿದೆ.

Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ
Follow us
TV9 Web
| Updated By: ಮದನ್​ ಕುಮಾರ್​

Updated on: Jul 06, 2022 | 7:15 AM

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದ ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ (Naga Chaitanya) ಅವರು ವಿಚ್ಛೇದನ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪರಸ್ಪರ ಅನ್ಯೋನ್ಯವಾಗಿ ಇದ್ದಂತೆ ಸದಾ ಕಾಣಿಸಿಕೊಳ್ಳುತ್ತಿದ್ದ ಅವರಿಬ್ಬರ ನಡುವೆ ಯಾವ ವಿಚಾರಕ್ಕೆ ಮನಸ್ತಾಪ ಮೂಡಿತೋ ಗೊತ್ತಿಲ್ಲ. ಅಂತಿಮವಾಗಿ ಅವರು ತಮ್ಮ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್​ ಹಾಕಿದರು. ಈ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಆದರೆ ಈವರೆಗೂ ಆ ಕಾರಣದ ಬಗ್ಗೆ ಈ ಮಾಜಿ ದಂಪತಿ ಬಾಯಿ ಬಿಟ್ಟಿಲ್ಲ. ಈಗ ಸಮಂತಾ (Samantha) ಅವರು ಮೌನ ಮುರಿಯುವ ಕಾಲ ಹತ್ತಿರವಾಗಿದೆ ಎಂದೇ ಎಲ್ಲರೂ ಊಹಿಸುತ್ತಿದ್ದಾರೆ. ಕರಣ್​ ಜೋಹರ್​ (Karan Johar) ಎದುರಿನಲ್ಲಿ ಸಮಂತಾ ಅವರು ಎಲ್ಲವನ್ನೂ ಹೇಳಿಕೊಳ್ಳಬಹುದು ಎಂಬ ನಿರೀಕ್ಷೆ ಸೃಷ್ಟಿ ಆಗಿದೆ.

ಕರಣ್​ ಜೋಹರ್​ ಅವರು ನಡೆಸಿಕೊಡಲಿರುವ ‘ಕಾಫಿ ವಿತ್​ ಕರಣ್​ ಸೀಸನ್​ 7’ ಕಾರ್ಯಕ್ರಮ ಜುಲೈ 7ರಿಂದ ಪ್ರಸಾರ ಆರಂಭಿಸಲಿದೆ. ಅನೇಕ ಸೆಲೆಬ್ರಿಟಿಗಳು ಈ ಟಾಕ್​ ಶೋನಲ್ಲಿ ಭಾಗಿ ಆಗಲಿದ್ದಾರೆ. ಅತಿಥಿಗಳ ಪಟ್ಟಿಯಲ್ಲಿ ಸಮಂತಾ ರುತ್​ ಪ್ರಭು ಕೂಡ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ.

ಸೆಲೆಬ್ರಿಟಿಗಳ ಬೋಲ್ಡ್​ ಮಾತಿಗೆ ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ಫೇಮಸ್​. ಇಷ್ಟು ಸೀಸನ್​ಗಳ ಕಾಲ ಟಿವಿಯಲ್ಲಿ ಈ ಶೋ ಪ್ರಸಾರವಾಗಿತ್ತು. ಈಗ ಮೊದಲ ಬಾರಿಗೆ 7ನೇ ಸೀಸನ್​ ಅನ್ನು ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಅನೇಕ ಅಂಶಗಳನ್ನು ಕೂಡ ಕರಣ್​ ಜೋಹರ್​ ಎದುರು ಶೇರ್​ ಮಾಡಿಕೊಂಡ ಉದಾಹರಣೆ ಇದೆ. ಹಾಗಾಗಿ ಸಮಂತಾ ಅವರು ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ತಿಳಿಸುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ
Image
ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​
Image
ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
Image
ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್​

ಸಮಂತಾ ಮತ್ತು ನಾಗ ಚೈತನ್ಯ ಅವರ ಡಿವೋರ್ಸ್​ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡಿವೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ನಿಖರವಾಗಿಲ್ಲ. ಅವುಗಳಿಗೆಲ್ಲ ಸಮಂತಾ ಅಥವಾ ನಾಗ ಚೈತನ್ಯ ಅವರೇ ಸ್ಪಷ್ಟನೆ ನೀಡಬೇಕಿದೆ. ‘ಮದುವೆ ಅಂದ್ರೆ ಕೆಜಿಎಫ್ ಥರ​’ ಎಂದು ಕಾಫಿ ವಿತ್​ ಕರಣ್​ ಶೋನಲ್ಲಿ ಸಮಂತಾ ಹೇಳಿರುವುದು ಪ್ರೋಮೋ ಮೂಲಕ ಗೊತ್ತಾಗಿದೆ. ಅದರ ಅರ್ಥ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ಸಮಂತಾ, ಆಲಿಯಾ Etc..: ‘ಕಾಫಿ ವಿತ್​ ಕರಣ್​’ ಶೋಗೆ ಬರುವ ಸೆಲೆಬ್ರಿಟಿಗಳು ಇವರೇ

‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ