Sai Pallavi: ಯಾರು ಎಷ್ಟೇ ಟೀಕೆ ಮಾಡಿದ್ರೂ ಸಾಯಿ ಪಲ್ಲವಿ ನಂ.1; ಧೂಳೆಬ್ಬಿಸುತ್ತಿದೆ ‘ವಿರಾಟ ಪರ್ವಂ’ ಸಿನಿಮಾ

Sai Pallavi | Virata Parvam: ‘ವಿರಾಟ ಪರ್ವಂ’ ಚಿತ್ರದ ನಟಿ ಸಾಯಿ ಪಲ್ಲವಿ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಎಷ್ಟು ಡಿಮ್ಯಾಂಡ್​ ಇದೆ ಎಂಬುದಕ್ಕೆ ಈಗ ಹೊಸ ಉದಾಹರಣೆ ಸಿಕ್ಕಿದೆ.​

Sai Pallavi: ಯಾರು ಎಷ್ಟೇ ಟೀಕೆ ಮಾಡಿದ್ರೂ ಸಾಯಿ ಪಲ್ಲವಿ ನಂ.1; ಧೂಳೆಬ್ಬಿಸುತ್ತಿದೆ ‘ವಿರಾಟ ಪರ್ವಂ’ ಸಿನಿಮಾ
ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on:Jul 05, 2022 | 8:19 AM

ದಕ್ಷಿಣ ಭಾರತದಲ್ಲಿ ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಸಖತ್​ ಬೇಡಿಕೆ​ ಇದೆ. ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅತ್ಯುತ್ತಮ ನಟನೆ ಮತ್ತು ಸಿಂಪಲ್​ ವ್ಯಕ್ತಿತ್ವದ ಕಾರಣದಿಂದ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಆದರೆ ಇತ್ತೀಚೆಗೆ ಅವರು ನೀಡಿದ ಒಂದು ಹೇಳಿಕೆಯಿಂದ ಗದ್ದಲ ಸೃಷ್ಟಿ ಆಗಿತ್ತು. ಆ ಕಾರಣದಿಂದ ಅವರ ‘ವಿರಾಟ ಪರ್ವಂ’ (Virata Parvam) ಸಿನಿಮಾ ಕೂಡ ಸೊರಗುವಂತಾಯಿತು. ಜೂನ್​ 17ರಂದು ತೆರೆಕಂಡ ಈ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚು ಆದಾಯ ಹರಿದುಬರಲಿಲ್ಲ. ಆದರೆ ಈಗ ಒಟಿಟಿಯಲ್ಲಿ ಈ ಚಿತ್ರ ಧೂಳೆಬ್ಬಿಸುತ್ತಿದೆ. ನೆಟ್​ಫ್ಲಿಕ್ಸ್ (Netflix) ಮೂಲಕ ಸ್ಟ್ರೀಮಿಂಗ್​ ಆಗುತ್ತಿರುವ ‘ವಿರಾಟ ಪರ್ವಂ’ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಹಾಗಾಗಿ ಇದು ನಂ.1 ಟ್ರೆಂಡಿಂಗ್​ನಲ್ಲಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬಗ್ಗೆ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದರು. ಅವರ ಆ ಹೇಳಿಕೆಯ ಕಾರಣದಿಂದ ತಾವು ‘ವಿರಾಟ ಪರ್ವಂ’ ಚಿತ್ರವನ್ನು ಬಹಿಷ್ಕಾರ ಮಾಡುವುದಾಗಿ ಹಲವರು ಗುಡುಗಿದ್ದರು. ಆದರೆ ಈಗ ನೆಟ್​ಫ್ಲಿಕ್ಸ್​ನಲ್ಲಿ ಜನರು ಈ ಚಿತ್ರವನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ಟ್ರೆಂಡಿಂಗ್​ನಲ್ಲಿ ನಂಬರ್​ ಒನ್​ ಆಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಯಾರು ಎಷ್ಟೇ ಟೀಕೆ ಮಾಡಿದರೂ ಸಾಯಿ ಪಲ್ಲವಿ ನಂ.1 ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

ಇದನ್ನೂ ಓದಿ
Image
Virata Parvam OTT Release: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?
Image
Sai Pallavi: ಥಿಯೇಟರ್​ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್​ ಸ್ಟಾರ್​’ ಬಿರುದು ಈಗೇನಾಯ್ತು?
Image
Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
Image
Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ರಿಯಲ್​ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘ವಿರಾಟ ಪರ್ವಂ’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ನಕ್ಸಲ್​ ನಾಯಕನಾಗಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ವೇಣು ಉಡುಗುಲ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಥಿಯೇಟರ್​ನಲ್ಲಿ ಸೋತ ಈ ಸಿನಿಮಾ ಈಗ ಒಟಿಟಿಯಲ್ಲಿ ಸೂಪರ್​ ಹಿಟ್​ ಆಗಿದೆ ಎಂಬುದು ವಿಶೇಷ.

‘ಗಾರ್ಗಿ’ ಬಿಡುಗಡೆಗೆ ಸಾಯಿ ಪಲ್ಲವಿ ಸಜ್ಜು:

ಸಾಯಿ ಪಲ್ಲವಿ ನಟಿಸಿರುವ ‘ಗಾರ್ಗಿ’ ಚಿತ್ರ ಜುಲೈ 15ರಂದು ಚಿತ್ರಮಂದಿರದಲ್ಲಿ ರಿಲೀಸ್​ ಆಗಲಿದೆ. ಈ ಸಿನಿಮಾಗೆ ಗೌತಮ್​ ರಾಮಚಂದ್ರನ್​ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಮಾತ್ರವಲ್ಲದೇ ಸ್ವತಃ ಸಾಯಿ ಪಲ್ಲವಿ ಅವರಿಗೂ ಸಖತ್​ ನಿರೀಕ್ಷೆ ಇದೆ. ‘ಗಾರ್ಗಿ’ ಕನ್ನಡದಲ್ಲೂ ರಿಲೀಸ್​ ಆಗುತ್ತಿದೆ. ಕನ್ನಡದ ಅವತರಣಿಕೆಗೆ ಸಾಯಿ ಪಲ್ಲವಿ ಅವರೇ ಡಬ್​​ ಮಾಡಿದ್ದಾರೆ.

ಇದನ್ನೂ ಓದಿ: Gargi Movie: ಫ್ಯಾನ್ಸ್​ ಮೆಚ್ಚುವ ರೀತಿಯಲ್ಲಿ ಮತ್ತೆ ಬರುತ್ತಿದ್ದಾರೆ ಸಾಯಿ ಪಲ್ಲವಿ; ಇಲ್ಲವೆ ‘ಗಾರ್ಗಿ’ ಚಿತ್ರದ ಫೋಟೋಗಳು

Sai Pallavi: ಸಿಂಪಲ್​ ಸೀರೆ ಧರಿಸಿ ಕಣ್ಮನ ಸೆಳೆದ ಸಾಯಿ ಪಲ್ಲವಿ; ಸ್ಟಾರ್​ ನಟಿಗೆ ಅಭಿಮಾನಿಗಳ ಲೈಕ್ಸ್​ ಸುರಿಮಳೆ

Published On - 8:19 am, Tue, 5 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ