Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

Virata Parvam: ‘ವಿರಾಟ ಪರ್ವಂ’ ಸಿನಿಮಾ ಜೂನ್ 17ರಂದು ಬಿಡುಗಡೆ ಆಗಿದೆ. ಈ​ ಸಮಯದಲ್ಲೇ ಸಾಯಿ ಪಲ್ಲವಿ ಮಾತು ವಿವಾದಕ್ಕೆ ಕಾರಣ ಆಗಿರುವುದರಿಂದ ‘ಬುಕ್​ ಮೈ ಶೋ’ ಮೂಲಕ ರೇಟಿಂಗ್​ ನೀಡಿರುವ ಜನರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರಾ?

Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?
ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on:Jun 18, 2022 | 9:04 AM

ನಟಿ ಸಾಯಿ ಪಲ್ಲವಿ (Sai Pallavi) ಅವರು ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಅವರು ನೀಡಿದ ಒಂದು ಹೇಳಿಕೆಯಿಂದ ಸೆನ್ಸೇಷನ್​ ಸೃಷ್ಟಿ ಆಗಿದೆ. ಸಾಮಾನ್ಯವಾಗಿ ಕಾಂಟ್ರವರ್ಸಿಗಳಿಂದ ದೂರ ಉಳಿಯುವ ಅವರು ಈಗ ಆಡಿದ ಮಾತಿನಿಂದ ಒಂದಷ್ಟು ಜನರ ಕೋಪಕ್ಕೆ ಕಾರಣ ಆಗಿದ್ದಾರೆ. ‘ವಿರಾಟ ಪರ್ವಂ’ (Virata Parvam) ಸಿನಿಮಾದ ಪ್ರಚಾರದ ಸಲುವಾಗಿ ಸಂದರ್ಶನ ನೀಡುತ್ತಿದ್ದಾಗ ಅವರಿಗೆ ಎಡಪಂಥದ ಬಗ್ಗೆಯೂ ಪ್ರಶ್ನೆಯೂ ಎದುರಾಯಿತು. ಆಗ ಅವರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಬಗ್ಗೆ ಪ್ರಸ್ತಾಪಿಸಿದರು. ‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ’ ಎಂದು ಸಾಯಿ ಪಲ್ಲವಿ ಹೇಳಿದರು. ಅವರ ಈ ಮಾತಿಗೆ ಕೆಲವರು ಕೆಂಡಾಮಂಡಲ ಆಗಿದ್ದಾರೆ. ಇನ್ನೂ ಕೆಲವರು ಸಾಯಿ ಪಲ್ಲವಿ ಮಾತಿಗೆ ತಮ್ಮ ಸಹಮತ ಇದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಹೇಳಿಕೆಯಿಂದ ವಿವಾದ (Sai Pallavi Controversy) ಸೃಷ್ಟಿ ಆಗಿದೆ. ಇದರಿಂದ ಅವರ ಸಿನಿಮಾವನ್ನು ಕೂಡ ಕೆಲವರು ವಿರೋಧಿಸಿದ್ದಾರೆ.

ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅವರು ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾ ಜೂನ್ 17ರಂದು ಬಿಡುಗಡೆ ಆಗಿದೆ. ರಿಲೀಸ್​ ಸಮಯದಲ್ಲೇ ಸಾಯಿ ಪಲ್ಲವಿ ಮಾತು ವಿವಾದ ಹುಟ್ಟುಹಾಕಿರುವುದರಿಂದ ಈ ಚಿತ್ರದ ಕಲೆಕ್ಷನ್​ ಮೇಲೆ ಪರಿಣಾಮ ಬೀರಬಹುದು ಎಂದೇ ಹೇಳಲಾಗುತ್ತಿದೆ. ಹಾಗಾದರೆ ‘ಬುಕ್​ ಮೈ ಶೋ’ ಮೂಲಕ ರೇಟಿಂಗ್​ ನೀಡಿರುವ ಜನರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರಾ? ಈ ಕೌತುಕದ ಪ್ರಶ್ನೆ ಮೂಡುವುದು ಸಹಜ.

(‘ವಿರಾಟ ಪರ್ವಂ’ ಸಿನಿಮಾಗೆ ‘ಬುಕ್ ಮೈ ಶೋ’ನಲ್ಲಿ ರೇಟಿಂಗ್)

ಸದ್ಯಕ್ಕೆ 4.9 ಸಾವಿರ ಜನರು ‘ವಿರಾಟ ಪರ್ವಂ’ ಸಿನಿಮಾಗೆ ‘ಬುಕ್​ ಮೈ ಶೋ’ನಲ್ಲಿ ರೇಟಿಂಗ್​ ನೀಡಿದ್ದಾರೆ. ಒಟ್ಟು ಶೇ.85ರಷ್ಟು ಪಾಸಿಟಿವ್​ ರೇಟಿಂಗ್​ ಸಿಕ್ಕಿದೆ. ಇದು ಪ್ಯಾನ್​ ಇಂಡಿಯಾ ಜಮಾನಾ. ರಾಣಾ ದಗ್ಗುಬಾಟಿ ಅವರಿಗೆ ‘ಬಾಹುಬಲಿ 2’ ಬಳಿಕ ದೇಶಾದ್ಯಂತ ಜನಪ್ರಿಯತೆ ಸಿಕ್ಕಿದೆ. ಆದರೂ ಕೂಡ ಅವರು ‘ವಿರಾಟ ಪರ್ವಂ’ ಚಿತ್ರವನ್ನು ತೆಲುಗಿನಲ್ಲಿ ಮಾತ್ರ ರಿಲೀಸ್​ ಮಾಡಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್​ ಮಾಡಿದ್ದರೆ ಇನ್ನಷ್ಟು ಜನರು ರೇಟಿಂಗ್​ ನೀಡುವ ಸಾಧ್ಯತೆ ಇರುತ್ತಿತ್ತು.

ಇದನ್ನೂ ಓದಿ
Image
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Image
Sai Pallavi: ಪಾತ್ರಕ್ಕಾಗಿ ಸಾಯಿ ಪಲ್ಲವಿ 2 ದಿನ ಉಪವಾಸ; ಇವರೇ ನಿಜವಾದ ನ್ಯಾಷನಲ್​ ಕ್ರಶ್​ ಎಂದ ಫ್ಯಾನ್ಸ್​
Image
Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ

ಇದನ್ನೂ ಓದಿ: Sai Pallavi: ನಟಿ ಸಾಯಿ ಪಲ್ಲವಿಗೆ ಜನರು ‘ಲೇಡಿ ಪವರ್ ಸ್ಟಾರ್​’ ಅಂತ ಕರೆಯೋದು ಯಾಕೆ? ಇಲ್ಲಿದೆ ಕಾರಣ..

1990ರ ಸಮಯದಲ್ಲಿ ತೆಲಂಗಾಣದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ‘ವಿರಾಟ ಪರ್ವಂ’ ಸಿನಿಮಾ ಸಿದ್ಧವಾಗಿದೆ. ವೇಣು ಉಡುಗುಲ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಣಾ ದಗ್ಗುಬಾಟಿ ಅವರ ಹೋಮ್​ ಬ್ಯಾನರ್​ ಮೂಲಕವೇ ಈ ಸಿನಿಮಾ ನಿರ್ಮಾಣ ಆಗಿದೆ. ಪ್ರಿಯಾಮಣಿ, ನಂದಿತಾ ದಾಸ್​, ಈಶ್ವರಿ ರಾವ್​ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:04 am, Sat, 18 June 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ