Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?

ಸಾಯಿ ಪಲ್ಲವಿ ಅವರಿಗೆ ಈ ಸ್ಟಾರ್​ ನಟನ ಸಿನಿಮಾವನ್ನು ನೋಡಬೇಕು ಎನಿಸಿದೆ. ಅದಕ್ಕಾಗಿ ಅವರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಚಿತ್ರಮಂದಿರಕ್ಕೆ ಬಂದು ಹೋಗಿದ್ದಾರೆ.

Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on:May 18, 2022 | 10:04 AM

ಸರಳತೆಗೆ ಹೆಸರಾದವರು ನಟಿ ಸಾಯಿ ಪಲ್ಲವಿ (Sai Pallavi) . ಅನೇಕ ಸಂದರ್ಭಗಳಲ್ಲಿ ಅವರು ತುಂಬ ಸಿಂಪಲ್​ ಆಗಿ ಕಾಣಿಸಿಕೊಳ್ಳುತ್ತಾರೆ. ಆಡಂಬರಕ್ಕಿಂತಲೂ ಸಹಜ ಜೀವನಕ್ಕೆ ಅವರು ಆದ್ಯತೆ ನೀಡುತ್ತಾರೆ. ಆದರೆ ಅವರು ಜನಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳು ಮುತ್ತಿಕೊಳ್ಳುವುದು ಗ್ಯಾರಂಟಿ. ಅದನ್ನು ತಪ್ಪಿಸಲು ಕೆಲವೊಮ್ಮೆ ಸರ್ಕಸ್​ ಮಾಡಬೇಕಾಗುತ್ತಿದೆ. ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಅವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ತಮ್ಮನ್ನು ಯಾರೂ ಗುರುತಿಸಬಾರದು ಎಂದು ಮುಖ ಮುಚ್ಚಿಕೊಂಡಿದ್ದಾರೆ. ಸಿನಿಮಾ ನೋಡುವಾಗ ಅವರನ್ನು ಯಾರೂ ಪತ್ತೆ ಹಚ್ಚಿಲ್ಲ. ಆದರೆ ಚಿತ್ರಮಂದಿರದಿಂದ ಹೊರಬರುವಾಗ ಕೆಲವರು ಫೋಟೋ (Sai Pallavi Photos) ಕ್ಲಿಕ್ಕಿಸಿದ್ದಾರೆ. ಆ ಫೋಟೋಗಳು ವೈರಲ್​ ಆಗಿವೆ. ಅಷ್ಟಕ್ಕೂ ಸಾಯಿ ಪಲ್ಲವಿ ಅವರು ಈ ರೀತಿ ಗುಟ್ಟಾಗಿ ಬಂದು ನೋಡಿದ ಸಿನಿಮಾ ಯಾವುದು? ‘ಸರ್ಕಾರು ವಾರಿ ಪಾಟ’! ಹೌದು, ಮಹೇಶ್​ ಬಾಬು (Mahesh Babu) ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರವನ್ನು ಸಾಯಿ ಪಲ್ಲವಿ ವೀಕ್ಷಿಸಿ ಎಂಜಾಯ್​ ಮಾಡಿದ್ದಾರೆ. ಈ ಕುರಿತು ಹಲವೆಡೆ ವರದಿ ಆಗಿದೆ.

ಮಹೇಶ್​ ಬಾಬು ಮತ್ತು ಕೀರ್ತಿ ಸುರೇಶ್​ ಕಾಂಬಿನೇಷನ್​ನ ‘ಸರ್ಕಾರು ವಾರಿ ಪಾಟ’ ಸಿನಿಮಾ ಎಲ್ಲೆಡೆ ಉತ್ತಮ ಕಮಾಯಿ ಮಾಡುತ್ತಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಕೂಡ ಈ ಚಿತ್ರ ಹಣ ಗಳಿಸುವಲ್ಲಿ ಹಿಂದಿ ಬಿದ್ದಿಲ್ಲ. ಸಾಯಿ ಪಲ್ಲವಿ ಅವರಿಗೂ ಈ ಸಿನಿಮಾವನ್ನು ನೋಡಬೇಕು ಎನಿಸಿದೆ. ಅದಕ್ಕಾಗಿ ಅವರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಚಿತ್ರಮಂದಿರಕ್ಕೆ ಬಂದು ಹೋಗಿದ್ದಾರೆ. ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ‘ಗಾರ್ಗಿ’ ರಿಲೀಸ್​ ಆಯಿತು.

ಇದನ್ನೂ ಓದಿ: Sai Pallavi: ಬಾಲಿವುಡ್​ಗೆ ಕಾಲಿಡೋ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸಾಯಿ ಪಲ್ಲವಿ

ಇದನ್ನೂ ಓದಿ
Image
Sai Pallavi Birthday: ಕನ್ನಡದಲ್ಲಿ ಸಾಯಿ ಪಲ್ಲವಿ ಡೈಲಾಗ್; ಬರ್ತಡೇ ಪ್ರಯುಕ್ತ ಹೊಸ ಚಿತ್ರ ‘ಗಾರ್ಗಿ’ ಮೇಕಿಂಗ್​ ವಿಡಿಯೋ ಬಹಿರಂಗ
Image
Sai Pallavi: ಮದುವೆ ಬಗ್ಗೆ ಗಾಸಿಪ್​ ಹಬ್ಬಿಸಿದವರಿಗೆ ಕಾಲು ತೋರಿಸಿ ಖಡಕ್​ ಉತ್ತರ ನೀಡಿದ ಸಾಯಿ ಪಲ್ಲವಿ
Image
Shyam Singha Roy: ನಾನಿ, ಸಾಯಿ ಪಲ್ಲವಿ ನಟನೆಯ ‘ಶ್ಯಾಮ್ ಸಿಂಗಾ ರಾಯ್’ ಬಾಕ್ಸಾಫೀಸ್​​ನಲ್ಲಿ ಗಳಿಸಿದ್ದೆಷ್ಟು?
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ

ಕನ್ನಡದಲ್ಲೂ ಬರಲಿದೆ ‘ಗಾರ್ಗಿ’:

ಕನ್ನಡ ಸೇರಿ ಹಲವು ಭಾಷೆಯಲ್ಲಿ ‘ಗಾರ್ಗಿ’ ಚಿತ್ರ ಮೂಡಿಬರುತ್ತಿದೆ. ಸಾಯಿ ಪಲ್ಲವಿ ಅವರು ಶ್ರಮಜೀವಿ. ಬದ್ಧತೆಯಿಂದ ಅವರು ಕೆಲಸ ಮಾಡುತ್ತಾರೆ. ಅದೇ ಅವರ ಯಶಸ್ಸಿಗೆ ಕಾರಣ. ಅವರಿಗೆ ಕನ್ನಡ ಹೊಸತು. ಆದರೂ ಕೂಡ ಕಷ್ಟಪಟ್ಟು ತಮ್ಮ ಪಾತ್ರಕ್ಕೆ ಕನ್ನಡದಲ್ಲಿಯೂ ಡಬ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಷ್ಟದ ಪದಗಳನ್ನು ಉಚ್ಚರಿಸಲು ಹಲವು ಟೇಕ್​ಗಳನ್ನು ತೆಗೆದುಕೊಂಡಿದ್ದಾರೆ. ಆದರೂ ಕೂಡ ಅವರು ಹಠಬಿಡದೇ ಡಬ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ

200 ಕೋಟಿ ರೂ. ಸನಿಹದಲ್ಲಿ ‘ಸರ್ಕಾರು ವಾರಿ ಪಾಟ’:

ಮಹೇಶ್ ಬಾಬು ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿತು. ಅನೇಕ ಕಡೆಗಳಲ್ಲಿ ಫ್ಯಾನ್ಸ್​ ಶೋ ಆಯೋಜನೆ ಮಾಡಲಾಗಿತ್ತು. ಇದು ಸಿನಿಮಾ ಕಲೆಕ್ಷನ್​ ಹೆಚ್ಚಲು ಸಹಕಾರಿ ಆಗಿತ್ತು. ಆದರೆ, ಮೊದಲ ದಿನ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಒಂದು ವರ್ಗದ ಜನರು ಈ ಚಿತ್ರವನ್ನು ಇಷ್ಟಪಟ್ಟರು. ಮೇ 13ರಂದು ಈ ಚಿತ್ರ 27.50 ಕೋಟಿ ರೂಪಾಯಿ, ಮೇ 14ರಂದು 28.84 ಕೋಟಿ ರೂಪಾಯಿ, ಮೇ 15ರಂದು 29.12 ಕೋಟಿ ಗಳಿಸಿ 150 ಕೋಟಿ ರೂಪಾಯಿ ಕ್ಲಬ್ ಸೇರಿತು. ಸೋಮವಾರ (ಮೇ 16) ಸಿನಿಮಾ 9.38 ಕೋಟಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾ ಕಲೆಕ್ಷನ್ 170.05 ಕೋಟಿ ರೂಪಾಯಿ ಆಗಿದೆ. ಶೀಘ್ರವೇ ಈ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:57 am, Wed, 18 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ