Sai Pallavi Birthday: ಕನ್ನಡದಲ್ಲಿ ಸಾಯಿ ಪಲ್ಲವಿ ಡೈಲಾಗ್; ಬರ್ತಡೇ ಪ್ರಯುಕ್ತ ಹೊಸ ಚಿತ್ರ ‘ಗಾರ್ಗಿ’ ಮೇಕಿಂಗ್​ ವಿಡಿಯೋ ಬಹಿರಂಗ

ಸಾಯಿ ಪಲ್ಲವಿ ಜನ್ಮದಿನದ ಪ್ರಯುಕ್ತ ‘ಗಾರ್ಗಿ’ ಸಿನಿಮಾ ಅನೌನ್ಸ್​ ಆಗಿದೆ. ಇದರ ಮೇಕಿಂಗ್​ ವಿಡಿಯೋದಲ್ಲಿ ಅವರು ಕನ್ನಡದ ಡೈಲಾಗ್​ ಹೇಳಿರುವುದು ಹೈಲೈಟ್​ ಆಗಿದೆ.

Sai Pallavi Birthday: ಕನ್ನಡದಲ್ಲಿ ಸಾಯಿ ಪಲ್ಲವಿ ಡೈಲಾಗ್; ಬರ್ತಡೇ ಪ್ರಯುಕ್ತ ಹೊಸ ಚಿತ್ರ ‘ಗಾರ್ಗಿ’ ಮೇಕಿಂಗ್​ ವಿಡಿಯೋ ಬಹಿರಂಗ
ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on: May 09, 2022 | 1:04 PM

ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. ಕರುನಾಡಿನಲ್ಲೂ ಅವರ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಆದರೆ ಈವರೆಗೂ ಸಾಯಿ ಪಲ್ಲವಿ ಅವರು ನೇರವಾಗಿ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ಅವರ ಹೊಸ ಸಿನಿಮಾವೊಂದು ಕನ್ನಡದಲ್ಲೂ ಮೂಡಿಬರುತ್ತಿದೆ. ಈ ಚಿತ್ರಕ್ಕೆ ‘ಗಾರ್ಗಿ’ (Sai Pallavi Movie Gargi) ಎಂದು ಹೆಸರು ಇಡಲಾಗಿದೆ. ಇಂದು (ಮೇ 9) ಸಾಯಿ ಪಲ್ಲವಿ ಜನ್ಮದಿನ (Sai Pallavi Birthday). ಆ ಪ್ರಯುಕ್ತ ‘ಗಾರ್ಗಿ’ ಸಿನಿಮಾದ ಫಸ್ಟ್​ಲುಕ್​ ಮತ್ತು ಶೀರ್ಷಿಕೆ ಅನಾವರಣ ಮಾಡಲಾಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ವಿಶೇಷ ಏನೆಂದರೆ ಈ ಸಿನಿಮಾಗೆ ಸ್ವತಃ ಸಾಯಿ ಪಲ್ಲವಿ ಅವರೇ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ವಿಡಿಯೋ ಕೂಡ ಲಭ್ಯವಾಗಿದೆ. ಈ ಮೂಲಕ ಕನ್ನಡದ ಅಭಿಮಾನಿಗಳ ಹೃದಯಕ್ಕೆ ಸಾಯಿ ಪಲ್ಲವಿ ಅವರು ಇನ್ನಷ್ಟು ಹತ್ತಿರ ಆಗಲು ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಗಾರ್ಗಿ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಮೂಡಿದೆ.

ಹುಟ್ಟುಹಬ್ಬದ ಪ್ರಯುಕ್ತ ಸಾಯಿ ಪಲ್ಲವಿ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ‘ಗಾರ್ಗಿ’ ಚಿತ್ರದ ಮೇಕಿಂಗ್​ ವಿಡಿಯೋವನ್ನು ಸಾಯಿ ಪಲ್ಲವಿ ಶೇರ್​ ಮಾಡಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅವರಿಗೂ ಸಖತ್​ ನಿರೀಕ್ಷೆ ಇದೆ. ಆ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
Sai Pallavi: ಮದುವೆ ಬಗ್ಗೆ ಗಾಸಿಪ್​ ಹಬ್ಬಿಸಿದವರಿಗೆ ಕಾಲು ತೋರಿಸಿ ಖಡಕ್​ ಉತ್ತರ ನೀಡಿದ ಸಾಯಿ ಪಲ್ಲವಿ
Image
Sai Pallavi: ಬಾಲಿವುಡ್​ಗೆ ಕಾಲಿಡೋ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸಾಯಿ ಪಲ್ಲವಿ
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ
Image
ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?

‘ಈ ಸಿನಿಮಾ ಬಗ್ಗೆ ಮಾತನಾಡಬೇಕು ಎಂದು ತಿಂಗಳುಗಳಿಂದ ನಾನು ಕಾದಿದ್ದೆ. ಕೊನೆಗೂ ನನ್ನ ಹಠಮಾರಿ ತಂಡದವರು ನನ್ನ ಹುಟ್ಟುಹಬ್ಬದ ದಿನ ಇದನ್ನು ರಿಲೀಸ್​ ಮಾಡಿದ್ದಾರೆ. ಗಾರ್ಗಿಗೆ ನಿಮ್ಮ ಆಶೀರ್ವಾದ ಇರಲಿ’ ಎಂದು ಕ್ಯಾಪ್ಷನ್​ ನೀಡುವ ಮೂಲಕ ಫಸ್ಟ್​ ಲುಕ್​ ಪೋಸ್ಟರ್​ ಮತ್ತು ಮೇಕಿಂಗ್​ ತುಣುಕುಗಳನ್ನು ಸಾಯಿ ಪಲ್ಲವಿ ಶೇರ್​ ಮಾಡಿಕೊಂಡಿದ್ದಾರೆ. ಎಂದಿನಂತೆ ಅವರು ಈ ಸಿನಿಮಾದಲ್ಲಿಯೂ ಡಿ-ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಾಯಿ ಪಲ್ಲವಿ ಅವರು ಶ್ರಮಜೀವಿ. ಬದ್ಧತೆಯಿಂದ ಅವರು ಕೆಲಸ ಮಾಡುತ್ತಾರೆ. ಅದೇ ಅವರ ಯಶಸ್ಸಿಗೆ ಕಾರಣ. ಅವರಿಗೆ ಕನ್ನಡ ಹೊಸತು. ಆದರೂ ಕೂಡ ಕಷ್ಟಪಟ್ಟು ತಮ್ಮ ಪಾತ್ರಕ್ಕೆ ಕನ್ನಡದಲ್ಲಿಯೂ ಡಬ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಷ್ಟದ ಪದಗಳನ್ನು ಉಚ್ಚರಿಸಲು ಹಲವು ಟೇಕ್​ಗಳನ್ನು ತೆಗೆದುಕೊಂಡಿದ್ದಾರೆ. ಆದರೂ ಕೂಡ ಅವರು ಹಠಬಿಡದೇ ಡಬ್​ ಮಾಡುತ್ತಿದ್ದಾರೆ. ಅವರು ಹಂಚಿಕೊಂಡಿರುವ ಮೇಕಿಂಗ್​ ವಿಡಿಯೋದಲ್ಲಿ ಈ ದೃಶ್ಯಗಳು ಹೈಲೈಟ್​ ಆಗಿವೆ. ಆ ಮೂಲಕ ತೆರೆಹಿಂದಿನ ಶ್ರಮವನ್ನು ಅವರು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಸಾಯಿ ಪಲ್ಲವಿ ಅವರು ನಟಿಸಿರು ‘ವಿರಾಟ ಪರ್ವಂ’ ಸಿನಿಮಾ ಜುಲೈ 1ರಂದು ತೆರೆಕಾಣಲಿದೆ. ನಂತರ ಅವರು ನಟಿಸುವ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಮಾಹಿತಿ ಬಹಿರಂಗ ಆಗಿರಲಿಲ್ಲ. ಆ ಕಾರಣದಿಂದ ಕೆಲವರು ಸಾಯಿ ಪಲ್ಲವಿ ಬಗ್ಗೆ ಗಾಸಿಪ್​ ಹಬ್ಬಿಸಿದ್ದರು. ಮದುವೆ ಆಗುವ ಸಲುವಾಗಿ ಅವರು ಹೊಸ ಚಿತ್ರ ಒಪ್ಪಿಕೊಂಡಿಲ್ಲ ಎಂದು ಗಾಳಿ ಸುದ್ದಿ ಹರಡಿತ್ತು. ಆದರೆ ಅದನ್ನು ತಳ್ಳಿ ಹಾಕುವ ರೀತಿಯಲ್ಲಿ ‘ಗಾರ್ಗಿ’ ಸಿನಿಮಾ ಅನೌನ್ಸ್​ ಆಗಿದೆ. ನ್ಯಾಯಕ್ಕಾಗಿ ಹೋರಾಡುವ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈ ಸಿನಿಮಾ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್