- Kannada News Photo gallery Aishani Shetty Naveen Shankar starrer Dharani Mandala Madhyadolage movie new song released
ಧರಣಿ ಮಂಡಲ ಮಧ್ಯದೊಳಗೆ: ನವೀನ್ ಶಂಕರ್-ಐಶಾನಿ ಶೆಟ್ಟಿಯ ‘ಮಾತು ಮಾತಲ್ಲೇ..’ ಗೀತೆಗೆ ವಿಜಯ್ ಪ್ರಕಾಶ್ ಧ್ವನಿ
‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಅವರ ಕೆಮಿಸ್ಟ್ರಿ ಕಂಡು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.
Updated on:May 08, 2022 | 3:08 PM

Aishani Shetty Naveen Shankar starrer Dharani Mandala Madhyadolage movie new song released

Aishani Shetty Naveen Shankar starrer Dharani Mandala Madhyadolage movie new song released

ಹಲವು ಸೂಪರ್ ಹಿಟ್ ಗೀತೆಗಳನ್ನು ಬರೆದಿರುವ ಗೌಸ್ ಪೀರ್ ಅವರು ‘ಮಾತು ಮಾತಲ್ಲಿ..’ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಸಿದ್ಧವಾಗಿದೆ.

ಈ ಮೊದಲು ಪುರಿ ಜಗನ್ನಾಥ್ ಜೊತೆ ಕೆಲಸ ಮಾಡಿದ್ದ ಶ್ರೀಧರ್ ಷಣ್ಮುಖ ಅವರು ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಬಂಡವಾಳ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ಗೌಸ್ ಪೀರ್, ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಟೈಟಲ್ ಮೂಲಕ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ ಕೌತುಕ ಮೂಡಿಸಿದೆ. ಈ ಸಿನಿಮಾದಲ್ಲಿ ನಿರ್ದೇಶಕರು ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಸದ್ಯ ಈ ಚಿತ್ರದ ಹಾಡು ಸದ್ದು ಮಾಡುತ್ತಿದೆ.
Published On - 3:08 pm, Sun, 8 May 22




