Sai Pallavi: ಮದುವೆ ಬಗ್ಗೆ ಗಾಸಿಪ್​ ಹಬ್ಬಿಸಿದವರಿಗೆ ಕಾಲು ತೋರಿಸಿ ಖಡಕ್​ ಉತ್ತರ ನೀಡಿದ ಸಾಯಿ ಪಲ್ಲವಿ

Sai Pallavi Birthday: ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

Sai Pallavi: ಮದುವೆ ಬಗ್ಗೆ ಗಾಸಿಪ್​ ಹಬ್ಬಿಸಿದವರಿಗೆ ಕಾಲು ತೋರಿಸಿ ಖಡಕ್​ ಉತ್ತರ ನೀಡಿದ ಸಾಯಿ ಪಲ್ಲವಿ
ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on:May 08, 2022 | 4:03 PM

ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್​ ಡಿಮ್ಯಾಂಡ್​ ಇದೆ. ಬೇರೆ ನಟಿಯರ ರೀತಿ ಗ್ಲಾಮರ್​ ಬಗ್ಗೆ ಅವರು ಹೆಚ್ಚು ಗಮನ ನೀಡುವುದಿಲ್ಲ. ತಮ್ಮ ನಟನೆ ಮೂಲಕವೇ ಜನಮನ ಗೆದ್ದಿರುವ ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಕಾಲ್​ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕಾದು ಕುಳಿತಿವೆ. ಅನೇಕ ಸ್ಟಾರ್​ ಹೀರೋಗಳು ಕೂಡ ಸಾಯಿ ಪಲ್ಲವಿ ಜೊತೆ ನಟಿಸಲು ಹಂಬಲ ವ್ಯಕ್ತಪಡಿಸುತ್ತಾರೆ. ಇಷ್ಟೆಲ್ಲ ಬೇಡಿಕೆ ಸೃಷ್ಟಿ ಮಾಡಿಕೊಂಡಿರುವ ಅವರು ಏಕಾಏಕಿ ಮದುವೆ ಆಗಿಬಿಡುತ್ತಾರಾ? ಇಂಥ ಪ್ರಶ್ನೆ ಮೂಡಲು ಕಾರಣವಾಗಿದ್ದು ಒಂದು ಗಾಸಿಪ್​. ಹೌದು, ಸಾಯಿ ಪಲ್ಲವಿ ಅವರು ಶೀಘ್ರದಲ್ಲೇ ಮದುವೆ (Sai Pallavi Marriage) ಆಗಲಿದ್ದಾರೆ ಎಂದು ಇತ್ತೀಚೆಗೆ ಗಾಳಿ ಸುದ್ದಿ ಹಬ್ಬಿತ್ತು. ತಮ್ಮ ಬಗ್ಗೆ ಹೀಗೆಲ್ಲ ಗಾಸಿಪ್​ ಹರಡಿಸಿದವರಿಗೆ ಸಾಯಿ ಪಲ್ಲವಿ ಅವರು ಮಾತಿನ ಬದಲಾಗಿ ಕೆಲಸದ ಮೂಲಕ ಉತ್ತರ ನೀಡಲು ಮುಂದಾಗಿದ್ದಾರೆ. ಆದರೆ ಅವರು ಮದುವೆ ಬಗ್ಗೆ ನೇರವಾಗಿ ಏನನ್ನೂ ಹೇಳಲ್ಲ. ಬದಲಿಗೆ ಒಂದೇ ಒಂದು ಫೋಟೋ (Sai Pallavi Photo) ಹಂಚಿಕೊಂಡು ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ.

ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಬ್ಯುಸಿ ಆಗಿದ್ದಾರೆ. ಈ ವರ್ಷ ತೆರೆಕಂಡ ‘ಶ್ಯಾಮ್ ಸಿಂಗ ರಾಯ್​’ ಚಿತ್ರದಲ್ಲಿನ ಅವರ ನಟನೆಗೆ ಎಲ್ಲರೂ ಭೇಷ್​ ಎಂದರು. ಗಲ್ಲಾಪೆಟ್ಟಿಗೆಯಲ್ಲೂ ಆ ಸಿನಿಮಾ ಗೆದ್ದು ಬೀಗಿತು. ರಾಣಾ ದಗ್ಗುಬಾಟಿ ಜೊತೆ ಸಾಯಿ ಪಲ್ಲವಿ ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾ ಜುಲೈ 1ರಂದು ಬಿಡುಗಡೆ ಆಗಲಿದೆ. ಅದಾದ ಬಳಿಕ ಅವರ ಯಾವುದೇ ಸಿನಿಮಾ ಕೂಡ ಅನೌನ್ಸ್​ ಆಗಿಲ್ಲ. ಆ ಕಾರಣದಿಂದಲೇ ಅವರ ಬಗ್ಗೆ ಗಾಸಿಪ್​ ಹರಡಿದೆ.

ಇದನ್ನೂ ಓದಿ
Image
Sai Pallavi: ಸದ್ದಿಲ್ಲದೇ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದ ಸಾಯಿ ಪಲ್ಲವಿ!
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ
Image
ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?
Image
ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ

ಹಲವು ದಿನಗಳ ಹಿಂದೆ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದ ಪ್ರೀ-ರಿಲೀಸ್​​ ಕಾರ್ಯಕ್ರಮಕ್ಕೆ ಸಾಯಿ ಪಲ್ಲವಿ ಅವರು ಅತಿಥಿಯಾಗಿ ಬಂದಿದ್ದರು. ಆ ಬಳಿಕ ಅವರು ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ಕೂಡ ನೀಡಲಿಲ್ಲ. ಹಾಗಾಗಿ ಗಾಸಿಪ್​ ಮಂದಿ ಚುರುಕಾಗಿಬಿಟ್ಟರು. ಮದುವೆ ಆಗುವ ಪ್ಲ್ಯಾನ್​ನಲ್ಲಿ ಇರುವುದರಿಂದಲೇ ಸಾಯಿ ಪಲ್ಲವಿ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ಗಾಳಿಸುದ್ದಿ ಹಬ್ಬಿಸಲಾಗಿತ್ತು. ಈಗ ಸಾಯಿ ಪಲ್ಲವಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹೊಸ ಫೋಟೋ ಹಂಚಿಕೊಂಡಿರುವ ಅವರು ಅಭಿಮಾನಿಗಳ ಕೌತುಕ ಕೆರಳಿಸಿದ್ದಾರೆ. ಗಾಸಿಪ್​ ಮಂದಿಯ ಬಾಯಿ ಮುಚ್ಚಿಸಿದ್ದಾರೆ.

ಓರ್ವ ಮಹಿಳೆ ಸೀರೆ ಧರಿಸಿ ಓಡಿ ಹೋಗುತ್ತಿರುವ ಫೋಟೋವನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮುಖ ಕಾಣಿಸಿಲ್ಲ. ಬರೀ ಕಾಲುಗಳು ಮಾತ್ರ ಹೈಲೈಟ್​ ಆಗಿವೆ. ಅದನ್ನು ತಕ್ಷಣಕ್ಕೆ ನೋಡಿದರೆ ಮಹಿಳೆ ಹಾರುತ್ತಿರುವ ರೀತಿಯಲ್ಲೂ ಕಾಣಿಸುತ್ತದೆ. ಇದು ಅವರ ಮುಂದಿನ ಸಿನಿಮಾಗೆ ಸಂಬಂಧಿಸಿದ ಫೋಟೋ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ನಾಳೆ (ಮೇ 9) ಸಾಯಿ ಪಲ್ಲವಿ ಜನ್ಮದಿನ. ಆ ಪ್ರಯುಕ್ತ ಹೆಚ್ಚಿನ ಮಾಹಿತಿ ನೀಡುವುದಾಗಿ ಸಾಯಿ ಪಲ್ಲವಿ ತಿಳಿಸಿದ್ದಾರೆ.

‘ಅವಳೊಂದು ಅಚ್ಚರಿ… ಸ್ವಲ್ಪ ಸಮಯ ಬಚ್ಚಿಟ್ಟುಕೊಂಡಿದ್ದಳು. ಈ ಸೋಮವಾರ ನಿಮ್ಮನ್ನು ನೋಡಲು ಆಕೆ ಸಿದ್ಧವಾಗಿದ್ದಾಳೆ ಎನಿಸುತ್ತದೆ’ ಎಂಬ ಕ್ಯಾಪ್ಷನ್​ ಜೊತೆಯಲ್ಲಿ ಈ ಫೋಟೋವನ್ನು ಸಾಯಿ ಪಲ್ಲವಿ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅನೇಕರು ಮುಂಚಿತವಾಗಿಯೇ ಬರ್ತ್​ಡೇ ವಿಶ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:03 pm, Sun, 8 May 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್