Shyam Singha Roy: ನಾನಿ, ಸಾಯಿ ಪಲ್ಲವಿ ನಟನೆಯ ‘ಶ್ಯಾಮ್ ಸಿಂಗಾ ರಾಯ್’ ಬಾಕ್ಸಾಫೀಸ್​​ನಲ್ಲಿ ಗಳಿಸಿದ್ದೆಷ್ಟು?

Sai Pallavi | Nani: ಓಟಿಟಿಯಲ್ಲಿ ತೆರೆಕಂಡಿದ್ದರೂ ‘ಶ್ಯಾಮ್ ಸಿಂಗಾ ರಾಯ್’ ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಇನ್ನೊಂದು ಮೆಟ್ಟಿಲು ಏರಿದರೆ ನಾನಿ ವೃತ್ತಿಜೀವನದಲ್ಲೇ ದೊಡ್ಡ ಮೈಲಿಗಲ್ಲು ತಲುಪಿದ ಚಿತ್ರ ಇದಾಗಲಿದೆ.

Shyam Singha Roy: ನಾನಿ, ಸಾಯಿ ಪಲ್ಲವಿ ನಟನೆಯ ‘ಶ್ಯಾಮ್ ಸಿಂಗಾ ರಾಯ್’ ಬಾಕ್ಸಾಫೀಸ್​​ನಲ್ಲಿ ಗಳಿಸಿದ್ದೆಷ್ಟು?
‘ಶ್ಯಾಮ್ ಸಿಂಗಾ ರಾಯ್’ ಪೋಸ್ಟರ್
Follow us
TV9 Web
| Updated By: shivaprasad.hs

Updated on:Jan 23, 2022 | 11:48 AM

ಟಾಲಿವುಡ್ ನಟ ನಾನಿ (Nani) ನಟನೆಯ ‘ಶ್ಯಾಮ್ ಸಿಂಗಾ ರಾಯ್’ (Shyam Singha Roy) ಇತ್ತೀಚೆಗೆ ನೆಟ್​ಫ್ಲಿಕ್ಸ್​​ನಲ್ಲಿ ತೆರೆಕಂಡಿದ್ದರೂ ಕೂಡ ಚಿತ್ರಮಂದಿರಗಳಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಅನಿವಾರ್ಯ ಕಾರಣಗಳಿಂದ ಹಲವು ಬಾರಿ ಮುಂದೂಡಲ್ಪಟ್ಟು ಅಂತಿಮವಾಗಿ 2021ರ ಡಿಸೆಂಬರ್ 24ರಂದು ಚಿತ್ರ ತೆರೆಕಂಡಿತ್ತು. ಸಾಯಿ ಪಲ್ಲವಿ (Sai Pallavi), ಕೃತಿ ಶೆಟ್ಟಿ ಮೊದಲಾದವರು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದ ಈ ಚಿತ್ರ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು. ವಿಮರ್ಶಕರೂ ಚಿತ್ರಕ್ಕೆ ಹಾಗೂ ನಾನಿ ನಟನೆಗೆ ಶಹಬ್ಬಾಸ್ ಎಂದಿದ್ದರು. ಇದಕ್ಕೆ ತಕ್ಕಂತೆ ಜನರೂ ಚಿತ್ರವನ್ನು ಇಷ್ಟಪಟ್ಟಿದ್ದು, ಕೊವಿಡ್ ಸಂಕಷ್ಟದ ಸಮಯದಲ್ಲೂ ಚಿತ್ರಮಂದಿರಕ್ಕೆ ಆಗಮಿಸಿ, ವೀಕ್ಷಿಸುತ್ತಿದ್ದಾರೆ. ಚಿತ್ರದ ಗಳಿಕೆ ನಿಧಾನವಾಗಿ ಏರುತ್ತಿದ್ದು, ನಾನಿ ವೃತ್ತಿ ಜೀವನದ ಮಹೋನ್ನತ ಮೈಲಿಗಲ್ಲುಗಿಂತ ಒಂದು ಹೆಜ್ಜೆ ಹಿಂದಿದೆ. ಸದ್ಯದಲ್ಲೇ ‘ಶ್ಯಾಮ್ ಸಿಂಗಾ ರಾಯ್’ ಆ ಮೈಲಿಗಲ್ಲನ್ನೂ ದಾಟಿ ಮುನ್ನಡೆಯಲಿದ್ದಾನೆ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು.

ಏನಿದು ಮೈಲಿಗಲ್ಲು? ಚಿತ್ರದ ಕಲೆಕ್ಷನ್ ಎಷ್ಟು? ಸದ್ಯ ಹಲವೆಡೆ ಕೊರೊನಾ ಕಾರಣದಿಂದ 50:50 ಮಾದರಿಯಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಅದಾಗ್ಯೂ ‘ಶ್ಯಾಮ್ ಸಿಂಗಾ ರಾಯ್’ ಉತ್ತಮ ಗಳಿಕೆ ಮಾಡುತ್ತಿದೆ. ಚಿತ್ರ ಇದುವರೆಗೆ ಬಾಕ್ಸಾಫೀಸ್​ನಲ್ಲಿ ವಿಶ್ವಾದ್ಯಂತ ಗಳಿಸಿರುವುದು ಒಟ್ಟು ₹ 46 ಕೋಟಿ. ಈ ಮೂಲಕ ಚಿತ್ರ ₹ 50 ಕೋಟಿ ಮೈಲಿಗಲ್ಲಿನ ಸಮೀಪ ಬಂದುನಿಂತಿದೆ. ಬಾಕ್ಸಾಫೀಸ್ ತಜ್ಞರ ಪ್ರಕಾರ ಚಿತ್ರ ನಿಧಾನವಾಗಿಯಾದರೂ ಆ ಮೈಲಿಗಲ್ಲನ್ನು ತಲುಪಲಿದೆ. ಒಂದು ವೇಳೆ ಹಾಗಾದಲ್ಲಿ ವಿಶ್ವಾದ್ಯಂತದ ಗಳಿಕೆಯಲ್ಲಿ ₹ 50 ಕೋಟಿ ಕ್ಲಬ್ ಸೇರಿದ ನಾನಿ ನಟನೆಯ ಮೊದಲ ಚಿತ್ರ ‘ಶ್ಯಾಮ್ ಸಿಂಗಾ ರಾಯ್’ ಆಗಲಿದೆ. ಒಟ್ಟಿನಲ್ಲಿ ಈ ಚಿತ್ರ ನಾನಿ ವೃತ್ತಿ ಜೀವನದಲ್ಲಿ ಮಹತ್ವದ ಚಿತ್ರವಾಗಿ ದಾಖಲಾಗಿದೆ.

‘ಶ್ಯಾಮ್ ಸಿಂಗಾ ರಾಯ್’ ನಿರ್ದೇಶಿಸಿದವರು ರಾಹುಲ್ ಸಾಂಕೃತ್ಯಾನ್. ಮಡೋನ್ನಾ ಸೆಬಾಸ್ಟಿಯನ್, ಜಿಶ್ಶು ಸೇಮ್​ಗುಪ್ತಾ, ಮುರಳಿ ಶರ್ಮಾ, ರಾಹುಲ್ ರವಿಚಂದ್ರನ್, ಲೀಲಾ ಸ್ಯಾಮ್ಸನ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಇದು ನಿರ್ದೇಶಕ ರಾಹುಲ್ ಹಾಗೂ ನಾಯಕ ನಟ ನಾನಿ ಕಾಂಬಿನೇಷನ್​ನಲ್ಲಿ ಮೂಡಿಬಂದ ಮೊದಲ ಚಿತ್ರ.

‘ಶ್ಯಾಮ್ ಸಿಂಗಾ ರಾಯ್’ನಲ್ಲಿ ನಾನಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಂಗಾ ಸತ್ಯದೇವ್ ಬರೆದ ಕತೆಗೆ ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಮಾಡಿದ್ದಾರೆ. ನಿಹಾರಿಕಾ ಎಂಟರ್​ಟೈನ್​ಮೆಂಟ್ ಬ್ಯಾನರ್​ನಲ್ಲಿ ವೆಂಕಟ್ ಬೋಯನಪಲ್ಲಿ ನಿರ್ಮಾಣ ಮಾಡಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುತ್ತಿದೆ ‘ಶ್ಯಾಮ್ ಸಿಂಗಾ ರಾಯ್’: ಚಿತ್ರ ತೆರೆಗೆ ಬಂದು ತಿಂಗಳ ಒಳಗೇ ಓಟಿಟಿ ವೇದಿಕೆಯಾದ ನೆಟ್​ಫ್ಲಿಕ್ಸ್​​ನಲ್ಲಿ ‘ಶ್ಯಾಮ್ ಸಿಂಗಾ ರಾಯ್’ ರಿಲೀಸ್ ಆಗಿದೆ. ಈ ಮೂಲಕ ಜಗತ್ತಿನ ವೀಕ್ಷಕರನ್ನು ಚಿತ್ರ ತಲುಪುತ್ತಿದೆ. ವೀಕ್ಷಕರು ಚಿತ್ರದ ನಿರೂಪಣೆಗೆ ಹಾಗೂ ಕಲಾವಿದರ ಪಾತ್ರ ಪೋಷಣೆಯನ್ನು ಹೊಗಳಿ, ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಚಿತ್ರತಂಡ ರಿಲೀಸ್ ಮಾಡಿದ್ದ ‘ಶ್ಯಾಮ್ ಸಿಂಗಾ ರಾಯ್’ ಚಿತ್ರದ ಡಿಲೀಟೆಡ್ ಸೀನ್​ಗಳು:

ಇದನ್ನೂ ಓದಿ:

ನಾನಿ ಜತೆ ಲಿಪ್ ಕಿಸ್​​​ ಮಾಡಿ ಸುದ್ದಿಯಾದ ಕೃತಿ ಶೆಟ್ಟಿ; ಶಾಕ್​ ಆದ ಅಭಿಮಾನಿಗಳು

‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ

Published On - 11:42 am, Sun, 23 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ