ನಾನಿ ಜತೆ ಲಿಪ್ ಕಿಸ್​​​ ಮಾಡಿ ಸುದ್ದಿಯಾದ ಕೃತಿ ಶೆಟ್ಟಿ; ಶಾಕ್​ ಆದ ಅಭಿಮಾನಿಗಳು

ನಾನಿ ಜತೆ ಲಿಪ್ ಕಿಸ್​​​ ಮಾಡಿ ಸುದ್ದಿಯಾದ ಕೃತಿ ಶೆಟ್ಟಿ; ಶಾಕ್​ ಆದ ಅಭಿಮಾನಿಗಳು
ಕೃತಿ-ನಾನಿ

 ‘ಶ್ಯಾಮ್​ ಸಿಂಗ್​ ರಾಯ್’ ಸಿನಿಮಾದ ಕಥೆ ಕೋಲ್ಕತ್ತಾದಲ್ಲಿ ನಡೆಯಲಿದೆ. ‘ದೇವದಾಸಿ’ ಪದ್ಧತಿ ವಿರುದ್ಧ ನಡೆದ ಹೋರಾಟದ ಕಥೆಯನ್ನು ಈ ಸಿನಿಮಾ ಹೇಳಲಿದೆ. ನಾನಿ ಅವರು ಶ್ಯಾಮ್​ ಸಿಂಗ್​ ಆಗಿ ಕಾಣಿಸಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Nov 18, 2021 | 9:56 PM


ನಟಿ ಕೃತಿ ಶೆಟ್ಟಿ (Krithi Shetty) ಟಾಲಿವುಡ್​ನ ಬೇಡಿಕೆಯ ನಟಿ. ಸಿನಿಮಾದ ಪಾತ್ರ ಏನನ್ನು ಕೇಳುತ್ತದೆಯೋ ಅದನ್ನು ಮಾಡೋಕೆ ಅವರು ಸದಾ ಸಿದ್ಧರಿರುತ್ತಾರೆ. ‘ಉಪ್ಪೇನಾ’ (Uppena) ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರು ನಿರ್ವಹಿಸಿದ್ದ ಬೇಬಮ್ಮ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಕೃತಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ನಟನೆಯ ‘ಶ್ಯಾಮ್​ ಸಿಂಗ್​ ರಾಯ್’ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ಈ ಟೀಸರ್​ನಲ್ಲಿ ಕೃತಿ ಲಿಪ್​ ಕಿಸ್​ ಮಾಡಿದ್ದಾರೆ.

‘ಶ್ಯಾಮ್​ ಸಿಂಗ್​ ರಾಯ್’ ಸಿನಿಮಾದ ಕಥೆ ಕೋಲ್ಕತ್ತಾದಲ್ಲಿ ನಡೆಯಲಿದೆ. ‘ದೇವದಾಸಿ’ ಪದ್ಧತಿ ವಿರುದ್ಧ ನಡೆದ ಹೋರಾಟದ ಕಥೆಯನ್ನು ಈ ಸಿನಿಮಾ ಹೇಳಲಿದೆ. ನಾನಿ ಅವರು ಶ್ಯಾಮ್​ ಸಿಂಗ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೇರವಾಗಿ ಡಿಸೆಂಬರ್​ 24ರಂದು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗುತ್ತಿದೆ. ಈ ಚಿತ್ರದ ಟೀಸರ್​ ಇಂದು ರಿಲೀಸ್​ ಆಗಿದ್ದು, ಕೃತಿ ಶೆಟ್ಟಿ ಅವರು ನಾನಿಗೆ ತುಟಿಯ ಮೇಲೆ ಮುತ್ತಿಟ್ಟಿದ್ದಾರೆ. ಸದ್ಯ, ಟೀಸರ್​ನ ಈ ಭಾಗ ಸಾಕಷ್ಟು ವೈರಲ್​ ಆಗುತ್ತಿದೆ.

‘ಬಂಗರಾಜು’ ಪೋಸ್ಟರ್​ ರಿಲೀಸ್​

‘ಬಂಗರಾಜು’ ಸಿನಿಮಾದಲ್ಲಿ ಕೃತಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಯಾವ ಅವತಾರ ತಾಳಬಹುದು ಎನ್ನುವ ಕುತೂಹಲ ಪ್ರೇಕ್ಷಕರದ್ದಾಗಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ನಾಗ ಚೈತನ್ಯ ಅವರು ಕೃತಿ ಅವರ ಹೊಸ ಲುಕ್​ ಅನಾವರಣ ಮಾಡಿದ್ದಾರೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಷ್ಟೇ ಅಲ್ಲ, ಕೃತಿ ಸೌಂದರ್ಯ ಎಲ್ಲರ ಗಮನ ಸೆಳೆದಿದೆ.

ಕೃತಿ ಅವರು ‘ಬಂಗರಾಜು’ ಚಿತ್ರದಲ್ಲಿ ನಾಗಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ನಾಗ ಚೈತನ್ಯ ಅನಾವರಣ ಮಾಡಿದ್ದಾರೆ. ಕೃತಿ ಅವರು ಹಸಿರು ಬಣ್ಣದ ಸೀರೆ ತೊಟ್ಟಿದ್ದಾರೆ. ಕತ್ತಿಗೆ ಗುಲಾಬಿ ಹೂವಿನ ಹಾರ ಹಾಕಿಕೊಂಡಿದ್ದಾರೆ. ಕೈಯಲ್ಲಿ ಕನ್ನಡಕ ಹಿಡಿದಿದ್ದಾರೆ. ಕಿವಿಗೆ ದೊಡ್ಡದಾದ ಕಿವಿಯೋಲೆ ಹಾಕಿದ್ದಾರೆ. ಅವರ ಲುಕ್​ ನೋಡಿ ಪ್ರೇಕ್ಷಕರು ಮನ ಸೋತಿದ್ದಾರೆ.

ಇದನ್ನೂ ಓದಿ: ಕೃತಿ ಶೆಟ್ಟಿ ಬೆಂಬಲಕ್ಕೆ ನಿಂತ ನಾಗ ಚೈತನ್ಯ; ಹೊಸ ಲುಕ್​ ನೋಡಿ ಫ್ಯಾನ್ಸ್​ ಫಿದಾ

Follow us on

Related Stories

Most Read Stories

Click on your DTH Provider to Add TV9 Kannada