ಬಿಗ್ ಬಾಸ್ ಮನೆಯಲ್ಲಿ ಚಾಕು ಹಿಡಿದು ಹತ್ಯೆ ಮಾಡಿಕೊಳ್ಳಲು ಮುಂದಾದ ಸ್ಪರ್ಧಿ; ವಾಹಿನಿಯಿಂದ ಮಹತ್ವದ ನಿರ್ಧಾರ
ಪಂಜಾಬಿ ಸಿಂಗರ್ ಅಫ್ಸಾನಾ ಅವರಿಗೆ ವಿಐಪಿ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಅವರು ತುಂಬಾನೇ ಕೋಪಗೊಂಡಿದ್ದರು. ಇದಲ್ಲದೆ, ಅವರು ಖಿನ್ನತೆಗೆ ಒಳಗಾಗಿದ್ದು ಕಂಡು ಬಂತು.
ಬಿಗ್ ಬಾಸ್ ಶೋ ಆರಂಭವಾದ ನಂತರ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಒಳಗೆ ಆಗುವ ಜಗಳಗಳು, ಹುಟ್ಟುವ ಪ್ರೇಮ ಕಥೆಗಳು ಸ್ಕ್ರಿಪ್ಟೆಡ್ ಅಲ್ಲ ಎಂಬುದನ್ನು ವಾಹಿನಿ ಅನೇಕ ಬಾರಿ ಹೇಳಿಕೊಂಡಿದೆ. ಆದರೆ, ಇದನ್ನು ಕೆಲವರು ನಂಬೋಕೆ ರೆಡಿ ಇಲ್ಲ. ಮನೆಯಲ್ಲಿ ನಡೆಯುವ ಡ್ರಾಮಾಗಳು ಕೂಡ ಕೆಲವೊಮ್ಮೆ ಅತಿರೇಕ ಎನಿಸುತ್ತದೆ. ಅದೇ ರೀತಿ ‘ಹಿಂದಿ ಬಿಗ್ ಬಾಸ್ 15’ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಮನೆಯಲ್ಲಿ ಸಾಕಷ್ಟು ಜಗಳಗಳು ಕೂಡ ಏರ್ಪಡುತ್ತಿದೆ. ಈಗ ಅದು ಮಿತಿ ಮೀರಿತ್ತು. ಅಫ್ಸಾನಾ ಖಾನ್ ಅವರು ತಮ್ಮನ್ನು ತಾವೇ ಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ಘಟನೆ ಶಾಕಿಂಗ್ ಆಗಿತ್ತು. ಈ ಬೆಳವಣಿಗೆ ಕಳೆದು ಕೆಲ ದಿನ ಆಗಿದ್ದು, ಈಗ ವಾಹಿನಿ ಈ ಬಗ್ಗೆ ನಿರ್ಧಾರ ಒಂದನ್ನು ತೆಗೆದುಕೊಳ್ಳುತ್ತಿದೆ.
ಪಂಜಾಬಿ ಸಿಂಗರ್ ಅಫ್ಸಾನಾ ಅವರಿಗೆ ವಿಐಪಿ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಅವರು ತುಂಬಾನೇ ಕೋಪಗೊಂಡಿದ್ದರು. ಇದಲ್ಲದೆ, ಅವರು ಖಿನ್ನತೆಗೆ ಒಳಗಾಗಿದ್ದು ಕಂಡು ಬಂತು. ಹೀಗಾಗಿ, ಅವರು ಅಡುಗೆ ಮನೆಯಲ್ಲಿ ಇದ್ದ ಚಾಕುವನ್ನು ತೆಗೆದುಕೊಂಡು ತಮ್ಮನ್ನು ತಾವು ಕೊಂದುಕೊಳ್ಳಲು ಮುಂದಾಗಿದ್ದರು. ಇದು ಅನೇಕರಿಗೆ ಆತಂಕ ಮೂಡಿಸಿತ್ತು. ಅಲ್ಲದೆ, ಅವರು ಅರಚಾಟ ಕೂಗಾಟದಿಂದ ಮನೆಯವರೆಲ್ಲರಿಗೂ ಕಿರಿಕಿರಿ ಉಂಟಾಗಿತ್ತು.
ಅಫ್ಸಾನಾ ತೆಗೆದುಕೊಂಡು ಈ ಸ್ಟೆಪ್ನಿಂದ ಅವರು ಮನೆಯಿಂದ ಹೊರ ಬಿದ್ದಿದ್ದರು. ಚಾಕು ಹಿಡಿದುಕೊಂಡ ಅವರು ಏನಾದರೂ ತೊಂದರೆ ಮಾಡಿಕೊಂಡರೆ ಅದಕ್ಕೆ ವಾಹಿನಿ ಜವಾಬ್ದಾರಿ ಆಗಬೇಕಾಗುತ್ತದೆ. ಅಲ್ಲದೆ, ಶೋ ನಿಲ್ಲುವ ಸಾಧ್ಯತೆ ಕೂಡ ಇರುತ್ತದೆ. ಈ ಕಾರಣಕ್ಕೆ ಅವರನ್ನು ಮನೆಯಿಂದ ಹೊರಗೆ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಈಗ ಹೊಸ ಅಪ್ಡೇಟ್ ಒಂದು ಬಂದಿದೆ.
View this post on Instagram
ಮನೆಯಿಂದ ಹೊರ ನಡೆದ ಅಫ್ಸಾನ ಪಂಜಾಬ್ಗೆ ತೆರಳಿದ್ದರು. ಈಗ ಅವರು ಮರಳಿ ಮುಂಬೈಗೆ ಬಂದಿದ್ದಾರೆ. ಮೂಲಗಳ ಪ್ರಕಾರ ಅವರು ಶೋನ ಮುಖ್ಯಸ್ಥರ ಜತೆ ಮಾತನಾಡಿದ್ದು ಮತ್ತೆ ಮನೆ ಒಳಗೆ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಫ್ಸಾನಾ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಕಾರಣಕ್ಕೆ ಅವರನ್ನು ಮತ್ತೆ ಶೋಗೆ ತಂದೆ ಅಭಿಮಾನಿಗಳು ಖುಷಿಯಾಗಬಹುದು ಎಂಬುದು ವಾಹನಿ ಲೆಕ್ಕಾಚಾರ. ಈ ಕಾರಣಕ್ಕೆ ಮತ್ತೆ ಶೋ ಒಳಗೆ ಅವರನ್ನು ಕರೆತರುವ ನಿರ್ಧಾರ ವಾಹಿನಿ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ರಾಕೇಶ್-ಶಮಿತಾ ರೊಮ್ಯಾನ್ಸ್; ಮೊದಲ ದಿನವೇ ಕಿಸ್ಸಿಂಗ್