ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತು ರಾಕೇಶ್​-ಶಮಿತಾ ರೊಮ್ಯಾನ್ಸ್​; ಮೊದಲ ದಿನವೇ ಕಿಸ್ಸಿಂಗ್​

ಶಮಿತಾ ಮತ್ತು ರಾಕೇಶ್​ ಬಿಗ್​ ಬಾಸ್​ ಮನೆಯಲ್ಲಿ ಒಂದಾಗಿರುವುದು ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ. ಇವರ ರೊಮ್ಯಾನ್ಸ್​ ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಮುಂದುವರಿಯುವ ಸಾಧ್ಯತೆ ಗೋಚರವಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತು ರಾಕೇಶ್​-ಶಮಿತಾ ರೊಮ್ಯಾನ್ಸ್​; ಮೊದಲ ದಿನವೇ ಕಿಸ್ಸಿಂಗ್​
ರಾಕೆಶ್​-ಶಮಿತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 05, 2021 | 4:07 PM

ರಾಕೇಶ್​ ಬಾಪಟ್​ ಹಾಗೂ ಶಮಿತಾ ಶೆಟ್ಟಿ ಬಿಗ್​ ಬಾಸ್​ ಒಟಿಟಿಯಲ್ಲಿ ತುಂಬಾನೇ ಕ್ಲೋಸ್​ ಆಗಿದ್ದರು. ಈ ಜೋಡಿ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಬೇಗ ಕನೆಕ್ಟ್​ ಆಗಿದ್ದರು. ಇವರ ಆಪ್ತತೆ ಬಿಗ್​ ಬಾಸ್​ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬಿಗ್​ಬಾಸ್​ ಒಟಿಟಿಯಿಂದ ಹೊರ ಬಂದ ನಂತರವೂ ಇವರು ಕ್ಲೋಸ್​ ಆಗಿಯೇ ಇದ್ದರು. ಈಗ ಈ ಜೋಡಿ ಮತ್ತೆ ಬಿಗ್​ ಬಾಸ್​ 15ರಲ್ಲಿ ಒಂದಾಗಿದೆ. ಇಬ್ಬರೂ ಮೊದಲ ದಿನವೇ ರೊಮ್ಯಾನ್ಸ್​ ಶುರು ಮಾಡಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಬಿಗ್​ ಬಾಸ್​ 15 ಆರಂಭವಾಗಿತ್ತು. ಸಲ್ಮಾನ್​ ಖಾನ್​ ಅವರು ಗ್ರ್ಯಾಂಡ್​ ಆಗಿ ಇದಕ್ಕೆ ಚಾಲನೆ ನೀಡಿದ್ದರು. ರಣವೀರ್​ ಸಿಂಗ್​ ಸೇರಿ ಕೆಲ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ಬಾರಿ ಕಾಡಿನ ಥೀಮ್​ನಲ್ಲಿ ಬಿಗ್​​ ಬಾಸ್​ ನಡೆಯುತ್ತಿದೆ. ಶಮಿತಾ ಶೆಟ್ಟಿ ಅವರು ದೊಡ್ಮನೆಗೆ ಎಂಟ್ರಿ ಪಡೆದಿದ್ದರು. ಆದರೆ, ರಾಕೇಶ್​ ಬಾಪಟ್​ಗೆ ಈ ಅವಕಾಶ ಇರಲಿಲ್ಲ. ಈಗ ಬಿಗ್​ ಬಾಸ್​ ಮನೆ ಒಳಗೆ ವೈಲ್ಡ್​ ಕಾರ್ಡ್​ ಮೂಲಕ ಅವರು ಎಂಟ್ರಿ ಪಡೆದಿದ್ದಾರೆ. ಬಂದ ಮೊದಲ ದಿನವೇ ರಾಕೇಶ್​ ಅವರು ಶಮಿತಾರನ್ನು ಹಗ್​ ಮಾಡಿಕೊಂಡು ಕಿಸ್​ ಮಾಡಿದ್ದಾರೆ.

ಕಲರ್ಸ್​ ಟಿವಿ ಅವರು ಈ ಬಗ್ಗೆ ಪ್ರೋಮೋ ಹಂಚಿಕೊಂಡಿದೆ. ಕಾಡಿನ ಥೀಮ್​ನಲ್ಲಿ ಬಿಗ್​ ಬಾಸ್​ ನಡೆಯುತ್ತಿರುವುದರಿಂದ ಕರಡಿ ವೇಶದಲ್ಲಿ ರಾಕೇಶ್​ ಬಂದಿದ್ದಾರೆ. ಹೀಗಾಗಿ, ಶಮಿತಾಗೆ ಕರಡಿ ವೇಶದಲ್ಲಿರುವ ವ್ಯಕ್ತಿ ರಾಕೇಶ್​ ಎಂದು ತಿಳಿದಿಲ್ಲ. ಹೀಗಾಗಿ, ಅವರು ನಾರ್ಮಲ್​ ಆಗಿಯೇ ಇದ್ದರು. ಈ ವೇಳೆ ಮುಖವಾಡ ತೆಗೆದ ರಾಕೇಶ್​ ಅವರು ಶಮಿತಾ ಅವರನ್ನು ಹಿಂದಿನಿಂದ ಹಗ್​ ಮಾಡಿ, ಮುತ್ತುಕೊಟ್ಟಿದ್ದಾರೆ. ರಾಕೇಶ್​ ನೋಡಿ ಶಮಿತಾ ನಿಜಕ್ಕೂ ಖುಷಿಪಟ್ಟಿದ್ದಾರೆ.

View this post on Instagram

A post shared by ColorsTV (@colorstv)

ಶಮಿತಾ ಮತ್ತು ರಾಕೇಶ್​ ಬಿಗ್​ ಬಾಸ್​ ಮನೆಯಲ್ಲಿ ಒಂದಾಗಿರುವುದು ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ. ಇವರ ರೊಮ್ಯಾನ್ಸ್​ ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಮುಂದುವರಿಯುವ ಸಾಧ್ಯತೆ ಗೋಚರವಾಗಿದೆ. ಮುಂದಿನ ಎಪಿಸೋಡ್​ನಲ್ಲಿ ಈ ಬಗ್ಗೆ ಗೊತ್ತಾಗಲಿದೆ.

ಇದನ್ನೂ ಓದಿ: Raj Kundra: ಶಿಲ್ಪಾ ಶೆಟ್ಟಿ ವರ್ತನೆಗೆ ತದ್ವಿರುದ್ಧವಾಗಿ ನಡೆದುಕೊಂಡ ರಾಜ್​ ಕುಂದ್ರಾ; ಅನುಮಾನ ಹುಟ್ಟಿಸಿದೆ ಈ ನಡೆ

ಬಿಗ್​ ಬಾಸ್​ನಲ್ಲಿ ಶಮಿತಾ ಶೆಟ್ಟಿಗೆ ಕಾದಿದೆ ಬಿಗ್​ ಸರ್​ಪ್ರೈಸ್​; ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆ ಸೇರುವವರು ಯಾರು?

Published On - 4:02 pm, Fri, 5 November 21

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್