AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Pallavi: ನಟಿ ಸಾಯಿ ಪಲ್ಲವಿಗೆ ಜನರು ‘ಲೇಡಿ ಪವರ್ ಸ್ಟಾರ್​’ ಅಂತ ಕರೆಯೋದು ಯಾಕೆ? ಇಲ್ಲಿದೆ ಕಾರಣ..

Lady Power Star: ಯಾವ ಸ್ಟಾರ್​ ನಟನಿಗೂ ಕಮ್ಮಿ ಇಲ್ಲ ಎಂಬಷ್ಟು ಅಭಿಮಾನಿಗಳು ಸಾಯಿ ಪಲ್ಲವಿಗೆ ಇದ್ದಾರೆ. ಇದನ್ನು ಗಮನಿಸಿದ ಸ್ಟಾರ್​ ನಿರ್ದೇಶಕ ಸುಕುಮಾರ್​ ಅವರೇ ಅಚ್ಚರಿಪಟ್ಟಿದ್ದುಂಟು.

Sai Pallavi: ನಟಿ ಸಾಯಿ ಪಲ್ಲವಿಗೆ ಜನರು ‘ಲೇಡಿ ಪವರ್ ಸ್ಟಾರ್​’ ಅಂತ ಕರೆಯೋದು ಯಾಕೆ? ಇಲ್ಲಿದೆ ಕಾರಣ..
ಸಾಯಿ ಪಲ್ಲವಿ
TV9 Web
| Edited By: |

Updated on: Jun 17, 2022 | 8:04 AM

Share

ಸರಳತೆಯ ಕಾರಣದಿಂದಲೇ ಎಲ್ಲರಿಗೂ ಇಷ್ಟ ಆಗುತ್ತಾರೆ ನಟಿ ಸಾಯಿ ಪಲ್ಲವಿ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಮಲಯಾಳಂ, ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿ (Sai Pallavi) ಈಗ ಕನ್ನಡಕ್ಕೂ ಕಾಲಿಡುತ್ತಿದ್ದಾರೆ. ಅವರ ಹೊಸ ಸಿನಿಮಾ ‘ಗಾರ್ಗಿ’ ಬಹುಭಾಷೆಯಲ್ಲಿ ಮೂಡಿಬರುತ್ತಿದ್ದು, ಕನ್ನಡಕ್ಕೆ ಸ್ವತಃ ಸಾಯಿ ಪಲ್ಲವಿ ಡಬ್​ ಮಾಡುತ್ತಿದ್ದಾರೆ. ಅವರು ನಟಿಸಿರುವ ‘ವಿರಾಟ ಪರ್ವಂ’ (Virat Parvam) ಸಿನಿಮಾ ಇಂದು (ಜೂನ್​ 17) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಜನರು ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಇನ್ನು, ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ‘ಲೇಡಿ ಪವರ್​ ಸ್ಟಾರ್​’ (Lady Power Star) ಎಂದು ಕರೆಯುತ್ತಿದ್ದಾರೆ. ಮುಂದಿನ ಸಿನಿಮಾದಿಂದ ಟೈಟಲ್​ ಕಾರ್ಡ್​ನಲ್ಲಿ ಕೂಡ ಅವರ ಹೆಸರಿನ ಜೊತೆ ಈ ಬಿರುದು ಸೇರಿಕೊಳ್ಳಲಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಅವರಿಗೆ ಈ ರೀತಿ ಬಿರುದು ಸಿಗಲು ಕಾರಣ ಏನು? ಇದನ್ನು ನೀಡಿದ್ದು ಯಾರು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಗ್ಲಾಮರ್​ ನಂಬಿಕೊಂಡು ಬದುಕುವ ನಟಿಯರ ಸಾಲಿಗೆ ಸಾಯಿ ಪಲ್ಲವಿ ಸೇರುವುದಿಲ್ಲ. ನಟನೆ ಮತ್ತು ಡ್ಯಾನ್ಸ್​ ಮೂಲಕವೇ ಅವರು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜೀವನದಲ್ಲಿ ತಮ್ಮದೇ ಆದಂತಹ ಕೆಲವು ನಿಯಮಗಳನ್ನು ಅವರು ಪಾಲಿಸುತ್ತಾರೆ. ಅವರ ಫ್ಯಾನ್​ ಫಾಲೋಯಿಂಗ್​ ಕಂಡು ತೆಲುಗಿನ ಸ್ಟಾರ್​ ನಿರ್ದೇಶಕ ಸುಕುಮಾರ್​ ಅವರೇ ಅಚ್ಚರಿಪಟ್ಟಿದ್ದರು. ಸಾಯಿ ಪಲ್ಲವಿಗೆ ‘ಲೇಡಿ ಪವರ್​ ಸ್ಟಾರ್​’ ಎಂದು ಹೆಸರು ಬರಲು ಅವರೇ ಕಾರಣ.

ಇದನ್ನೂ ಓದಿ: Sai Pallavi: ‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುವ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ’: ಸಾಯಿ ಪಲ್ಲವಿ

ಇದನ್ನೂ ಓದಿ
Image
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Image
Sai Pallavi: ಪಾತ್ರಕ್ಕಾಗಿ ಸಾಯಿ ಪಲ್ಲವಿ 2 ದಿನ ಉಪವಾಸ; ಇವರೇ ನಿಜವಾದ ನ್ಯಾಷನಲ್​ ಕ್ರಶ್​ ಎಂದ ಫ್ಯಾನ್ಸ್​
Image
Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ

ಹೌದು, ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮಕ್ಕೆ ಸಾಯಿ ಪಲ್ಲವಿ ಮತ್ತು ಸುಕುಮಾರ್​ ಅವರು ಅತಿಥಿಯಾಗಿ ಬಂದಿದ್ದರು. ಈ ವರ್ಷ ಫೆಬ್ರವರಿಯಲ್ಲಿ ನಡೆದ ಆ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಕೂಡ ಸೇರಿದ್ದರು. ಸಾಯಿ ಪಲ್ಲವಿ ಮಾತನಾಡಲು ಮೈಕ್​ ಹಿಡಿದಾಗ ಫ್ಯಾನ್ಸ್​ ಜೋರಾಗಿ ಕೂಗಲು ಶುರು ಮಾಡಿದರು. ಯಾವ ಸ್ಟಾರ್​ ನಟನಿಗೂ ಕಮ್ಮಿ ಇಲ್ಲ ಎಂಬಷ್ಟು ಅಭಿಮಾನಿಗಳು ಸಾಯಿ ಪಲ್ಲವಿಗೆ ಇದ್ದಾರೆ. ಇದನ್ನು ಗಮನಿಸಿದ ಸುಕುಮಾರ್​ ಅವರು ‘ಲೇಡಿ ಪವನ್​ ಕಲ್ಯಾಣ್​’ ಎಂದು ಕರೆದರು. ಪವನ್​ ಕಲ್ಯಾಣ್​ ಅವರು ಟಾಲಿವುಡ್​ನಲ್ಲಿ ‘ಪವರ್​ ಸ್ಟಾರ್​’ ಎನಿಸಿಕೊಂಡಿದ್ದಾರೆ. ಅವರಷ್ಟೇ ಫ್ಯಾನ್​ ಫಾಲೋಯಿಂ​ಗ್​ ಸಾಯಿ ಪಲ್ಲವಿಗೂ ಇರುವುದರಿಂದ ಜನರು ‘ಲೇಡಿ ಪವರ್​ ಸ್ಟಾರ್​’ ಎಂದು ಕರೆಯಲು ಆರಂಭಿಸಿದ್ದಾರೆ.

ಸಾಯಿ ಪಲ್ಲವಿ ಮದುವೆ ಆಗುತ್ತಾರೆ ಎಂಬ ಗಾಸಿಪ್​ ಇತ್ತೀಚೆಗೆ ಹಬ್ಬಿತ್ತು. ಆದರೆ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಆ ಗಾಳಿಸುದ್ದಿಗೆ ಅವರು ಬ್ರೇಕ್​ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ