ಮಾಸ್ ಮತ್ತು ಕ್ಲಾಸ್ ಬಗ್ಗೆ ಅಪ್ಪು ಕೇಳಿದ್ದ ಪ್ರಶ್ನೆ ಏನು? ವೇದಿಕೆಯಲ್ಲಿ ನೆನಪಿನ ಪುಟ ತೆರೆದ ರವಿಚಂದ್ರನ್
‘ಗುರು ಶಿಷ್ಯರು’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ರವಿಚಂದ್ರನ್ ಅವರು ಪುನೀತ್ ಕುರಿತು ಮಾತನಾಡಿದರು. ಆ ವಿಡಿಯೋ ಇಲ್ಲಿದೆ..
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕನ್ನಡ ಚಿತ್ರರಂಗ ಪ್ರತಿ ಕ್ಷಣ ನೆನಪು ಮಾಡಿಕೊಳ್ಳುತ್ತದೆ. ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಒಮ್ಮೆಯಾದರೂ ಅಪ್ಪು ಹೆಸರು ಪ್ರಸ್ತಾಪ ಆಗುತ್ತದೆ. ಅಷ್ಟರಮಟ್ಟಿಗೆ ಪುನೀತ್ ರಾಜ್ಕುಮಾರ್ ಅವರು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಗುರುವಾರ (ಜೂನ್ 16) ಶರಣ್ ನಟನೆಯ ‘ಗುರು ಶಿಷ್ಯರು’ (Guru Shishyaru) ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರವಿಚಂದ್ರನ್ ಅವರು ಪುನೀತ್ ಬಗ್ಗೆ ಮಾತನಾಡಿದರು. ‘ಮಾಸ್ ಮತ್ತು ಕ್ಲಾಸ್’ ಎಂಬ ವಿಷಯದ ಬಗ್ಗೆ ಪುನೀತ್ ರಾಜ್ಕುಮಾರ್ ಬಂದು ಪ್ರಶ್ನೆ ಕೇಳಿದ್ದ ಸನ್ನಿವೇಶವನ್ನು ‘ಕ್ರೇಜಿ ಸ್ಟಾರ್’ ನೆನಪಿಸಿಕೊಂಡರು. ರವಿಚಂದ್ರನ್ (Ravichandran) ಮತ್ತು ಡಾ. ರಾಜ್ಕುಮಾರ್ ಕುಟುಂಬದ ನಡುವೆ ಮೊದಲಿನಿಂದಲೂ ಸ್ನೇಹ ಇದೆ. ಅನೇಕ ಸಂದರ್ಭಗಳಲ್ಲಿ ರವಿಚಂದ್ರನ್ ಆ ಬಗ್ಗೆ ಮಾತನಾಡಿದ್ದುಂಟು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 17, 2022 09:27 AM
ಮೂವರ ಶೂಟೌಟ್ ಕೇಸ್: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ

