ಪುನೀತ್​ ಪುತ್ಥಳಿ ಅನಾವರಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜ್​ಕುಮಾರ್​ ಪತ್ನಿ ಮಂಗಳಾ

Puneeth Rajkumar Statue: ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡ ನೋವು ಎಂದಿಗೂ ಕೊನೆ ಆಗುವಂಥದ್ದಲ್ಲ. ಡಾ. ರಾಜ್​ ಕುಟುಂಬದವರಿಗೆ ಪ್ರತಿ ಕ್ಷಣವೂ ಅಪ್ಪು ನೆನಪು ಕಾಡುತ್ತದೆ.

TV9kannada Web Team

| Edited By: Madan Kumar

Jun 06, 2022 | 9:13 AM

‘ಪವರ್​ ಸ್ಟಾರ್​’ ಪುನೀತ್ ರಾಜ್​ಕುಮಾರ್ (Raghavendra Rajkumar)​ ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿದ್ದರೂ ಕೂಡ ಅವರ ಮೇಲೆ ಜನರು ಇಟ್ಟಿರುವ ಅಭಿಮಾನ ಶಾಶ್ವತ. ಅಪ್ಪು ನೆನಪನ್ನು ಅಮರವಾಗಿಸುವ ಸಲುವಾಗಿ ಹೊಸಪೇಟೆಯಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಈ ಪುತ್ಥಳಿ (Puneeth Rajkumar Statue) ಅನಾವರಣದ ಕಾರ್ಯಕ್ರಮ ಅದ್ದೂರಿಯಾಗಿ ಭಾನುವಾರ (ಜೂನ್​ 5) ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ರಾಘವೇಂದ್ರ ರಾಜ್​ಕುಮಾರ್​, ಅವರ ಪತ್ನಿ ಮಂಗಳಾ ಸೇರಿದಂತೆ ಡಾ. ರಾಜ್​ ಕುಟುಂಬದ ಅನೇಕರು ಭಾಗಿಯಾದರು. ಈ ವೇಳೆ ಮಂಗಳಾ (Mangala Raghavendra Rajkumar) ಅವರು ತುಂಬ ಎಮೋಷನಲ್​ ಆದರು. ಎಲ್ಲರ ಎದುರು ಅವರು ಬಿಕ್ಕಿ ಬಿಕ್ಕಿ ಅತ್ತರು. ಪುನೀತ್​ ಇಲ್ಲ ಎಂಬ ನೋವು ಅವರ ಕುಟುಂಬದ ಸದಸ್ಯರಿಗೆ ಪ್ರತಿಕ್ಷಣ ಕಾಡುತ್ತಿದೆ. ಆದರೂ ಜೀವನ ಮುಂದೆ ಸಾಗಲೇಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada