9ನೇ ಕ್ಲಾಸ್​ ಓದುವಾಗಲೇ ಮೇಘನಾಗೆ ಪುನೀತ್​ ಜತೆ ನಟಿಸುವ ಆಫರ್​​; ಆದ್ರೆ ಒಪ್ಪಿಕೊಳ್ಳಲಿಲ್ಲ ಯಾಕೆ?

9ನೇ ಕ್ಲಾಸ್​ ಓದುವಾಗಲೇ ಮೇಘನಾಗೆ ಪುನೀತ್​ ಜತೆ ನಟಿಸುವ ಆಫರ್​​; ಆದ್ರೆ ಒಪ್ಪಿಕೊಳ್ಳಲಿಲ್ಲ ಯಾಕೆ?

TV9 Web
| Updated By: ಮದನ್​ ಕುಮಾರ್​

Updated on: Jun 06, 2022 | 7:30 AM

Meghana Raj: ಅನೇಕ ನಟಿಯರನ್ನು ಲಾಂಚ್​ ಮಾಡಿದ ಕೀರ್ತಿ ಡಾ. ರಾಜ್​ ಕುಟುಂಬಕ್ಕೆ ಇದೆ. 9ನೇ ತರಗತಿಯಲ್ಲಿ ಇರುವಾಗಲೇ ಮೇಘನಾ ರಾಜ್​ ಅವರಿಗೆ ದೊಡ್ಮನೆಯಿಂದ ಆಫರ್​ ಬಂದಿತ್ತು.

ನಟಿ ಮೇಘನಾ ರಾಜ್​ (Meghana Raj) ಅವರದ್ದು ಕಲಾವಿದರ ಕುಟುಂಬ. ಅವರ ತಂದೆ ಸುಂದರ್​ ರಾಜ್​ (Sundar Raj) ಮತ್ತು ಪ್ರಮೀಳಾ ಜೋಶಾಯ್​ ಅವರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಮೇಘನಾ ರಾಜ್​ ಕೂಡ ಪೋಷಕರ ಹಾದಿಯಲ್ಲೇ ಸಾಗಿ ಬಂದಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಅವರು 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಪುನೀತ್​ ರಾಜ್​ಕುಮಾರ್​ (Puneeth Rajkumar) ಜೊತೆ ಹೀರೋಯಿನ್​ ಆಗಿ ನಟಿಸುವ ಅವಕಾಶ ಒದಗಿಬಂದಿತ್ತು. ವಜ್ರೇಶ್ವರಿ ಕಂಬೈನ್ಸ್​ ಮೂಲಕವೇ ಈ ಆಫರ್​ ಮಾಡಲಾಗಿತ್ತು. ಆದರೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಸುಂದರ್​ ರಾಜ್​ ಕುಟುಂಬದವರು ಈ ಆಫರ್​ ಒಪ್ಪಿಕೊಳ್ಳಲಿಲ್ಲ. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುಂದರ್​ ರಾಜ್​ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೇಘನಾ ರಾಜ್​ ಅವರ ಬಾಲ್ಯ ಹೇಗಿತ್ತು? ಡಾ. ರಾಜ್​ಕುಮಾರ್​ ಕುಟುಂಬದವರು ಮೇಘನಾಗೆ ತೋರುತ್ತಿದ್ದ ಪ್ರೀತಿ ಯಾವ ರೀತಿ ಇತ್ತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.