Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?

Sai Pallavi Clarification Video: ಸಾಯಿ ಪಲ್ಲವಿ ಅವರು ಹಂಚಿಕೊಂಡಿರುವ ಸ್ಪಷ್ಟನೆಯ ವಿಡಿಯೋ ಸಖತ್​ ವೈರಲ್​ ಆಗಿದೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on:Jun 19, 2022 | 8:22 AM

ಸಿನಿಮಾ ಹೊರತಾದ ಕಾರಣದಿಂದ ಸಾಯಿ ಪಲ್ಲವಿ (Sai Pallavi) ಅವರು ಸಖತ್​ ಸುದ್ದಿ ಆಗಿದ್ದಾರೆ. ‘ಈ ಹಿಂದೆ ನಡೆದ ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆ ಮತ್ತು ಈಗ ನಡೆಯುತ್ತಿರುವ ಗುಂಪು ಹಲ್ಲೆ ಎರಡೂ ಒಂದೇ’ ಎಂದು ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣ ಆಗಿತ್ತು. ಒಂದು ವರ್ಗದ ನೆಟ್ಟಿಗರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ ಅವರು ಈಗ ಸ್ಪಷ್ಟನೆ ಕೂಡ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು, ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಪಪಡಿಸಿದ್ದಾರೆ. ಈ ವಿಡಿಯೋಗೆ (Pallavi Clarification Video) ಸಾವಿರಾರು ಕಮೆಂಟ್​ಗಳು ಬಂದಿವೆ. ಸಾಕಷ್ಟು ಜನರು ಸಾಯಿ ಪಲ್ಲವಿಗೆ ಬೆಂಬಲವಾಗಿ ನಿಂತಿದ್ದಾರೆ. #westandwithpallavi ಎಂಬ ಹ್ಯಾಶ್​ ಟ್ಯಾಗ್​ ಮೂಲಕ ಅನೇಕರು ಅವರಿಗೆ ಸಾಥ್​ ನೀಡಿದ್ದಾರೆ.

ನಟನೆ ಮೂಲಕ ಗಮನ ಸೆಳೆದ ಸಾಯಿ ಪಲ್ಲವಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕೇವಲ ಒಂದು ಹೇಳಿಕೆ ನೀಡಿದ್ದಾರೆ ಎಂಬ ಕಾರಣ ಆ ಅಭಿಮಾನಿಗಳು ಸಾಯಿ ಪಲ್ಲವಿಯನ್ನು ಬಿಟ್ಟು ಕೊಡುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮ ನೆಚ್ಚಿನ ನಟಿಯ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ, ಅವರು ಕ್ಷಮೆ ಕೇಳುವ ಅವಶ್ಯಕತೆಯೇ ಇಲ್ಲ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ‘ಏನೇ ಆದ್ರೂ ನಾವು ಸಾಯಿ ಪಲ್ಲವಿ ಫ್ಯಾನ್ಸ್​’ ಎಂದು ಅನೇಕರು ತಮ್ಮ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ
Image
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Image
Sai Pallavi: ಪಾತ್ರಕ್ಕಾಗಿ ಸಾಯಿ ಪಲ್ಲವಿ 2 ದಿನ ಉಪವಾಸ; ಇವರೇ ನಿಜವಾದ ನ್ಯಾಷನಲ್​ ಕ್ರಶ್​ ಎಂದ ಫ್ಯಾನ್ಸ್​
Image
Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ

ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಸಾಯಿ ಪಲ್ಲವಿ ಅವರು ಹಂಚಿಕೊಂಡಿರುವ ಸ್ಪಷ್ಟನೆಯ ವಿಡಿಯೋ ಸಖತ್​ ವೈರಲ್​ ಆಗಿದೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 12 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಕೆಲವರು ಸಾಯಿ ಪಲ್ಲವಿ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಕೂಡ. ‘ಈಗಲೂ ಈ ನಟಿಗೆ ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಸರಿಯಾಗಿ ತಿಳಿದಿಲ್ಲ’ ಎಂಬ ಕಮೆಂಟ್​ ಸಹ ಬಂದಿದೆ.

ವಿಡಿಯೋದಲ್ಲಿ ಸಾಯಿ ಪಲ್ಲವಿ ಹೇಳಿದ್ದೇನು?

‘ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ. ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್​ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಎಲ್ಲಾ ಭಾರತೀಯರು ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯ ರೀತಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದು ಬೇಸರದ ವಿಚಾರ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:22 am, Sun, 19 June 22

ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!