Kajal Aggarwal Birthday: ಸಾವಿನ ಕದ ತಟ್ಟಿ ಬಂದಿದ್ದ ಕಾಜಲ್​ ಅಗರ್​ವಾಲ್​; ಬದುಕುಳಿದಿದ್ದು ನಿಜಕ್ಕೂ ಅಚ್ಚರಿ

ಸೆಟ್​ ಕೆಲಸ ಮಾಡುತ್ತಿದ್ದ ಕ್ರೇನ್ ನೋಡನೋಡುತ್ತಿದ್ದಂತೆ ನೆಲಕ್ಕೆ ಉರುಳಿತು. ಕ್ರೇನ್ ಕೆಳಗೆ ಸಿಕ್ಕ ಮೂರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ 9 ಜನರಿಗೆ ಗಂಭೀರ ಗಾಯವಾಗಿತ್ತು.

Kajal Aggarwal Birthday: ಸಾವಿನ ಕದ ತಟ್ಟಿ ಬಂದಿದ್ದ ಕಾಜಲ್​ ಅಗರ್​ವಾಲ್​; ಬದುಕುಳಿದಿದ್ದು ನಿಜಕ್ಕೂ ಅಚ್ಚರಿ
ಕಾಜಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 19, 2022 | 7:00 AM

ನಟಿ ಕಾಜಲ್ ಅಗರ್​ವಾಲ್ ಅವರು (Kajal Aggarwal) ಇಂದು (ಜೂನ್ 19) 37ನೇ ವರ್ಷದ ಬರ್ತ್​ಡೇ (Kajal Aggarwal Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರ ಕುಟುಂಬಕ್ಕೆ ಈ ಬಾರಿ ಮಗುವಿನ ಆಗಮನ ಆಗಿದೆ. ಹೀಗಾಗಿ, ಕಾಜಲ್​ ಕುಟುಂಬದಲ್ಲಿ ಸಂಭ್ರಮ ಕೊಂಚ ಹೆಚ್ಚೇ ಮನೆ ಮಾಡಿದೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕಾಜಲ್​ ಅಗರ್​ವಾಲ್​ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಕಾಜಲ್​ ಅಗರ್​​ವಾಲ್​ ಜೀವನದಲ್ಲಿ ಒಂದು ಭೀಕರ ಘಟನೆ ನಡೆದಿತ್ತು. ಅವರ ಕಣ್ಣೆದುರೇ ಮೂವರು ಮೃತಪಟ್ಟಿದ್ದರು. ಕಾಜಲ್ ಸಿನಿಮೀಯ ರೀತಿಯಲ್ಲಿ ಬದುಕುಳಿದಿದ್ದರು. ಅವರ ಬರ್ತ್​ಡೇ ದಿನ ಕೆಲವರು ಈ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಅದು 2020ರ ಫೆಬ್ರವರಿ ತಿಂಗಳು. ಕಮಲ್ ಹಾಸನ್ ನಟನೆಯ ‘ಇಂಡಿಯನ್​ 2’ ಚಿತ್ರದ ಶೂಟಿಂಗ್​ಗಾಗಿ ಕಾಜಲ್ ಅಗರ್​​ವಾಲ್​ ಅವರು ಚೆನ್ನೈನ ಇವಿಪಿ ಫಿಲ್ಮ್​​ ಸಿಟಿಯಲ್ಲಿದ್ದರು. ದೊಡ್ಡ ದೊಡ್ಡ ಸೆಟ್ ಹಾಕಿ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. ಸೆಟ್​ ಕೆಲಸ ಮಾಡುತ್ತಿದ್ದ ಕ್ರೇನ್ ನೋಡನೋಡುತ್ತಿದ್ದಂತೆ ನೆಲಕ್ಕೆ ಉರುಳಿತು. ಕ್ರೇನ್ ಕೆಳಗೆ ಸಿಕ್ಕ ಮೂರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ 9 ಜನರಿಗೆ ಗಂಭೀರ ಗಾಯವಾಗಿತ್ತು. ಕಾಜಲ್ ಕೂಡ ಇದೇ ಸೆಟ್​ನಲ್ಲಿದ್ದರು. ಅವರು ಈ ಅವಘಡದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು.

ಈ ಘಟನೆ ವಿಚಾರ ಕಾಡ್ಗಿಚ್ಚಿನಂತೆ ಎಲ್ಲ ಕಡೆಗಳಲ್ಲೂ ಹಬ್ಬಿತ್ತು. ಕೆಲವರು ಈ ಘಟನೆ ಬಗ್ಗೆ ಆತಂಕ ಹೊರಹಾಕಿದರು. ಸ್ವತಃ ಕಾಜಲ್ ಅಗರ್​ವಾಲ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಆಘಾತದ ಬಗ್ಗೆ ವಿವರಿಸಿದ್ದರು. ‘ಕ್ರೇನ್ ಅಪಘಾತದಿಂದ ತುಂಬಾನೇ ಆಘಾತ ಉಂಟಾಗಿದೆ. ನಾನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದೇನೆ’ ಎಂದು ಕಾಜಲ್ ಬರೆದುಕೊಂಡಿದ್ದರು.

ಇದನ್ನೂ ಓದಿ
Image
ಮೊದಲ ಬಾರಿಗೆ ಮಗುವಿನ ಮುಖ ತೋರಿಸಿದ ನಟಿ ಕಾಜಲ್ ಅಗರ್​​ವಾಲ್​
Image
Kajal Aggarwal: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಕಾಜಲ್ ಅಗರ್ವಾಲ್​​
Image
Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
Image
Kajal Aggarwal: ಕಾಜಲ್ ಅಗರ್ವಾಲ್ ಪುತ್ರನ ಹೆಸರು ಬಹಿರಂಗ; ಮಗುವಿನ ಹೆಸರು ತಿಳಿಸಿದ ಪತಿ ಗೌತಮ್

ಇದನ್ನೂ ಓದಿ: ಮೊದಲ ಬಾರಿಗೆ ಮಗುವಿನ ಮುಖ ತೋರಿಸಿದ ನಟಿ ಕಾಜಲ್ ಅಗರ್​​ವಾಲ್​

ಕಮಲ್ ಹಾಸನ್ ನಟನೆಯ ‘ಇಂಡಿಯನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಕಾರಣಕ್ಕೆ ‘ಇಂಡಿಯನ್ 2’ ಮಾಡಲು ಚಿತ್ರತಂಡ ನಿರ್ಧರಿಸಿತ್ತು. 2020ರಲ್ಲೇ ಶೂಟಿಂಗ್ ಆರಂಭ ಕೂಡ ಆಯಿತು. ಆದರೆ, ಈ ಮಧ್ಯೆ ಕೊವಿಡ್ ಕಾಣಿಸಿಕೊಂಡಿತು. ಆ ಬಳಿಕ ಕಮಲ್ ರಾಜಕೀಯದಲ್ಲಿ ಬ್ಯುಸಿ ಆದರು. ಈ ಕಾರಣಕ್ಕೆ ಸಿನಿಮಾ ಕೆಲಸಗಳು ವಿಳಂಬವಾಗುತ್ತಲೇ ಬಂದವು. ಹೀಗಾಗಿ, ಕಾಜಲ್​ ಚಿತ್ರತಂಡದಿಂದ ಹೊರ ನಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ