ಯಶ್ ಕೈಯಲ್ಲಿ ಹಾವು; ಪ್ರಾಣಿ, ಪಕ್ಷಿಗಳ ಜತೆ ರಾಕಿಂಗ್ ಸ್ಟಾರ್ ಕುಟುಂಬ, ಇಲ್ಲಿದೆ ವಿಡಿಯೋ

ರಾಧಿಕಾ ಪಂಡಿತ್ ಅವರು ಅನಿಮಲ್ ಪಾರ್ಕ್ ತೆರಳಿದ ದಿನ ಗಿಳಿ ಜತೆಗಿನ ಪೋಟೋ ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಯಶ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಯಶ್ ಕೈಯಲ್ಲಿ ಹಾವು; ಪ್ರಾಣಿ, ಪಕ್ಷಿಗಳ ಜತೆ ರಾಕಿಂಗ್ ಸ್ಟಾರ್ ಕುಟುಂಬ, ಇಲ್ಲಿದೆ ವಿಡಿಯೋ
ಯಶ್
TV9kannada Web Team

| Edited By: Rajesh Duggumane

Jun 18, 2022 | 9:26 PM

‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಗೆ ಬಂದು ಎರಡು ತಿಂಗಳು ಕಳೆದಿದೆ. ಈ ಚಿತ್ರದ ಶೂಟಿಂಗ್ ಹಾಗೂ ಪ್ರಚಾರದಲ್ಲಿ ಬ್ಯುಸಿ ಆಗಿದ್ದ ಯಶ್, ಸಿನಿಮಾ ತೆರೆಗೆ ಬಂದ ಬಳಿಕ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಕಾರಣಕ್ಕೆ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ ಅವರು. ಯಶ್ ಅವರು (Yash) ಪತ್ನಿ ರಾಧಿಕಾ ಪಂಡಿತ್ (Radhika Pandit)​, ಮಕ್ಕಳಾದ ಆಯ್ರಾ, ಯಥರ್ವ್​, ಸಹೋದರಿ ನಂದಿನಿ ಹಾಗೂ ಕುಟುಂಬದ ಇತರರ ಜತೆ ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್​​ಗೆ   ತೆರಳಿದ್ದರು. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ಲಕ್ಷಲಕ್ಷ ವೀಕ್ಷಣೆ ಕಾಣುತ್ತಿದೆ.

ರಾಧಿಕಾ ಪಂಡಿತ್ ಅವರು ಅನಿಮಲ್ ಪಾರ್ಕ್ ತೆರಳಿದ ದಿನ ಗಿಳಿ ಜತೆಗಿನ ಪೋಟೋ ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಯಶ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಬೇರೆಬೇರೆ ಪ್ರಾಣಿ, ಪಕ್ಷಿ ಹಾಗೂ ಕೀಟಗಳ ಜತೆ ಯಶ್ ಹಾಗೂ ಅವರ ಕುಟುಂಬ ಸಮಯ ಕಳೆದಿದೆ. ಈ ಅನಿಮಲ್ ಪಾರ್ಕ್ ​ಅನ್ನು ಸಂಜೀವ್ ಅವರು ನಡೆಸುತ್ತಿದ್ದಾರೆ. ಅವರ ಬಗ್ಗೆ ಯಶ್ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಯಶ್ ಥಿಯರಿಯನ್ನೇ ಫಾಲೋ ಮಾಡಿದ ಅಲ್ಲು ಅರ್ಜುನ್; ಏನಿದರ ಸೀಕ್ರೆಟ್?

ಸಿನಿಮಾ ವಿಚಾರಕ್ಕೆ ಬರುವುದಾದರೆ, ದೊಡ್ಡ ದೊಡ್ಡ ಸ್ಟಾರ್​ಗಳ ಬಗ್ಗೆ ದಿನಕ್ಕೊಂದು ಹೊಸಹೊಸ ಮಾಹಿತಿ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಅದರಲ್ಲೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಹುಟ್ಟಿಕೊಳ್ಳುವ ವದಂತಿಗಳು ಒಂದೆರಡಲ್ಲ. ಯಶ್ ಅವರು ನರ್ತನ್ ಜತೆ ಕೈ ಜೋಡಿಸುತ್ತಿದ್ದಾರೆ ಎಂಬ ಸುದ್ದಿ ಮೊದಲಿನಿಂದಲೂ ಇದೆ. ಆದರೆ, ಇದನ್ನು ಯಶ್ ಅವರಾಗಲೀ, ನರ್ತನ್ ಅವರಾಗಲೀ ಖಚಿತಪಡಿಸಿಲ್ಲ. ಹೀಗಿರುವಾಗಲೇ ರಾಕಿಂಗ್​ ಸ್ಟಾರ್​ಗೆ ನಟಿ ಪೂಜಾ ಹೆಗ್ಡೆ ಜೊತೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವದಂತಿಗೆ ಈಗ ಬ್ರೇಕ್ ಬಿದ್ದಿದೆ.

ಪೂಜಾ ಹೆಗ್ಡೆ ಅವರನ್ನು ಯಶ್ ತಂಡ ಅಪ್ರೋಚ್ ಮಾಡಿಲ್ಲ ಎಂಬುದು ಖಚಿತವಾಗಿದೆ. ‘ಯಶ್ ಚಿತ್ರಕ್ಕೆ ಪೂಜಾ ನಾಯಕಿ ಆಗಲಿದ್ದಾರೆ ಅನ್ನೋದು ಕೇವಲ ವದಂತಿ’ ಎಂದು ಮೂಲಗಳು ಖಚಿತ ಪಡಿಸಿವೆ. ಈ ಮೂಲಕ ಒಂದು ದೊಡ್ಡ ವದಂತಿಗೆ ಬ್ರೇಕ್ ಬಿದ್ದಂತೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada