Radhika Pandit: ‘ನೂರಾರು ಮಕ್ಕಳ ಜೀವ ಉಳಿಸಬಲ್ಲದು’; ಎದೆಹಾಲು ದಾನದ ಬಗ್ಗೆ ರಾಧಿಕಾ ಪಂಡಿತ್ ವಿಶೇಷ ಸಂದೇಶ

Breast Milk Donation: ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಅವರು ಎದೆಹಾಲು ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ರಾಧಿಕಾ ಮಾತನಾಡಿದ್ದಾರೆ.

Radhika Pandit: ‘ನೂರಾರು ಮಕ್ಕಳ ಜೀವ ಉಳಿಸಬಲ್ಲದು’; ಎದೆಹಾಲು ದಾನದ ಬಗ್ಗೆ ರಾಧಿಕಾ ಪಂಡಿತ್ ವಿಶೇಷ ಸಂದೇಶ
ರಾಧಿಕಾ ಪಂಡಿತ್ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Mar 23, 2022 | 7:47 PM

ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಚಿತ್ರರಂಗದೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡವರು. ಪ್ರಸ್ತುತ ಸಿನಿ ರಂಗದಿಂದ ತುಸು ಬ್ರೇಕ್ ತೆಗೆದುಕೊಂಡಿರುವ ಅವರು, ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಆದರೆ ನಟಿ ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ‘ಎದೆಹಾಲು ದಾನ’ದ (Breast Milk Donation) ಬಗ್ಗೆ ಜನರಿಗೆ ಅರಿವು ಮೂಡಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ‘‘ಎಲ್ಲಾ ಮಕ್ಕಳ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಆದರೆ ಹಲವು ಕಾರಣದಿಂದ ಶಿಶುಗಳು ಸ್ತನ್ಯಪಾನದಿಂದ ವಂಚಿತರಾಗುತ್ತಾರೆ’’ ಎಂದಿರುವ ನಟಿ, ಅಗತ್ಯವಿರುವ ಶಿಶುಗಳಿಗೆ ಎದೆಹಾಲು ದಾನ ಹೇಗೆ ಪ್ರಯೋಜನಕಾರಿಯಾಗಲಿದೆ ಎನ್ನುವುದನ್ನು ವಿವರಿಸಿದ್ದಾರೆ. ‘ಎದೆಹಾಲು ಬ್ಯಾಂಕ್​’ಗಳ ಮಹತ್ವ ತಿಳಿಸಿರುವ ರಾಧಿಕಾ, ಈ ಮೂಲಕ ಅವರು ಸಮಾಜದಲ್ಲಿ ಅರಿವು ಮೂಡಿಸುವ ಯತ್ನಕ್ಕೆ ಮುಂದಾಗಿದ್ದಾರೆ.

ವಿಡಿಯೋ ಸಂದೇಶದಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?

ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಬರೆದುಕೊಂಡಿದ್ದಾರೆ. ಇದರೊಂದಿಗೆ ತಾವು ಮಾತನಾಡಿರುವ ವಿಡಿಯೋ ಸಂದೇಶವನ್ನು ಕೂಡ ಹಂಚಿಕೊಂಡಿದ್ದಾರೆ. ರಾಧಿಕಾ ಮಾತಿನ ಸಾರಾಂಶ ಇಲ್ಲಿದೆ.

‘‘ಬದುಕಿನ ಅತ್ಯಂತ ಮಹತ್ವಪೂರ್ಣ ಉಡುಗೊರೆಗಳಲ್ಲಿ ಎದೆಹಾಲು ಮುಖ್ಯವಾದದ್ದು.ಎದೆಹಾಲಿನಲ್ಲಿ ಇರುವ ಅಂಶಗಳನ್ನು ಯಾವುದಕ್ಕೂ ಹೋಲಿಸಲು ಆಗುವುದಿಲ್ಲ. ಎಳೆ ಮಕ್ಕಳಿಗೆ ಇದು ಬಹಳ ಮುಖ್ಯ. ಅದರಲ್ಲಿ ಸಿಗುವ ಪೋಷಕಾಂಶಗಳು ಅಥವಾ ರೋಗ ನಿರೋಧಕ ಗುಣವನ್ನು ಮತ್ಯಾವುದೂ ನೀಡುವುದು ಸಾಧ್ಯವಿಲ್ಲ’’

‘‘ಆದರೆ ಕೆಲವು ಸಂದರ್ಭಗಳಲ್ಲಿ ತಾಯಂದಿರಲ್ಲಿ ಅಗತ್ಯವಾಗಿದ್ದಷ್ಟು ಹಾಲು ಉತ್ಪಾದನೆಯಾದೇ ಇರಬಹುದು. ಅಂತಹ ತಾಯಂದಿರ ಮಕ್ಕಳಿಗೆ ಸಹಾಯವಾಗುವ ದೃಷ್ಟಿಯಿಂದ ‘ಎದೆಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಲಾಗಿದೆ. ಯಾರು ಸಶಕ್ತರೋ ಅವರು ಎದೆಹಾಲನ್ನು ದಾನ ಮಾಡಬಹುದು. ನಿಮ್ಮ ಜಿಲ್ಲೆಗಳಲ್ಲಿರುವ ಮಿಲ್ಕ್ ಬ್ಯಾಂಕ್​ಗಳಲ್ಲಿ ದಾನ ಮಾಡಬಹುದು. ಇದು ಅಗತ್ಯವಿರುವವರಿಗೆ ಸಹಾಯವಾಗಲಿದೆ’’ ಎಂದು ಸಂದೇಶ ನೀಡಿದ್ದಾರೆ ರಾಧಿಕಾ ಪಂಡಿತ್. ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಎಂದು ನಟಿ ಕೋರಿಕೊಂಡಿದ್ದಾರೆ.

ಅಭಿಯಾನದ ಕುರಿತು ರಾಧಿಕಾ ಪಂಡಿತ್ ವಿಡಿಯೋ ಸಂದೇಶ ಇಲ್ಲಿದೆ:

‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಉದ್ದೇಶದಿಂದ ಮಾರ್ಚ್ 27ರಂದು ಬೆಂಗಳೂರಿನಲ್ಲಿ ಒಂದು ವಾಕಥಾನ್ ಕೂಡ ಆಯೋಜಿಸಲಾಗಿದೆ. ರಾಧಿಕಾ ಪಂಡಿತ್ ಹಂಚಿಕೊಂಡಿರುವ ಸಂದೇಶಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ:

ಟ್ರೆಂಡ್ ಆಯ್ತು Boycott RRR; ಕನ್ನಡ ಆವೃತ್ತಿ ಪ್ರದರ್ಶನದ ಬಗ್ಗೆ ಸ್ಪಷ್ಟನೆ ನೀಡಿದ ವಿತರಕರು

ಮಾಲ್ಡೀವ್ಸ್​​ನಲ್ಲಿ ವಿಹರಿಸುತ್ತಿರುವ ಸನ್ನಿ ಲಿಯೋನ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ