‘ಬಡ್ಡೀಸ್’ ಸಿನಿಮಾ ಪ್ರಚಾರ ವಾಹನಕ್ಕೆ ಅಪಘಾತ; ‘ದೃಷ್ಟಿ ಜಾಸ್ತಿನೆ ಆಗಿರಬೇಕು’ ಎಂದ ನಟ ಕಿರಣ್ ರಾಜ್
ಇಂದಿನ ಶೆಡ್ಯೂಲ್ ಪ್ರಕಾರ ದಾವಣಗೆರೆ ಸಮೀಪದ ಕೆಲ ಕಾಲೇಜುಗಳಿಗೆ ‘ಬಡ್ಡೀಸ್’ ತಂಡ ತೆರಳಬೇಕಿತ್ತು. ಆದರೆ, ಪ್ರಚಾರ ಕಾರ್ಯದಲ್ಲಿ ಬಳಕೆ ಆಗುತ್ತಿದ್ದ ಟ್ರಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಹೀಗಾಗಿ, ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಕಿರಣ್ ರಾಜ್ (Kiran Raj) ಹೆಸರು ಕಿರುತೆರೆ ಲೋಕದಲ್ಲಿ ತುಂಬಾನೇ ಫೇಮಸ್. ಅವರು ಈಗ ಹಿರಿತೆರೆಯಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಸಂಪೂರ್ಣ ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾ ‘ಬಡ್ಡೀಸ್’ (Buddies Movie) ಜೂನ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಮೋಷನಲ್ ಕಾರ್ಯದಲ್ಲಿ ಕಿರಣ್ ರಾಜ್ ಬ್ಯುಸಿ ಆಗಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಇಂದು (ಜೂನ್ 18) ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಅವಘಡ ಒಂದು ಸಂಭವಿಸಿದೆ. ಈ ಬಗ್ಗೆ ಕಿರಣ್ ರಾಜ್ ಮಾಹಿತಿ ನೀಡಿದ್ದಾರೆ.
ಶೆಡ್ಯೂಲ್ ಪ್ರಕಾರ ದಾವಣಗೆರೆ ಸಮೀಪದ ಕೆಲ ಕಾಲೇಜುಗಳಿಗೆ ‘ಬಡ್ಡೀಸ್’ ತಂಡ ತೆರಳಬೇಕಿತ್ತು. ಆದರೆ, ಪ್ರಚಾರ ಕಾರ್ಯದಲ್ಲಿ ಬಳಕೆ ಆಗುತ್ತಿದ್ದ ಟ್ರಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಹೀಗಾಗಿ, ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಫ್ಯಾನ್ಸ್ಗೆ ನಿರಾಸೆ ಮಾಡಿದ್ದಕ್ಕಾಗಿ ಅವರ ಬಳಿ ಕಿರಣ್ ರಾಜ್ ಕ್ಷಮೆ ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಘಟನೆ ಬಗ್ಗೆ ವಿವರಿಸಿದ್ದಾರೆ.
‘ಹಾಯ್ ಎಲ್ಲರಿಗೂ ನಮಸ್ಕಾರ. ಈ ದಿನ ಇಷ್ಟು ಕಾಲೇಜ್ಗಳಿಗೆ ಹೋಗುವುದಿತ್ತು. ಬಹುಶಃ ದೃಷ್ಟಿ ಜಾಸ್ತಿನೆ ಆಗಿರಬೇಕು ಅನ್ಸುತ್ತೆ. ಹಾಗಾಗಿ ಈ ತರಹ ಅನಿರೀಕ್ಷಿತ ಘಟನೆ ಸಂಭವಿಸಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ನಮ್ಮ ಪ್ಲ್ಯಾನ್ ಚೇಂಜ್ ಮಾಡಬೇಕಾಯಿತು. ದೇವರ ದಯೆಯಿಂದ ಟೀಮ್ ಅವರಿಗೆ ಯಾವುದೆ ಹಾನಿಯಾಗಿಲ್ಲ. ಎಲ್ಲರೂ ಆರಾಮಾಗಿ ಇದ್ದಾರೆ. ಸಿನಿಮಾ ಬಿಡುಗಡೆಯ ನಂತರ ಥಿಯೇಟರ್ ವಿಸಿಟ್ಗೆ ಬಂದಾಗ ತಮ್ಮೆಲ್ಲರನ್ನೂ ಖಂಡಿತ ಮಿಸ್ ಮಾಡದೆ ಭೇಟಿ ಮಾಡುತ್ತೇವೆ. ದಯಮಾಡಿ ಕ್ಷಮೆ ಇರಲಿ. ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ. ಮಿಸ್ ಮಾಡದೆ ಸಿನಿಮಾ ನೋಡಿ ಹರಸಿ ಹಾರೈಸಿ. ಲವ್ ಯೂ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ ಚಾರ್ಲಿ ಶ್ವಾನ ದತ್ತು ಪಡೆದಿದ್ದು ಕೂಡ ಸಿನಿಮೀಯ ರೀತಿಯಲ್ಲೇ; ಹೊರಬಿತ್ತು ಅಚ್ಚರಿಯ ವಿಚಾರ
ಈ ಪೋಸ್ಟ್ಗೆ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ಕೆಲವರು ಕಿರಣ್ ರಾಜ್ ಅವರ ಬಳಿ ಆರೋಗ್ಯವಾಗಿರಿ ಎಂದು ಹೇಳಿದರೆ ಇನ್ನೂ ಕೆಲವರು ನಿಮ್ಮ ಸಿನಿಮಾಗೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.
View this post on Instagram
‘ಬಡ್ಡೀಸ್’ ಚಿತ್ರಕ್ಕೆ ಗುರು ತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದು, ಭಾರತಿ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಕಿರಣ್ ರಾಜ್ಗೆ ಜೋಡಿಯಾಗಿ ಸಿರಿ ಪ್ರಹ್ಲಾದ್ ನಟಿಸಿದ್ದಾರೆ. ‘ಬಡ್ಡೀಸ್’ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಗೋಪಾಲ ದೇಶಪಾಂಡೆ, ಅರವಿಂದ್ ಬೋಳಾರ್, ಗಿರೀಶ್ ಜಟ್ಟಿ, ಉದಯ್ ಸೂರ್ಯ, ರೋಹನ್ ಸಾಯಿ ಮುಂತಾದವರು ಕೂಡ ನಟಿಸಿದ್ದಾರೆ. ಕಿರಣ್ ರಾಜ್ ಕರಿಯರ್ನಲ್ಲಿ ಈ ಸಿನಿಮಾ ತುಂಬಾನೇ ಮಹತ್ವ ಪಡೆದುಕೊಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:00 pm, Sat, 18 June 22