ಹಲ್ಲಿನ ಚಿಕಿತ್ಸೆ ಪಡೆದ ಯುವ ನಟಿಗೆ ಇಂಥ ದುಸ್ಥಿತಿ; ವೈದ್ಯರ ಎಡವಟ್ಟಿನಿಂದ ಮುಖ ವಿರೂಪ
ಇಂಥ ಎಡವಟ್ಟು ಹೇಗಾಯಿತು? ಬಳಿಕ ಆ ವೈದ್ಯರು ನೀಡಿದ ಉತ್ತರ ಏನು ಎಂಬುದನ್ನು ಸ್ವತಃ ಸ್ವಾತಿ ಅವರು ವಿವರಿಸಿದ್ದಾರೆ.
ಚಂದನವನದಲ್ಲಿ (Sandalwood) ಗುರುತಿಸಿಕೊಳ್ಳಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಯುವ ನಟಿ ಸ್ವಾತಿ ಅವರಿಗೆ ಇಂಥ ದುಸ್ಥಿತಿ ಎದುರಾಗಿದೆ. ಕ್ಯಾಮೆರಾ ಮುಂದೆ ಅಂದವಾಗಿ ಕಾಣಬೇಕು ಎಂದು ಕನಸು ಕಂಡ ಅವರು ಈಗ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಅದಕ್ಕೆ ಕಾರಣ ಆಗಿರುವುದು ವೈದ್ಯರ ಎಡವಟ್ಟು. ಹೌದು, ಹಲ್ಲಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರು ತೆರಳಿದ್ದರು. ರೂಟ್ ಕೆನಾಲ್ (Root Canal) ಮಾಡಿಸಿಕೊಂಡ ಬಳಿಕ ಅವರ ಮುಖ ಊದಿಕೊಂಡಿದೆ. ಯಾಕೆ ಹೀಗಾಯ್ತು ಎಂದು ಬೇರೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಸತ್ಯ ಬಹಿರಂಗ ಆಗಿದೆ. ಚಿಕಿತ್ಸೆ ನೀಡುವ ಸಮಯದಲ್ಲಿ ವೈದ್ಯರು ಸರಿಯಾದ ಕ್ರಮ ಪಾಲಿಸದ ಕಾರಣ ಸ್ವಾತಿ ಮುಖಕ್ಕೆ ಹಾನಿ ಆಗಿದೆ. ಇದು ಹೇಗಾಯಿತು? ಬಳಿಕ ಆ ವೈದ್ಯರು ನೀಡಿದ ಉತ್ತರ ಏನು ಎಂಬುದನ್ನು ಸ್ವತಃ ಸ್ವಾತಿ ಅವರು ವಿವರಿಸಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.