AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ

 ಹರ್ಷ ಹಾಗೂ ಪ್ರಸಿದ್ದ್ ಜತೆಯಾಗಿ ಕೆಲಸ ಮಾಡುತ್ತಿರುವ ಹೊಸ ಸಿನಿಮಾಗೆ ಇತ್ತೀಚೆಗೆ ಸ್ಕ್ರಿಪ್ಟ್ ಪೂಜೆ ನಡೆಯಿತು. ಬೆಂಗಳೂರಿನ ಬಂಡಿಮಹಾಕಾಳಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು.

ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ
ಕಿರಣ್ ರಾಜ್ ಆ್ಯಂಡ್ ಟೀಂ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Apr 13, 2022 | 1:19 PM

Share

ನಟ ಕಿರಣ್ ರಾಜ್ ಅವರಿಗೆ (Kiran Raj) ಬೇಡಿಕೆ ಹೆಚ್ಚುತ್ತಲೇ ಇದೆ. ‘ಕನ್ನಡತಿ’ ಧಾರಾವಾಹಿಯಲ್ಲಿ (Kanndathi Serial) ಹರ್ಷನ ಪಾತ್ರದ ಮೂಲಕ ಅನೇಕರಿಗೆ ಹತ್ತಿರವಾದರು ಕಿರಣ್. ಈ ಪಾತ್ರವನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ. ಅನೇಕರು ಕಿರಣ್ ರಾಜ್​ ಅವರನ್ನು ಹರ್ಷ ಎಂದೇ ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಈ ಪಾತ್ರದ ಜನಪ್ರಿಯತೆ ಹಬ್ಬಿದೆ. ಕಿರುತೆರೆಯಲ್ಲಿ ನಟಿಸಿದ ನಂತರ ಅವರಿಗೆ ಹಿರಿತೆರೆಯಿಂದಲೂ ಬೇಡಿಕೆ ಬರೋಕೆ ಆರಂಭವಾಯಿತು. ‘ಭರ್ಜರಿ ಗಂಡು’ ಸಿನಿಮಾದಲ್ಲಿ (Bharjari Gandu) ಕಿರಣ್ ರಾಜ್ ನಟಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಪ್ರಸಿದ್ದ್​ ಜತೆ ಮತ್ತೊಂದು ಸಿನಿಮಾ ಮಾಡೋಕೆ ಕಿರಣ್ ರಾಜ್ ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.

‘ಭರ್ಜರಿ ಗಂಡು’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಧಾರಾವಾಹಿಯಲ್ಲಿ ಕಿರಣ್​ ರಾಜ್​ ಲವರ್ ಬಾಯ್​ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಭರ್ಜರಿ​ ಗಂಡು’ ಚಿತ್ರದಲ್ಲಿ ಅವರ ಸ್ಟೈಲ್​, ಲುಕ್​ ಸಂಪೂರ್ಣ ಭಿನ್ನವಾಗಿದೆ. ಅವರ ಮೈಕಟ್ಟು ನೋಡಿ ಅನೇಕರು ಫಿದಾ ಆಗಿದ್ದಾರೆ. ಚಿತ್ರದ ಕೆಲಸಗಳು ಪ್ರಗತಿಯಲ್ಲಿರುವಾಗಲೇ ಕಿರಣ್ ರಾಜ್ – ಪ್ರಸಿದ್ದ್ ಕಾಂಬಿನೇಶನ್ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ.

ಹರ್ಷ ಹಾಗೂ ಪ್ರಸಿದ್ದ್ ಜತೆಯಾಗಿ ಕೆಲಸ ಮಾಡುತ್ತಿರುವ ಹೊಸ ಸಿನಿಮಾಗೆ ಇತ್ತೀಚೆಗೆ ಸ್ಕ್ರಿಪ್ಟ್ ಪೂಜೆ ನಡೆಯಿತು. ಬೆಂಗಳೂರಿನ ಬಂಡಿಮಹಾಕಾಳಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು. ಪ್ರಸಿದ್ದ್ ಫಿಲಂ ಲಾಂಛನದಲ್ಲಿ ‘ಭರ್ಜರಿ ಗಂಡು’ ಚಿತ್ರ ನಿರ್ಮಾಣಗೊಂಡಿದೆ. ಈಗ ಅದೇ ಬ್ಯಾನರ್​​ನಲ್ಲಿ ಈ ಹೊಸ ಸಿನಿಮಾ ನಿರ್ಮಾಣ ಆಗಲಿದೆ. ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.

ಈ ಸಿನಿಮಾದಲ್ಲಿ ಮಾಸ್​ ಆ್ಯಕ್ಷನ್ ಇರಲಿದೆ. ಹೊಸ ಸಿನಿಮಾದಲ್ಲಿ ಕಿರಣ್ ರಾಜ್ ಪಕ್ಕಾ ಲೋಕಲ್ ಹುಡುಗನ ಪಾತ್ರದಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ. ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸುರೇಖ ಅಭಿನಯಿಸಲಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಶೀರ್ಷಿಕೆ ಸಹ ಅನಾವರಣಗೊಳ್ಳಲಿದೆ.

ಸುದರ್ಶನ್ ಸುಂದರರಾಜ್ ನಿರ್ಮಿಸುತ್ತಿರುವ ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ ಹಾಗೂ ವೆಂಕಿ ಯುಡಿವಿ ಅವರ ಸಂಕಲನ ಇರಲಿದೆ.

ಕಿರಣ್ ರಾಜ್ ನಟಿಸುತ್ತಿರುವ ‘ಕನ್ನಡತಿ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿ ಎಂಗೇಜ್​ಮೆಂಟ್ ನಡೆದಿದೆ. ಭುವಿಯನ್ನು ಹತ್ಯೆ ಮಾಡಲು ಸುಫಾರಿ ನೀಡಲಾಗಿದೆ. ಧಾರಾವಾಹಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ದ್ವೇಷ ಮಾಡೋಕೆ ಶುರು ಮಾಡಿದ್ರೆ, ದ್ವೇಷಿಸಿದವನ ಹೃದಯ ನಿಲ್ಲೋವರೆಗೂ ಬಿಡಲ್ಲ’; ಕಿರಣ್ ರಾಜ್ ಮಾಸ್​ ಎಂಟ್ರಿ

 ‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ